ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
ಕೊಠಡಿಯಲ್ಲಿ ಇನೇನಿ, ಭದ್ರವಾಗಿ ಮುಚ್ಚಿದ್ದ ಒಂದು ಜಾಡಿಗೆ ಬಳಪದ
ಸೌಟು ತುರುಕಿ ರಂಜಕದ ಪುಡಿಯನ್ನು ಹೊರತೆಗೆದು ಜಾಡಿಯ ಮುಚ್ಚಳವನ್ನು
ಬಿಗಿಗೊಳಿಸಿದ, ಬಾಗಿಲಿನ ಎದುರಿನ ಗೋಡೆಯಲ್ಲಿ ಎರಡು ಕಿಂಡಿಗಳಲ್ಲಿದ್ದ
ತಾಮ್ರದ ತಟ್ಟೆಗಳಿಗೆ ಆ ಪುಡಿಯನ್ನು ಸುರುವಿದ.ಹನೆಯ ಸ್ಪರ್ಶದಿಂದ
ರಂಜಕ ನಿಧಾನವಾಗಿ ಜ್ವಲಿಸತೊಡಗಿತು.) ಹೊಗೆ ಮುಸುಕಿದ ಕೊಠಡಿ.
ಪಡಸಾಲೆಗೂ ಹೊಗೆ ಧಾವಿಸಿತು. ಔಟ ಮತ್ತು ಬೆಕ್ ಮೂಗುಗಳನ್ನು
ಬರಿದುಗೊಳಿಸಲು ಪದೇ ಪದೇ ಹೊರಗೆ ಮನೆಯ ಮೂಲೆಗೆ ನಡೆದರು. ನೀಲಿ
ಬೆಳಕಿನ ಎರಡು ಉಂಡೆಗಳ ನಡುವೆ ಮಂತ್ರಪಠಣವನ್ನು ಮತ್ತಷ್ಟು ತೀವ್ರ ಗೊಳಿಸಿದ .
ಪಡಸಾಲಯಿಂದ ಭವ್ಯವಾಗಿ ಕಂಡಿತು ಆ ನೋಟ . ಹೊಗೆ
ಉಸಿರು ಕಟ್ಟಿಸಿದರೂ ಅಳಲಾರದೆ ಮಲಗಿತ್ತು, ಜ್ವರದಲ್ಲಿ ದಹಿಸುತ್ತಿದ್ದ ಮಗು.
ಅದರ ತಾಯಿ ಮಂಕಾಗಿ ದಂಗಾಗಿ, ಮಾಯಾಮಂತ್ರದ ಬಂದಿಯಾದಳು.
ಕಣ್ಣುಗಳನ್ನು ತುಸು ಒರೆಸಿಕೊಂಡು ಮಂತ್ರ ಪಠಿಸುತ್ತ ಇನೇನಿ ಹೊರ ಬಂದು
ಹೆಣ್ಣಿನ ಎದುರು ನಿಂತ.
“ನನ್ನ ಕಡೆ ನೋಡು,” ಎಂದ.
ಕತ್ತೆತ್ತಿದ ಆ ತಾಯಿಯ ದೃಷ್ಟಿ ಆರ್ಚಕನ ಹೃಷ್ಟಪುಷ್ಟ ತೊಡೆಗಳನು ತಾಕಿತು.
"ಮಾಯದ ಬೆಳಕು !ಕಂಡಿಯಾ?"
"ಕಂಡೆ ಅಯ್ಯ."
ತನ್ನ ತೋರುಬೆರಳನ್ನು ಎತ್ತಿಹಿಡಿದು ಅರ್ಚಕ ಗಟ್ಟಿಯಾಗಿ ಅಂದ ;
“ಮಗೂಗೆ ಹಿಂಸೆ ಕೊಡುತ್ತಿರೋ ಪೀಡೆಯೇ,ನಿನಗೆ ಹಿಡಿ ಶಾಪ ಹೋರಸ್‍ನ
ಕಣ್ಣಿನ ಬೆಂಕಿ ನಿನ್ನ ಮೇಲಿದೆ ; ಆದು ನಿನ್ನನ್ನು ಸುಡ್ತಿದೆ ;ನಿನ್ನನು ಇರೀತಿದೆ,
ಚುಚ್ತಿದೆ ,ತಿನ್ತಿದೆ;ನಿನ್ನನು ಸುಟ್ಟು ಬೂದಿ ಮಾಡ್ತಿದೆ;ಸಂಪೂರ್ಣ ವಾಗಿ
ನಾಶ ಮಾಡ್ತಿದೆ ."
ಸ್ವರ ತಗ್ಗಿಸಿ ಇನೇನಿ ಸೂಚನೆ ಇತ್ತ :
"ನಾನು ಒಂದೊಂದೇ ಮಾತು ಹೇಳ್ತಾ ಹೋದ ಹಾಗೆ, ನೀನೂ ಅದನ್ನು ಹೇಳ್ಬೇಕು.
ಅರ್ಥವಾಯ್ತಾ ? ಎಲ್ಲಿ ಹೇಳು : ಇರುಳಲ್ಲಿ