ಪುಟ:Mrutyunjaya.pdf/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೨೭೫

      ಇರ್ತೀರಿ  ಹ್ಯಾಗೂ.  ನಿಧಾನವಾಗಿ  ಕೊಡಿ."
                 “ಆಗಲಿ, ಬರ್ತೇವೆ.”
                 “ದೇವರು  ನಿಮಗೆ ಒಳ್ಳೇದು ಮಾಡ್ತಾನೆ.”
                  ಹೊರಗೆ ಬಂದ ಔಟ ಮತ್ತು ಬೆಕ್ ದೇವಮಂದಿರದ ಪ್ರಾಂಗಣದಲ್ಲಿ ಮೆನ್ನ ಪೊರಕೆ ಹಿಡಿದು ಕಸ ಗುಡಿಸುತ್ತಿದ್ದುದನ್ನು ಕಂಡರು.     ಇವರು ಅಪರಿಚಿತರು ಎನ್ನುವಂತೆ ಆತ ನಟಿಸಿದ.               
       *             *              *               *                 
                ಬಟಾನ ಅಂಬಿಗರು ಸುದ್ದಿ ತಂದರು. ನುಬಿಯದತ್ತ ಹೊರಟಿದ್ದ ಅಳಿವೆ  ಪ್ರದೇಶದ ಎರಡು ಹೇರು ದೋಣಿಗಳು ಕಟ್ಟೆಯಲ್ಲಿದ್ದುವು.
               ಮೆನೆಪ್ ಟಾನನ್ನು ಬಟಾ ಕೇಳಿದ:
               “ಹೋಗಿ ನೋಡ್ತೇನೆ. ಊರಿಗೇನಾದರೂ ಸುದ್ದಿ ಕಳಿಸೋದು ಸಾಧ್ಯ ವಾಗ್ಬೌದು.”
                “ಏನೂಂತ ಸುದ್ದಿ ಕಳಿಸ್ತೀಯಾ ?”
                 “ರಾಜಾತಿಥ್ಯದಲ್ಲಿ ಸುಖವಾಗಿದ್ದೇವೆ ಅನ್ನಲಾ ?”
               “ಅಮಾತ್ಯರನ್ನೂ ಪೆರೋನನ್ನೂ ಭೇಟಿಯಾಗಿದ್ದೇವೆ ; ಸೆಡ್ ಉತ್ಸವದ ದಿನ ಗೊತ್ತಾಗಿಲ್ಲ; ಎಲ್ಲರೂ ನಿಶ್ಚಿಂತೆಯಾಗಿರಬೇಕು  ಅಂತ...."
                “ನೆಫಿಸ್  ಅಕ್ಕನಿಗೆ ?”
               “ಅವಳಿಗೂ ಅಷ್ಟೆ.    ಊರಿನ ಹಿರಿಯರಿಗೆ ತಿಳಿಸಿಬಿಡ್ಲಿ.”
               “ಔತಣದ ಏರ್ಪಾಟಾಗ್ತಿದೆ; ಇನ್ನೂ  ಒಂದಷ್ಟು ದಿವಸ  ಆಗಬೌದು; ಕಾಡುಕೋಳಿಗಳು ಈಗತಾನೇ ಮೊಟ್ಟಿ ఇಟ್ಟಿವೆ. ಅವು ಒಡೆದು, ಮರಿಗಳಾಗಿ, ದೊಡ್ಡವಾಗಿ....”         
                 “ಔಟ ಬೆಕ್ ಚೆನ್ನಾಗಿದ್ದಾರೇಂತ ಅವರ ಮನೆಯವರಿಗೆ, ನೀನು ಚೆನ್ನಾ ಗಿದ್ದೀಯಾಂತ ನಿನ್ನ ಮನೆಯವರಿಗೆ,   ನಿನ್ನ ಅಂಬಿಗರು ಚೆನ್ನಾಗಿದ್ದಾರೇಂತ —"
               “ಹುಂ.     ನೀನು ಚೆನ್ನಾಗಿದ್ದೀಯಾಂತ ನೆಫಿಸ್ ಅಕ್ಕನಿಗೆ—"
               “ಆಗಲಪ್ಪ.   ಆಗಲಿ!”