ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೭೬ ಮೃತ್ಯುಂಜಯ
ಬಟಾ ದೋಣಿಕಟ್ಟೆಯಲ್ಲಿದ್ದ ಹೇರುದೋಣಿಗಳ ನಾವಿಕರನ್ನು ಕಂಡು ಮಾತನಾಡಿದ. ಪರಸ್ಪರ ಅಸ್ಪಷ್ಟ ಪರಿಚಯವಿತ್ತು. “ನಿಮ್ಮನ್ನು ನದೀಲಿ ನೋಡಿದ್ದೇನೆ.” “ನನಗೂ ನೀವು ಅಪರಿಚಿತರಲ್ಲ.” ನೀರಾನೆ ಪ್ರಾಂತದ ವಿಷಯವಂತೂ ಅವರು ಅರಿತವರೇ . “ఇದೇನು ದೊಡ್ಡ ಕೆಲಸ ? ಖಂಡಿತ అల్లి ನಿಂತು, ನೀವು ಹೇಳಿದ್ದನ್ನ ತಿಳಿಸಿ ಹೋಗ್ತೇವೆ.” “ನಾವು ಬಂಡಾಯವೆದ್ದವರೂಂತ—" “ಇರಲಿ ಬಿಡಣ್ಣ. ನಿಮ್ಮ ನಾಯಕರೇ ರಾಜಧಾನೀಲಿರುವಾಗ...." “ಇನ್ನೊಂದ್ಸಲ ಭೇಟಿಯಾದಾಗ ಒಟ್ಟಿಗೆ ಒಂದಿಷ್ಟು...." “ಆಹಾ !”
೭
ಮುಂದಿನ ಆರೇಳು ದಿನಗಳಲ್ಲಿ ಐಗುಪ್ತದ ಹೆಚ್ಚುಕಡಮೆ ಎಲ್ಲ ಪ್ರಾಂತ ಪಾಲರೂ ರಾಜಧಾನಿ ತಲಪಿದರು. ದೋಣಿಕಟ್ಟೆಯ ಎಡಬದಿಯುದ್ದಕ್ಕೂ ನಾಲ್ವತ್ತರಷ್ಟು ರಾಜನಾವೆಗಳು. ಮೇಲ್ಛಾವಣಿ, ಬಣ್ಣ, ಅಲಂಕರ ಎಲ್ಲದ ರಲ್ಲೂ ವೈವಿಧ್ಯ. ನೋಡಿದವರೆಲ್ಲ ಅಂದುಕೊಳ್ಳುತ್ತಿದ್ದರು : “ಸೆಡ್ ಉತ್ಸವಕ್ಕೆ ಬಂದಿದ್ದಾರೆ.” ರಜಧಾనిಯ ಪಶ್ಚಿಮ ವಲಯದಲ್ಲಿದ್ದ ನೂತನ ಅತಿಥಿಭವನ ಜೇನು ಗೂಡಾಯಿತು . ರಾಜಧಾನಿಯ ಖ್ಯಾತ ನರ್ತಕಿಯರೂ ಗಾಯಕರೂ ಶ್ರೇಷ್ಠ ಅಡುಗೆಯವರೂ ಆ ಭವನದಲ್ಲಿ ಬೆವರಿಳಿಸಿದರು. ಅಲ್ಲಿ ಹಗಲು ಇರುಳಾಯಿತು, ಇರುಳು ಹಗಲಾಯಿತು. ಮೊದಲ ದಿನಗಳ ಮಾತುಕತೆಗೆ ವಸ್ತು, ಮೆನೆಪ್ ಟಾ. ('ಬಂಡಾಯ