ಪುಟ:Mrutyunjaya.pdf/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

      ಬರುವವನೆ....”
                ಆಕೆ ಅನುಮಾನಿಸಿದಳು. ನಾಲಿಗೆ ಹೊರಳಲಿಲ್ಲ.
                ಇನೇನಿ ಪುನಃ ಅಂದ :
               “ಹಾಂ...ಇರುಳಲ್ಲಿ ಬರುವವನೆ....” 
               ತೊದಲುತ್ತ ಆಕೆ ಆಂದಳು :
              “ಹಾಂ...ಇರುಳಲ್ಲಿ ಬರುವವನೆ....”
              “ಕಳ್ಳತನದಲ್ಲಿ ಒಳನುಗ್ಗುವವನೆ....” 
              “ಕಳ್ಳತನದಲ್ಲಿ....”
              “ಒಳನುಗ್ಗುವವನೆ....”
              “ಒಳನುಗ್ಗುವವನೆ....”
              “ಹೊರಟುಹೋಗು !”
              "ಹೊರಟುಹೋಗು!"
              "ಮಗುವನ್ನು ಚುಂಬಿಸುವುದಕ್ಕೆ ಬರುತೀಯಾ ?”
             “ಮಗುವನ್ನು ಚುಂಬಿಸುವುದಕ್ಕೆ ಬರುತೀಯಾ ?”
             “ಅವನನ್ನು ಚುಂಬಿಸುವುದಕ್ಕೆ ನಾನು ಬಿಡುವುದಿಲ್ಲ."
            “ಅವನನ್ನು ಚುಂಬಿಸುವುದಕ್ಕೆ ನಾನು ಬಿಡೋದಿಲ್ಲ.”
            “ನನ್ನಿಂದ ಅವನನ್ನು ಕಸಿದುಕೊಂಡು ಹೋಗಲು ನಾನು ಬಿಡಲಾರೆ.”
            “ನನ್ನಿಂದ ಅವನನ್ನು ಕಸಕೊಂಡು ಹೋಗಲು....”
            "ನಾನು ಬಿಡಲಾರೆ"
            ಗಟ್ಟಿಯಾಗಿ ತಾಯಿ ಅಂದಳು :
            “ನಾನು ಬಿಡಲಾರೆ....”
           “ನೋವುಂಟುಮಾಡೋ ಬೇರಿನಿಂದ_____” 
          "ನೋವುಂಟುಮಾಡೋ ಬೇರಿನಿಂದ______" 
          “ನಿನಗೆ ಹಾನಿಕರವಾದ ಈರುಳ್ಳಿಯಿಂದ____"
          “ನಿನಗೆ ಹಾನಿಕರವಾದ ಈರುಳ್ಳಿಯಿಂದ_____” 
         “ಬದುಕಿರುವವರಿಗೆ ಸಿಹಿಯಾದ ಸತ್ತವರಿಗೆ ಕಹಿಯಾದ ಜೇನಿನಿಂದ_____”
         “ಬದುಕಿರೋರಿಗೆ ಸಿಹಿಯಾದ...."