ಪುಟ:Mrutyunjaya.pdf/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೪

ಮೃತ್ಯುಂಜಯ

ಸಿಲುಕಿದಂತಾಯ್ತು. ಇದರಿಂದ ತನಗೆ ಒಳಿತಾಗುತ್ತದೋ? ಕೆಡುಕಾಗುತ್ತದೋ?
ಅವನು ಅದೃಷ್ಟದ ಬೀದಿಗೆ ಹೋದ. ಇತರ ಭಾಮಾಲಿಕರಿಗೆ ಇದು ಗೊತ್ತಾಗ
ಬಾರದೆಂದು ಪಲ್ಲಕಿ ಬಳಸಲಿಲ್ಲ; ಸೇವಕರನ್ನು ಕರೆದೊಯ್ಯಲಿಲ್ಲ, ನಡೆದ.
ಅದೃಷ್ಟ ವಾಚನದಲ್ಲಿ ನಿಷ್ಣಾತನೆಂದು ಹೆಸರಾಗಿದ್ದ ವೃದ್ಧ ಅರ್ಚಕ
ನೊಬ್ಬ ನುಟ್ಮೋಸ್ ನನ್ನು ನೋಡಿ,"ಹಿಂದೆ ಸುಖ ಅನುಭವಿಸಿದರು.
ಈಗ ಕಷ್ಟದಲ್ಲಿದ್ದೀರಿ,” ಎಂದ. ವಿಷಯ ತಿಳಿದುಕೊಂಡು, ಆ ಲಿಪಿ ಸುರುಳಿ,
ಈ ಲಿಪಿ ಸುರುಳಿ ನೋಡಿ, ಬಹಳ ಯೋಚಿಸಿ, “ನಿಮ್ಮ ಕಷ್ಟದ ದಿನಗಳು
ಮುಗಿಯುತ್ತ ಬಂದುವು ಅಂತ ತಿಳೀರಿ. ಮತ್ತೆ ಸುಖದ ದಿನಗಳನ್ನು
ನೋಡ್ತೀರಿ,"ಅಂದ.
ನುಟ್ ಮೋಸ್ ಗೆ ಆದ ಸಂತೋಷ ಅಪಾರ, ತನ್ನ ಬೆರಳಿನಿಂದ
ಬಂಗಾರದ ಉಂಗುರವನ್ನು ತೆಗೆದು ಅರ್ಚಕನ ಮುಂದಿರಿಸಿ, ಪ್ರಣಾಮ ಮಾಡಿ,
ಆಶೀರ್ವಾದ ಪಡೆದ....
ಮೆನೆಪ್ ಟಾ ಬಂದು ತಲಪಿದ ವಾರ್ತೆ ಸಂಜೆಯ ಹೊತ್ತಿಗೆ ನುಟ್
ಮೋಸ್ ಗೆ ಮುಟ್ಟಿತು. ('ಪೀಠಪಲ್ಲಕಿಯಲ್ಲಿ ಮೆರವಣಿಗೆಯಲ್ಲಿ ಕರೆದೊಯ್ದರು.'
ಬೆಳಿಗ್ಗೆ ಎದ್ದು ಬಿಸಿಲೇರುತ್ತಿದ್ದಂತೆ ದೋಣಿಕಟ್ಟೆಗೆ ಬಂದು, ನದೀತಟದ
ಭೋಜನ ಗೃಹಗಳತ್ತ ಹೊರಳುವುದು ಅವನ ಪದ್ದತಿ, ಹಿಂದಿನ ರಾತ್ರೆ ಮನೆ
ಸೇರಿದಾಗ ತಡವಾಗಿತ್ತು, ಬೆಳಿಗ್ಗೆ ವಿಪರೀತ ತಲೆಶೂಲೆಯಾಗಿ, ಹೊರ
ಬೀಳುವಾಗ ಮಧ್ಯಾಹ್ನವಾಗಿತ್ತು. ಇಲ್ಲದೆ ಹೋಗಿದ್ದರೆ ಅವನೂ ಅನಿವಾರ್ಯ
ವಾಗಿ ಮೆರವಣಿಗೆಯ ವೀಕ್ಷಕನಾಗುತ್ತಿದ್ದ. "ದೇವರು ಆ ಹಿಂಸೆಯಿಂದ ನನ್ನನ್ನು
ಪಾರುಮಾಡಿದ.')
ಇತರರು ಮೆನೆಪ್ಟಾನನ್ನು ಬಣ್ಣಿ ಸಿದ್ದರು ಇವನು ಕಂಡಿರಲಿಲ್ಲ.
ಊರಿನ ಜನಸಾಮಾನ್ಯರನ್ನೆಲ್ಲ ಯಾರು ನೆನಪಿಡುತ್ತಾರೆ? ಕಾಣುವ
ಕುತೂಹಲ. ಅದಕ್ಕಿಂತಲೂ ಹೆಚ್ಚಾಗಿ, ಆ ನಾಯಕಬಂದ ಮೇಲೆ ಅರಮನೆ
ಯಲ್ಲಿ ಏನು ನಡೆಯುತ್ತದೆ ಎಂದು ತಿಳಿಯುವ ತವಕ.'ನಿಮ್ಮ ಕಷ್ಟದ ದಿನ
ಗಳು ಮುಗಿಯುತ್ತ ಬಂದುವು ಅಂತ ತಿಳೀರಿ'. ಅದರ ಸುಳಿವು ?
ಸೆನೆಬ್ ನ ಸೂಚನೆಯಂತೆ, ಮೆನೆಪ್ಟಾ ಅಮಾತ್ಯನ ಭೇಟಿಗೆ ಹೋದ
ದಿನ ತಾನೂ ಅಲ್ಲಿಗೆ ಧಾವಿಸಿದ. ಅಮಾತ್ಯನನ್ನು ಕಾಣುವುದು ಸಾಧ್ಯವಾಗ