ಪುಟ:Mrutyunjaya.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೦ ಮೃತ್ಯುಂಜಯ ಆರ್ಚಕ ಪಡಸಾಲೆಯ ಮೂಲೆಯಲ್ಲಿದ್ದ ಒಂದು ಪೀಠವನ್ನೆತ್ತಿ ತಂದು ಹಣತೆಯ ಬಳಿ ಇಟ್ಟು ಅದರ ಮೇಲೆ ಕುಳಿತುಕೊಂಡ.

            ಕಳೆದ ಸಲ ಬಂದಿದ್ದಾಗ ಬಟಾ ಅದನ್ನು ಕಂಡಿರಲಿಲ್ಲ. 
           " ಹೊಸದು. ಒಬ್ಬ ಅಧಿಕಾರಿಯ ಹೆಂಡತಿಗೆ ಸಕತ್ ಕಾಹಿಲೆ ಆಗಿತ್ತು. ವಾಸಿ ಮಾಡ್ದೆ. ಇದನ್ನು ಕಾಣಿಕೆ ಕೊಟ್ಟ," ಎಂದು ಹೇಳಿ ಅರ್ಚಕ ಬಟಾ ನೀಡಿದ ಸುರುಳಿಯನ್ನು ಬಿಚ್ಚಿ ಹಣತೆಯ ಬೆಳಕಿನಲ್ಲಿ ನೋಡುತ್ತ, “ಬಹಳ ಸೊಗಸಾಗಿದೆ,” ಎಂದು ಮೆಚ್ಚುಗೆ ಸೂಚಿಸಿದ.
         " ನಿಮಗೆ ತೃಪ್ತಿಯಾಯ್ತು ಅಂತ ನಾಯಕರಿಗೆ ತಿಳಿಸ್ತೇನೆ.”
          " ದೇವತಾ ಪ್ರಾರ್ಥನೆಯ ವೇಳೆಯಲ್ಲಿ ನಿಮ್ಮನ್ನು ಜ್ಞಾಪಿಸ್ಕೊಳ್ತೇನೆ. ಏಕಾಕಿಗಳಿಗೆ,ಅಸಹಾಯಕರಿಗೆ, ಆರ್ತರಿಗೆ ದೇವರ ಸಹಾಯ ಬೇಕು. ಅವರ ಪರಿಸ್ಥಿತಿಯನ್ನು ದೇವರ ಗಮನಕ್ಕೆ ತರೋದು ದೇವಸೇವಕರು ಕರ್ತವ್ಯ....ನೀವು ನಿಮ್ಮೂರಿಗೆ ಯಾವಾಗ ವಾಪಸಾಗ್ತೀರಿ ಅಂತ ಹೇಳೋ ಹಾಗೆಯೇ ಇಲ್ಲ ಅಲ್ಲವಾ? ಸೆಡ್ ಉತ್ಸವಕ್ಕೆ ದಿನ ಇನ್ನೂ ಗೊತ್ತಾಗಿಲ್ಲ.”

"ಅದು ಮಹಾ ಅರ್ಚಕರ ಮರ್ಜೀನ ಅವಲಂಬಿಸಿದೆ."

              “ಹ್ಞ, ನಿಜ. ಮಹಾ ಅರ್ಚಕರಿಗೆ ನಾಳೆ ಅಮಾತ್ಯರಿಂದ ಒಂದು ಪತ್ರ ಹೋಗ್ತದೆ. ಪತ್ರ ಅಲ್ಲ, ನಿವೇದನೆ. ಬನ್ನಿ, ದಯವಿಟ್ಟು ಬನ್ನಿ-ಅಂತ. ಏನು ಉತ್ತರ ಬರ್ತದೋ  ನೋಡ್ಬೇಕು. ಅವರು ಬರದಿದ್ದರೆ ಇವರು ಮುಂದೇನು ಮಾಡ್ತಾರೆ ಅನ್ನೋದೂ ನನಗೆ ಗೊತ್ತಿದೆ. ಸರು ಅಧಿವೇಶನ ಕರೀತಾರೆ. ಸರು ಅಂದರೆ ಹಿರಿಯ ಸಲಹೆಗಾರರ ಮಹಾಮಂಡಲಿ. ಇದೆಲ್ಲ ಗೋಷ್ಯ. ಸಾಮಾನ್ಯವಾಗಿ ನಾನು ಎಲ್ಲೂ ಮಾತಾಡೋ ವಿಷಯವಲ್ಲ. ನಾಯಕರಿಗೆ ತಿಳಿಸಿ. ಆದರೆ, ಹೇಳಿದ್ದು ನಾನು ಅನ್ನೋದನ್ನು ಮರೆತು ಬಿಡಿ.”
     " ಅರ್ಥವಾಯ್ತು, ಅಯ್ಯ. ಇದನ್ನೆಲ್ಲ ನಮ್ಮ ಹಿತಕ್ಕಾಗಿ ನಿವು ಹೇಳ್ತಿರೋ ಮಾತು-”
     " ಅಂತೂ ಒಳ್ಳೇ ಸಮಯದಲ್ಲಿ ರಾಜಧಾನಿಗೆ ಬಂದಿರಿ.ಏನೇನಾಗ್ತದೋ ನೋಡೋಣ. ಅಂದ ಹಾಗೆ ಬಟಾ, ಮಹಾಮಂದಿರಕ್ಕೆ ನಾಯಕರೂ ಪರಿ ವಾರದವರೂ ಭೇಟಿ ಕೊಟ್ಟೇ  ಇಲ್ಲ........”
       “ ಸೆಡ್ ಉತ್ಸವ ಮುಗಿಸಿ ಊರಿಗೆ ಹೊರಡೋದಕ್ಕೆ ಮುಂಚೆ_”