ಪುಟ:Mrutyunjaya.pdf/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

“ಈಗ ಬಂದಳಲ್ಲ ಇವಳು ಹೇಗೆ?”

   “ಸೆಡ್ ಉತ್ಸವ ಆಗೋವರೆಗೆ ನೀನಿಟ್ಕೋ.”
   “ಮಹಾ ಅರ್ಚಕನ ಆ ಚಟುವಟಿಕೆಗೆ ಮೇರೆ ವಿಾರಿದೆಯಂತಲ್ಲ?”
   “ನೋಡ್ಕೋ. ಅವನದ್ದೇನಾದರೂ ಮೇಲುಗೈ ಆದರೆ, ರಾಣೀವಾಸಕ್ಕೆ ಹತ್ತಿರವಾಗಿ ಗುರುವಸತಿ ಕಟ್ಟಿಸ್ಕೊಂಡ್ಬಿಡ್ತಾನೆ!”
   “ಆಗ ಅವನ್ನು ದುರ್ದೈವಿ ಅನ್ನೋಣವೋ? ಭಾಗ್ಯಶಾಲಿ ಅಂತ ಕರೆಯೋಣವೊ?"
   “ಕಡೆಗೆ ಮಹಾ ಅರ್ಚಕನೂ ಸೆಡ್ ಉತ್ಸವ ಮಾಡಿಸ್ಕೊಳ್ಬೇಕಾಗ್ತದೆ!" 
       
          *          *          *          *
   ಪ್ರಾಂತಪಾಲರ ಆ ವೃತ್ತಕ್ಕಿಂತ ದೂರವಾಗಿ, ನದೀತಟದ ತಂಗುಮನೆಗಳಲ್ಲಿ ಭೋಜನಗೃಹ_ಪಾನಮಂದಿರಗಳಲ್ಲಿ ಸುಖವನ್ನು ಕೊಂಡು ಅನುಭವಿಸುವುದರಲ್ಲೇ ಕಾಲಯಾಪನೆ ಮಾಡುತ್ತಿದ್ದರು, ಕೆಲವು ಪ್ರಾಂತಗಳ ಭೂಮಾಲಿಕರು. ಅವರು ಸೆಡ್ ಉತ್ಸವಕ್ಕೆಂದೇನೂ ಬಂದವರಲ್ಲ. ರಾಜಧಾನಿಗೆ ಬರಲು ಯಾರ ಆಮಂತ್ರಣವೂ ಅವರಿಗೆ ಅಗತ್ಯವಿರಲಿಲ್ಲ. ವಿಹಾರ ನೌಕೆಗಳಲ್ಲಿ ಯಾನ ಮಾಡುತ್ತ, ಯಾವ ಊರನ್ನು ಯಾವಾಗ ಬೇಕಾದರೂ ಸಂದರ್ಶಿಸುತ್ತ, ವರ್ಷವಿಡೀ ಅಲೆಮಾರಿಗಳಾಗಿ ದಿನಗಳೆಯುವ ಶಕ್ತಿ ಅವರಿಗಿತ್ತು.
   ಅಂಥವರಲ್ಲೊಬ್ಬ ನೀರಾನೆ ಪ್ರಾಂತದ ನುಟ್‍ಮೋಸ್‍.
   ವರ್ಷಕ್ಕೆ ಎರಡು ಮೂರು ಸಲ ಅವನು ರಾಜಧಾನಿಗೆ ಹೋಗಿ ಬರುತ್ತಿದ್ದ. ಅಲ್ಲಿ ಅರಮನೆಯ ಸಣ್ಣ  ಪುಟ್ಟ ನೌಕರರೆದುರು ಧಾರಾಳಿಯಾಗಿ ಆಬ್ಟು ಯಾತ್ರೆಯಲ್ಲಿ ಪೆರೋನ ಬೋಯಿಯಾಗುವ ಅವಕಾಶ ದೊರಕಿಸಿಕೊಂಡ. ಆದರೆ ಪ್ರಾಂತದಲ್ಲಿ ಬಂಡಾಯವಾದ ಮೇಲೆ ತನ್ನ ಹೊಣೆಗೆಟ್ಟ ಬದುಕಿಗೆ ಒಂದು ಖಚಿತ ರೂಪ ಕೊಡುವುದು ಅಗತ್ಯವೆನಿಸಿತು. ಅದು ಸಾಧ್ಯವಾದದ್ದು, ಮೆಚ್ಚಿನ ದಾಸಿಯನ್ನು ಕರೆಸಿಕೊಂಡ ಮೇಲೆ. ಬಾಳಬೇಕಾದರೆ, ಆಡಳಿತಗಾರರ ಕುಶಲಕಲೆಗಳಲ್ಲಿ ಕೆಲವನ್ನಾದರೂ ಕರಗತ ಮಾಡಿಕೊಳ್ಳುವುದು ಅವಶ್ಯ ಎಂದು ಅವನು ಮನಗಂಡ. ಗೇಬು ಹೇಗೂ ಅವನ ಮಿತ್ರ. ಟೆಹುಟಯ ಸ್ನೇಹವನ್ನೂ ಸಂಪಾದಿಸಿದ. ಮೇಲು ಮಟ್ಟದ ಆತಿಥ್ಯ ಯಾರಿಗೆ