ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
ಇನೇನಿ ತಟ್ಟೆಯ ಎದುರು ಸಹಾಯಕ ಹಾಸಿದ ಚಿರತೆ ಚರ್ಮದ ಮೇಲೆ ಕುಳಿತು, “ನಿನ್ನ ಹೆಸರೇನು ?” ಎಂದು ಕೇಳಿದ. ಅರಮನೆಯ ಆ ಕೆಲಸಗಾರ್ತಿ ಆಂದಳು : “ಶೀಬಾ ಅಯ್ಯ,” “ಯಾರವಳು ನೀನು ?” “ಕಸಾಯಿ ಮನೇಲಿ ಕೆಲಸ ಮಾಡ್ತೇನೆ. ಗಂಡ ದಂಡಿನಲ್ಲಿದ್ದಾನೆ.” “ಕಸಾಯಿ ಮನೇಲಿ. ಅದಕ್ಕೇ ಮೈ ತುಂಬಿಕೊಡು ಆರೋಗ್ಯವಾಗಿ ದ್ದೀಯಾ! ನೀನು ಔಷಧಿಗೆ ಬರುತ್ತಿರೋದು ಇದೇ ಮೊದಲ್ನೇ ಸಲ ಅಲ್ಲ ?” "ಹೌದು, ಅಯ್ಯ.” ಇನೇನಿ ಮಗುವಿನ ಹಣೆಯನ್ನೂ ಎದೆಯನ್ನೂ ಸ್ಪರ್ಶಿಸಿ, ಆದೇ ಬೆರಳು ಗಳಿಂದ ತಟ್ಟೆಯಲ್ಲಿದ್ದ ಸಾಮಗ್ರಿಗಳನ್ನು ಮುಟ್ಟಿದ. “ಮಗೂನ ಕೆಳಗೆ ಮಲಗಿಸಿ, ನೀನು ಮಂಡಿಯೂರಿ ಕೂತ್ಕೋ.” ಆಕೆ ಮಂಡಿಯೂರಿದ ಬಳಿಕ ಇನೇನಿ ಮಾತನಾಡಿದ್ದೆಲ್ಲ, ಎರಡು ಕವಡೆ ಸರಗಳಿಂದ ಅಲಂಕೃತವಾಗಿದ್ದ ಅವಳ ವಕ್ಷಸ್ಥಲದೊಡನೆ. ”ಏನು ಹೆಸರು ಮಗೂದು ?” “ಮಗ ಅಂತ ಕರೀತೇನೆ. ಗಂಡ ಬಂದ್ಮೇಲೆ ಹೆಸರಿಡೋಣ ಅಂತ....” “ದಂಡು ಸೇರಿದ್ದು ಯಾವಾಗ?" “ಒಂದು ವರ್ಷ ಆಯ್ತು.” "ಹುಂ. ಹಾಗೆ ಕೂತಿರು....” ಬೆಕ್-ಔಟರ ಮೇಲೆ ಇನೇನಿಗೆ ಒಂದು ಕ್ಷಣ ಸಿಟ್ಟು ಬಂತು. ಅವನು ಛಾವಣಿಯತ್ತ ನೋಡಿ, “ಜಗದ್ರಕ್ಷಕ ಪ್‍ಟಾ, ಸರ್ವಜನ ಪೂಜಿತ ಪ್‍ಟಾ” ಎಂದು ಆರಂಭಿಸಿ ಒಂದು ಸ್ತೋತ್ರ ಪಠಿಸಿದ. ಐಗುಸ್ತದ ಬಹುಜನಸಮುದಾಯಕ್ಕೆ ಅರ್ಥವಾಗದ ದೇವ ಭಾಷೆ ಅದು . (ಹಿರಿಯ ದೇವಸೇವಕರಿಗಷ್ಟೇ ಅದರ ಪರಿಜ್ಞಾನ.)
ಸ್ತೋತ್ರ ಪಠಿಸಿ ಮೇಲೆದ್ದು ಇನೇನಿ, ಬೆಕ್-ಔಟರನ್ನು ದುರುಗುಟ್ಟಿ ನೋಡಿ, ಒಂದು ಕೊಠಡಿಯ ಬಾಗಿಲು ತೆರೆದ. ಅಲ್ಲಿ ಕತ್ತಲು. ಹೊರಗಿನಿಂದ ಒಳಕ್ಕೆ ನುಸುಳಿದ ಬೆಳಕಿನಲ್ಲಿ ಅವನ ಆಕೃತಿ ಮುಬ್ಬಾಗಿ ಕಂಡಿತು. (ಕತ್ತಲು