ಪುಟ:Mrutyunjaya.pdf/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೨೮೯ ఇದು ನಿಜವೋ ಪರಿಹಾಸ್ಯದ ಮಾತೋ ಎಂದು ತಿಳಿಯದೆ అಧಿಕಾರಿ ಕಕ್ಕಾವಿಕ್ಕಿಯಾದ.

  • * * *

ಅವರ ಪೆಟಾರಿಯಲ್ಲಿ ಮೌಲ್ಯವಿನಿಮಯಕ್ಕೆಂದು ತಂದಿದ್ದ ಕೆಲವು ಸಾಮಗ್ರಿಗಳಿದ್ದುವಲ್ಲ? ಅವುಗಳಲ್ಲೊಂದು, ಶ್ರೇಷ್ಠ ಜೊಂಡಿನಿಂದ ಮಾಡಿದ್ದ ನೀರಾನೆಯ ಚಿತ್ತಾರಗಳಿದ್ದ ಕಿರುಚಾಪೆ. ಬೆಕ್ಔಟರಿಗೆ ನಡೆಸಿದ ಔಷಧೋ ಪಚಾರಕ್ಕೆ ಕಾಣಿಕೆ ಎಂದು ಅದನ್ನು ಅರ್ಚಕ ಇನೇನಿಗೆ ಕೊಡಲು ಬಟಾ ಯೊಚೀಸಿದ.

       "ತಡ ಯಾಕೆ? ಇವತ್ತೇ ಕೊಟ್ಬಡು,” ಎಂದು ಮೆನೆಪ್ ಟಾ.
         ಮುಚ್ಚಂಜೆ ದೀಪ ಬೆಳಗಿದ ಮೇಲೆ ಬಟಾ ಕಾಣಿಕೆಯನ್ನೆತ್ತಿಕೊಂಡು ಅರ್ಚಕನ ವಸತಿಗೆ ಹೋದ. ಇನೇನಿ ಮಂದಿರದಲ್ಲಿದ್ದ. ಬಟಾ ಸ್ವಲ್ಪ ಹೊತ್ತು ಕಾಯಬೇಕಾಯಿತು. ಪಡಸಾಲೆಯಲ್ಲಿ ಉರಿಯುತ್ತಿದ್ದ ಹಣತೆಯ ಬಳಿ ಕುಳಿತು ಕಿರಿಯನೊಬ್ಬ  ಒಂದು ಲಿಪಿ ಸುರುಳಿಯನ್ನು ಕಂಠಪಾಠ ಮಾಡುತ್ತಿದ್ದ.
              ಒಂದು ವಾಕ್ಯದ ಪಠಣವನ್ನು ಅರ್ಧಕ್ಕೇ ನಿಲ್ಲಿಸಿ,ತಲೆಯೆತ್ತಿ ಬಟಾನನ್ನು ನೋಡಿ,ಆತ ಕೇಳಿದ:
      "ಓ ಮೊನ್ನೆ ಕೊಳಲು ನುಡಿಸಿದ್ದು ನೀವೇ ಅಲ್ಲವಾ?"
    ಒಳಗೆ ಬಂದು ಇನೇನಿ,"ಇವತ್ತಿಗೆ ಸಾಕು,"ಎಂದು ನುಡಿದು,ಓದುತ್ತಿದ್ದ ಹುಡುಗನನ್ನು ಕಳುಹಿಸಿಕೊಟ್ಟ.
    "ಬಾ ಬಟಾ ಕೂತ್ಕೋ,"ಎಂದು ಹೇಳಿ,ಹುಡುಗ ಆ ತನಕ ಕುಳಿತಿದ್ದ ಚಾಪೆಯನ್ನು ತೋರಿಸಿದ."ಈಗ ಹೋದ್ನಲ್ಲ? ಅವನು ಅಮಾತ್ಯರ ದೂರದ ಸಂಬಂಧ. ಮಂದಿನ ಶಾಲೆಯಲ್ಲಿ ನನ್ನ ಸಹಾಯಕ ಕಲಿಸೋದು ಸಾಲದೂಂತ ಈ ವಿಶೇಷ ಪಾಠ.ಮೂರು ದಿವಸಕ್ಕೊಮ್ಮೆ ತನಗೆ ಅನುಕೂಲವಾದ ಹೊತ್ನಲ್ಲಿ ಬರ್ತಾನೆ! ಹ್ಯಾಗಿದ್ದೀರಿ ಎಲ್ಲ?"
     "ಚೆನ್ನಾಗಿದ್ದೇವೆ.ಕಾಣೆಕೆ ತಂದಿದ್ದೇನೆ."
     ೧೯