ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೭೪ ಮೃತ್ಯುಂಜಯ
ಮೂಗು ಸ್ವಚ್ಛಪಡಿಸಿ, ಬೆಕ್ ಮತ್ತು ಔಟ ಒಳಬಂದರು. ಎದ್ದು ಅತ್ತಿತ್ತ ನಡೆಯುತ್ತಿದ್ದ ಇನೇನಿ ಅಂದ: “ಇನ್ನು ಎರಡು ಮೂರು ದಿವಸದಲ್ಲೇ ನಿಲ್ತದೆ. ಜ್ವರಗಿರ బರೋదిల్ల,ಹೆದರ್ಬೇಡಿ....ಇವತ್ತು ರಾತ್ರೆಯೂ ನಾಳೆ ರಾತ್ರೆಯೂ ಮಲಗೋದಕ್ಕೆ ಮುಂಚೆ ನಿನ್ನೆ ಕೊಟ್ಟ ಬೇರನ್ನೇ ತೇದು ಗಂಟಲಿಗೆ ಲೇಪಿಸಿ....ಪ್ರತಿ ತಿಂಗಳೂ ಭೇದಿಗೆ ತಗೋತಿದೀರಾ ?” ಬೆಕ್ ಉತ್ತರವಿತ್ತ : “ಓಹೋ. ಪ್ರತಿ ತಿಂಗಳೂ, ಮೂರು ದಿವಸ.” “ದಿನವೂ ತಪ್ಪದೆ ಮೂರು ದಿವಸ ?” “ಹೌದು.” “ಅದು ಒಳ್ಳೇ ಅಭ್ಯಾಸ. ಮಹಾ ಅರ್ಚಕರು, ಪೆರೋ, ಅಮಾತ್ಯರು,నాವು ఎల్ల అದೇ ರೀತಿ ಮಾಡ್ತೇವೆ. ಮಹಾಮಂದಿರದಲ್ಲಿ ಹಿರಿಯ ದೇವ ಸೇವಕರು ಒಂದೊದು ವೈದ್ಯಿಕೆಯಲ್ಲಿ ಪರಿಣತಿ ಪಡೆದಿದ್ದಾರೆ. ಕಣ್ಣಿನ ವೈದ್ಯರು, ಕರುಳಿನ ವೈದ್ಯರು, ಗುದದ್ವಾರದ ರಕ್ಷಕರು, ಶರೀರದ್ರವಗಳ ಪರಿಣತರು....ವಿಶೇಷ ಜ್ಞಾನ ಏನೇ ಇರಲಿ, ಒಂದು ವಿಷಯದಲ್ಲಿ ಮಾತ್ರ ಅವರದು ಏಕಾಭಿಪ್ರಾಯ : ಭೇದಿಗೆ ತಪ್ಪದೆ ತಗೊಳ್ತಾ ಇದ್ದರೆ ಹೆಚ್ಚಿನ ರೋಗಗಳು ನಮ್ಮ ಹತ್ತಿರ ಸುಳಿಯೋದೇ ಇಲ್ಲ.” “ನಮ್ಮೂರಿನ ಅರ್ಚಕರು ಕೂಡಾ ಹೀಗೆಯೇ ಹೇಳಿದ್ದಾರೆ.” “ದೇವರಲ್ಲಿ ಭಕ್ತಿ, ಅರ್ಚಕನಲ್ಲಿ ಶ್ರದ್ಧೆ—ಕಾಹಿಲೆ ಬಂದಾಗ ಇಲ್ಲಿ ವಿಶೇಷವಾಗಿ ಬೇಕು." “ಕಾಣಿಕೆ ಏನು ಅಂತ ಕೇಳ್ಕೊಂಡ್ಬನ್ನಿ, ಕೊಡೋಣ ಅಂದಿದ್ದಾರೆ నాಯಕరు." “ನಿಮ್ಮ ನಾಯಕರು ಅಸಾಧಾರಣ ಮನುಷ್ಯ....ಅವರೂ ನೀವೂ ಅರಮನೆಯ ಅತಿಥಿಗಳಾಗಿರುವಾಗ, ನಾನು ಕಾಣಿಕೆ ಕೊಡಿ ಅನ್ನೋದು ಸರಿಯೆ? నానాగి ಏను ಕೇಳೋదిల్ల. ನೀವಾగి ಪ್ರೀತಿಯಿಂದ ಏನು ಕೊಟ್ಟರೂ ತಗೋತೇನೆ. ನಿಮ್ಮ ಪ್ರಾಂತದ ವಸ್ತು. నిಮ್ಮ ನೆನೆಪಿಗೆ. ಎಂಥದಾದರೂ ಆಗ್ತದೆ. ಅವಸರವಿಲ್ಲ....ಇನ್ನೂ ಬಹಳ ದಿನ ಇಲ್ಲಿಯೇ