ಪುಟ:Mrutyunjaya.pdf/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಡಳಿತ ಬೇಕೂಂತ ತಾನೇ ಹೇಪಾಟ ಕೇಳೋದು. ಅದರಲ್ಲಿ ತಪ್ಪೇನಿದೆ?' 'ಅವರ ದೃಷ್ಟೀಲಿ ಬಿಗಿ ಆಡಳಿತ ಅಂದರೆ ದೇವಮಂದಿರಕ್ಕೆ ಹೆಚ್ಚು ಕಂದಾಯ ಹೆಚ್ಛು ಸಂಪತ್ತು, ಹೆಚ್ಛು ದಾಸದಾಸಿಯರು.' 'ಭೂಮಾಲಿಕರಿಗೆ ನಮ್ಮ ಮೇಲೆ ಸಿಟ್ಟು ಮೊದಲಿದ್ದ ಹಾಗೆ ನಾವೇ ಆಳ್ತೇವೆ; ನಾವೇ ಕಂದಾಯ ಸಂಗ್ರಹಿಸಿ ಕೊಡ್ತೇವೆ: ರಾಜಧಾನಿಯಿಂದ ಪ್ರಾಂತಪಾಲರನ್ನು ಕಳಿಸೋದು ಬೇಡ_ಅನ್ತಿದಾರೆ?' 'ಅಂಕುಶ ಅವರಿಗಿಷ್ಟವಿಲ್ಲ.' 'ಅದಕ್ಕೇ ರಹಸ್ಯವಾಗಿ ಮಹಾಅರ್ಚಕರ ಪಕ್ಷ ವಹಿಸ್ತಿದ್ದಾರೆ.')

   ಎಲ್ಲರಿಗಿಂತ ಅರಮನೆಗೆ ಹೆಚ್ಛು ಹತ್ತಿರದವನು ಗೇಬು. ಮೆನೆಪ್‍ಟಾಗೆ ಆಮಂತ್ರಣ ಹೋದಾಗ, ತಾನೂ ರಾಜಧಾನಿಯಲ್ಲಿಯೇ ಇರಬೇಕಾಗುತ್ತದೇನೋ ಎಂದುಕೊಂಡಿದ್ದ. ಅದು ಅನಗತ್ಯ ಎಂದು ಅರಿತಾಗ, ಆತ ಲಿಷ್ಟ್‌‍ಗೆ ತೆರಳಿದ. ಅವನಲ್ಲದಿದ್ದರೂ, ಅವನ ಬಗೆಗೆ ಮಾತು ನೂತನ ಅತಿಥಿ ಭವನದಲ್ಲಿ ಮತ್ತೆ ಮತ್ತೆ ಕೇಳಿಸಿತು. ('ಮೆನೆಪ್‍ಟಾ ಬಂದಾಗ ಸ್ವತಃ ಗೇಬು ಅವನನ್ನು ಇದಿರ್ಗೊಂಡನಂತೆ'; 'ರಾಜಿ ಪ್ರಯತ್ನ ?'; 'ಪಾಪ, ಗೇಬು ! ಸಮಾಧಾನಪಡಿಸೋಣ ಅಂದರೆ ಅವನೇ ಇಲ್ವಲ್ಲ'; 'ಅದರ ಅಗತ್ಯ ಕಾಣ್ಲಿಲ್ಲ. ಅವನು ಖುಷಿಯಾಗಿಯೇ ಇದ್ದಾನಂತೆ'; 'ಮೊದಲ್ನಿಂದಲೂ ಹಾಗೆಯೇ ಅವನು'; 'ಹುಟ್ಟಿನಿಂದಲೇ ಶ್ರೀಮಂತರಾದವರಿಗೆ ಉತ್ಕರ್ಷ ಸಾಧಿಸೋದರಲ್ಲಿ ಆಸಕ್ತಿ ಕಮ್ಮಿ'; 'ಗೇಬು ಹೆಂಡತಿ ಸನ್ನಿಧಿಗೆ ತೀರಾ ಹತ್ತಿರ ಅನ್ತಿದ್ರು' ಈಗ ಅಂಥದೇನೂ ಇಲ್ಲ.' 'ಎಷ್ಟು ವರ್ಷ ಹತ್ತಿರ ಇರೋಕಾಗ್ತದೆ. ದೂರವಿರಿ ಅಂತಲೇ ಗೇಬೂನ ನೀರಾನೆ ಪ್ರಾಂತಕ್ಕೆ ಕಳಿಸಿದರಂತೆ.' 'ಅವನಿಗೆ ಒಳ್ಳೇ ಫಜೀತಿ.')
   ಇಬ್ಬರು ಭವನದ ಮಹಡಿಯ ವಿಶಾಲ ಮುಖಮಂಟಪದಲ್ಲಿ, ನಡು ಉಡುಪು ಧರಿಸಿದ್ದ ದಾಸಿ ತಂದಿಟ್ಟ ದ್ರಾಕ್ಷಾಸುರೆ ಸವಿಯುತ್ತ ಬಹಳ ಗುಟ್ಟಾಗಿ ತಮ್ಮೊಳಗೆ ಮಾತನಾಡಿಕೊಂಡರು :
   “ಅಂತಃಪುರದಲ್ಲಿ ಈಗ ಹೆರಿಗೆ ಕಡಿಮೆಯಂತೆ!”
   “ಇಷ್ಟು ಬೇಗ ಸೆಡ್ ಉತ್ಸವ ಮಾಡಿಕೊಳ್ಳೋದೇ ಅದಕ್ಕೆ !”
   “ಅಂದರೆ ಮುಂದಿನ ವರ್ಷ ಈ ಹೊತ್ನಲ್ಲಿ ಅಂತಃಪುರ ತುಂಬಾ ಮೊಲೆ ಚೀಪೋ ಮಕ್ಕಳೇ ಇರ್ತವೆ ಅನ್ನು.”