ಪುಟ:Mrutyunjaya.pdf/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೨ ಮೃತ್ಯುಂಜಯ ಅವರ ಹೆಂಗಸರು ತೊಡುತ್ತಿ ದ್ದ ಆಭರಣಗಳನ್ನು ಕಂಡು ಅವನ ನಾಲಗೆ ತೇವ ವಾಯಿತು. ಅವನು ಅವರಿಗೆ ಕಿವಿಮಾತು ನುಡಿದ : "ರಾಜಧಾನೀಲಿ ಇರೋದಕ್ಕೆ ನಿಮಗೆ ಅರಮನೆಯ ಸಹಾಯ ಬೇಡವಾ ? ಶ್ರೀಮಂತರು ಅಂತ ತೋರಿಸ್ಕೋಳ್ಬೇಡಿ. ಆಭರಣಗಳನ್ನೆಲ್ಲ ಪೆಟಾರೀಲಿ ಭದ್ರವಾಗಿಡಿ. ಹಾಗೆ ಮಾಡ್ದೆ ಇದ್ರೆ ಅವು ಕರಗೋತನಕ ನಿಮಗೆ ಏನೂ ಸಿಗೋದಿಲ್ಲ." ಕಹಿ-ಆದರೂ ಪಥ್ಯ ನುಟ್ಮೋಸ್'ನ ನಾಯಕತ್ವದಲ್ಲಿ ನೀರಾನೆ ಪ್ರಾಂತದ ಭೂಮಾಲಿಕರು ಅಮಾತ್ಯನನ್ನು ಕಂಡರು, ತಮ್ಮ ಸ್ಥಿತಿಗತಿಯ ಬಗೆಗೆ ಅರಿಕೆ ಮಾಡಲು. (ನುಟ್ಮೋಸ್ : "ನನ್ನ ಪ್ರಾಂತದಲ್ಲೀಗ ಪಾಪದ ಮಹಾಪೂರ, ಅಮಾತ್ಯವರ್ಯ. ಇವರು ಬಹಳ ಪ್ರಯಾಸಪಟ್ಟು ತಪ್ಪಿಸ್ಕೊಂಡು ಬಂದಿದ್ದಾರೆ. ಈಗ ಅಲ್ಲಿ ಉಳಿದಿರುವವರು ಸಿನ್ಯುಹೆ ಆತನ ಸಂಸಾರ ಮತ್ತು ನನ್ನ ಹೆಂಡತಿ ಮಕ್ಕಳು. ಇವರನ್ನು ಬಂಡಾಯಗಾರರು ಕೊಂದುಬಿಟ್ಟರೆ ಭೂಮಾಲಿಕರೇ ಆ ಪ್ರಾಂತದಲ್ಲಿ ಇಲ್ಲದಂತಾಗುತ್ತದೆ.” ಅಮಾತ್ಯ : "ನಿಮ್ಮೆಲ್ಲರ ಯಾತನೆ ನನಗೆ ಗೊತ್ತಿಲ್ಲದ್ದಲ್ಲ. ಮಹಾಪ್ರಭುವಿಗೂ ವಿಷಯ ತಿಳಿಸ್ತೇನೆ. ಪ್ಟಾನ ಕೃಪೆಯಿಂದ ನಿಮ್ಮ ಸಂಕಟ ಬೇಗನೆ ಪರಿಹಾರ ವಾದೀತು." “ನೀರಾನೆ ಪಾಂತದ ಭೂಮಾಲಿಕರು ಇಲ್ಲಿ ಭಿಕಾರಿಗಳಂತೆ ಬಾಳ್ವೆ ಮಾಡಿದರೆ ಬಂಡಾಯಗಾರರಿಗೆ ಕೋಡು ಮೂಡ್ಡದೆ." “ಆಗಲಿ. ಈ ಭೂಮಾಲಿಕ ಮಿತ್ರರಿಗೂ ಅರಮನೆ ರಕ್ಷಣೆ ನೀಡ್ತದೆ.” ಹಾಗೆ ಹೇಳಿ ಅಮಾತ್ಯ ಕಿರಿಯ ಲಿಪಿಕಾರರತ್ತ ನೋಡಿದ. ನಿರ್ಧಾರವನ್ನು ಬರೆದುಕೊಳ್ಳಲು ಅದು ಸೂಚನೆ. ಸೆನೆಬ್'ನ ಕಡೆಗೊಮ್ಮೆ ಕಳ್ಳನೋಟ ಬೀರಿ, ಅವನಿಂದ ಮೌನ ಉತ್ತೇಜನ ಪಡೆದು ಅಮಾತನಿಗೆ ಪುನಃ ನಮಿಸಿ, ನುಟ್ಮೋಸ್ ಮನವ್ಯಿ