ಪುಟ:Mrutyunjaya.pdf/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೮

ಮೃತ್ಯುಂಜಯ



ಮತ್ತೆ ಮತ್ತೆ ನುಡಿಸಿದ ಸಾಲುಗಳು, ಪುನಃ ಪುನಃ ಗುಂಯ್ ಗುಟ್ಟಿದ
ಪದಗಳು.
ನುಡಿಸಿ ಮುಗಿದಾಗ ಬಟಾ ಕೊಳಲಲ್ಲಿ ತುಂಬಿದ್ದ ಎಂಜಲನ್ನು ಝಾಡಿ
ಸಿದ . ಪೀಠದಿಂದೆದ್ದು ಕೊಳಲನ್ನು ಮೂಲೆಯಲ್ಲಿ ಗೋಡೆಗೆ ಒರಗಿಸಿ, ಕಿಟಕಿಯ
ಬಳಿ ಹೊರನೋಡುತ್ತ ನಿಂತ. ಕಣ್ಣುಗಳಲ್ಲಿ ಕಂಬನಿ ಕೋಡಿಗಟ್ಟಿತು.
ಸೂಕ್ಷ್ಮತಮ ಭಾವನೆಗಳನ್ನು ಕಲಕಿದ ಗಾಯನ. ಮೆನೆಪ್ ಟಾನ
ಹೃದಯ ಅರಳಿತು, ಹರ್ಷಾಶ್ರು ಉರುಳಿತು.
ನೆಗಡಿಯ ತೊಂದರೆಯಿಂದ ಆ ವೇಳೆಗಾಗಲೇ ಪಾರಾಗಿದ್ದ ಔಟ ಮತ್ತು
ಬೆಕ್ ಕೊಠಡಿಯ ದ್ವಾರಪಾಲಕ ಪ್ರತಿಮೆಗಳಾಗಿದ್ದರು. ಅತಿಥಿಗೃಹದ ಸೇವಕ
ರನ್ನೆಲ್ಲ ಕೊಳಲಿನ ನಾದ ಮೊಗಸಾಲೆಗೆ ಸೆಳೆದಿತ್ತು, ಹೊರಗೆ ಉದ್ಯಾನ
ಅರಮನೆಯ ಸಣ್ಣ ಪುಟ್ಟ ಉದ್ಯೋಗಿಗಳಿಂದ ತುಂಬಿತ್ತು. ಅವರೆಲ್ಲರಿಗೆ ನಾದದ
ಸೃಷ್ಟಿಕರ್ತನ ಮುಖ ನೋಡುವ ಬಯಕೆ.
ಬಟಾ ಮೊಗಸಾಲೆಯತ್ತ ತಿರುಗಿ, ಬಗ್ಗಿ ನಡುವಸ್ತ್ರದ ಚುಂಗಿನಿಂದ
ಕಂಬನಿ ತೊಡೆದು, ನಗುತ್ತ, “ಆಹಾ ! ನನ್ನ ಭಕ್ತಾದಿಗಳು ನಿಂತಿದ್ದಾರೆ.
ನಾನಿವರನ್ನು ಆಶೀರ್ವದಿಸಬೇಕು,” ಎಂದ.
ಮೆನೆಪ್ ಟಾ ನಸುನಕ್ಕ.
ಅಷ್ಟರಲ್ಲಿ ಅತಿಥಿಗೃಹದ ಅಧಿಕಾರಿಯ ಸ್ವರ ಕೇಳಿಸಿತು :
“ಚೆದರಿ ! ಚೆದರಿ ! ಏನಿದು ಗದ್ದಲ ?”
ವಾಸ್ತವವಾಗಿ, ಉಗ್ರಾಣದ ಅಧಿಕಾರಿಯೊಡನೆ ಹರಟೆ ಹೊಡೆಯುತ್ತ
ನಿಂತಿದ್ದ ಅವನಿಗೂ ಕೊಳಲಿನ ಇಂಪು ತಟ್ಟಿತು.
ಕೊಠಡಿಯೊಳಕ್ಕೆ ಇಣುಕಿ, "ಜನರಿಂದ ನಿಮಗೆನಾದರು ತೊಂದರೆ
ಆಯ್ತೆ ?” ಎಂದು ಆತ ಕೇಳಿದ.
ಬಟಾನೆಂ‍ದ:
“ಇಲ್ಲವಪ್ಪ, ನನಗೆ ಸ್ವಲ್ಪ ಉಸಿರಿನ ಉಪದ್ರವ.”
“ಹಾಗೇನು ? ಅರ್ಚಕರನ್ನು ಕರಕೊಂಡ್ಬರಲಾ ? "
“ಬೇಡ, ಬೇಡ, ಕೊಳಲು ಬಾರಿಸಿದ್ಮೇಲೆ ಅದು ನಿವಾರಣೆ
ಯಾಯ್ತು."