ಈ ಪುಟವನ್ನು ಪರಿಶೀಲಿಸಲಾಗಿದೆ
ಮೃತ್ಯುಂಜಯ ೨೬೫
ಭೇಟಿಯಾಗಿ ಮುನ್ನಾ ದಿನವಷ್ಟೆ ಮೆಂಫಿಸಿಗೆ ಮರಳಿದ್ದ ಮಹಾಮಂದಿರದ ಹಿರಿಯ ದೇವಸೇವಕರಲ್ಲೊಬ್ಬ. ಅದನ್ನು ಕೇಳಿ ಇನೇನಿಯ ಮನಸ್ಸು ಅರಳಿತ್ತು. ಅರಮನೆಯ ದೇವಮಂದಿರದಲ್ಲಿ ಪ್ರತಿಯೊಂದೂ ಚೊಕ್ಕಟವಾಗಿದ್ದು ದನ್ನು ಕಂಡು ఆತ ಹರ್ಷಿತನಾದ. ತನ್ನನ್ನು ಕಂಡೊಡನೆ ಯಾವಾಗಲೂ ಮೂಲೆ ಸೇರುತ್ತಿದ್ದ ಮೆನ್ನ ಇಂದು ಪ್ರಾಂಗಣದಲ್ಲಿ ಕುಳಿತಿದ್ದ! ಇನೇನಿಗೆ ಅಚ್ಚರಿ. ಆತನನ್ನು ಉದ್ದೇಶಿಸಿ ಅವನೆಂದ : “ಮೆನ್ನ, ಸೆತ್ ನನ್ನು ಮರೆತು ಒಸೈರಿಸನ ಸೇವೆ ಮಾಡ್ತಿದೀಯಾ? ಇದೇ ರೀತಿ ನೀನು ಸುಧಾರಿಸ್ತಾ ಹೋದರೆ ಮಹಾ ಅರ್ಚಕರು ನಿನ್ನನ್ನು ಕ್ಷಮಿಸಲೂ ಬಹುದು ಅಂತೇನೆ.” ಆ ಮಾತು ಕೇಳಿಸಲಿಲ್ಲವೆನ್ನುವಂತೆ ಮೆನ್ನ ಸುಮ್ಮನಿದ್ದ, ಅರ್ಚಕ ಮುಂದುವರಿಸಿದ : “ನದೀತಟಕ್ಕೆ ಹೋಗಿ ಆ ಕೆಟ್ಟ ಹಾಡು ಹಾಡೋದು ಈಗ ಬಿಟ್ಭಿಟ್ಟಿದ್ದೀಯಂತೆ." ಮೆನ್ನ ತುಟಿಗಳನ್ನು ಅಗಲಿಸಿ, ಎರಡು ಹಲ್ಲುಗಳು ಬಿದ್ದು ತೆರಪಾಗಿದ್ದ ಸ್ಥಳಕ್ಕೆ ಕಿರು ಬೆರಳು ತುರುಕಿಸಿ ಹೊರತೆಗೆದು, ನಕ್ಕು, ಗುಣ ಗುಣಿಸಿದ : "ఇంದು ಯಾರೊಡನೆ ನಾ ಮಾತಾಡಲೀ...." “ಏಳಲ್ಲಿಂದ ! ಇನ್ನೂ ಪೂರ್ತಿ ಹುಚ್ಚು ಬಿಟ್ಟಿಲ್ಲ...." ఎంದ ಇನೇನಿ. ....ಮುಚ್ಚಂಜೆ ಪೂಜೆ ಮುಗಿಸಿ ಅರ್ಚಕ ಗರ್ಭಗುಡಿಯ ಬಾಗಿಲೆಳೆದು ಕೊಂಡು, ಕೊಂಡಿಗೆ ಆವೆಮಣ್ಣು ಮೆತ್ತಿ ಮುದ್ರೆಯೊತ್ತುತಿದ್ದಂತೆ, ಬಟಾ ಅಲ್ಲಿಗೆ ಬಂದ. ಅವನ ವಂದನೆಗೆ ಉತ್ತರವಾಗಿ, “ಏನಪ್ಪ?” ಎಂದು ಕೇಳಿದ, ಇನೇನಿ. “ನಮ್ಮ ಔಟನಿಗೆ ನೆಗಡಿ ಗಂಟಲು ನೋವು. ಏನಾದರೂ ಕೊಡ್ತೀರಾ?” “ಯಾವತ್ನಿಂದ ?"