ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೯೨ ಮೃತ್ಯುಂಜಯ
ಆ ಅರ್ಚನೆ ಆರಂಭವಾಗಿತ್ತು. ಮೂರು ದಿನ ಕಳೆದ ಮೇಲೆ ಮಾತ್ರ ತಡವಾಗಲಿಲ್ಲ. ಅರಸನ ಓಲೆ ದೊರೆತೊಡನೆಯೇ ಮಹಾ ಅರ್ಚಕ ಉತ್ತರ ಬರೆಸಿದ. ಆ ಉತ್ತರದೊಡನೆ ರಾಜದೂತ ರಾಜಧಾನಿಗೆ ಹೊರಟೂ ಬಿಟ್ಟ. ಮೆಂಫಿಸ್ ತಲಪಿದಾಗ ಕತ್ತಲಾಗಿ ಸುಮಾರು ಹೊತ್ತಾಗಿತ್ತು. ದೂತನಿಗೆ ದೋಣಿ ಕಟ್ಟೆಯಲ್ಲಿಯೇ ಆದೇಶ ದೊರೆಯಿತು : ಎಷ್ಟು ಹೊತ್ತಿಗೆ ಬಂದರೂ ನೇರವಾಗಿ ಅಮಾತ್ಯರಲ್ಲಿಗೆ ಸಾಗಬೇಕು_ ಎಂದು.ದೋಣಿಕಟ್ಟೆಯ ಕಾವಲು ಭಟರು ಒಂದು ಕತ್ತೆಯನ್ನು ತಂದುಕೊಟ್ಟರು.ಒಬ್ಬ ಭಟ ದೀವಟಿಗೆ ಹಿಡಿದು ಕತ್ತೆಯ ಮುಂದುಗಡೆ ನಡೆದ. ಅದನ್ನೇರಿ ದೂತ ಅಮಾತ್ಯನ ವಸತಿಯನ್ನು ತಲಪಿದ. ಆಮೆರಬ್ ನಿದ್ದೆಯನ್ನು ಕೊಡವಿ, ಢಾಳಾಗಿ ನೀಲಾಂಜನ ಉರಿಯುತ್ತಿದ್ದ ಪಡಸಾಲೆಯಲ್ಲಿ ದೂತನನ್ನು ಬರಮಾಡಿಕೊಂಡ. ಶಿಷ್ಟಾಚಾರದ ಆರಂಭ ಅಂತ್ಯಗಳ ಹೊರತಾಗಿ ಮಹಾ ಅರ್ಚಕನ ಓಲೆಯಲ್ಲಿ ಇದ್ದುದು ಅತ್ಯಲ್ಪ: " ಧಾರ್ಮಿಕ ಕಾರ್ಯ ನಿಮಿತ್ತ ಇನ್ನೂ ಸ್ವಲ್ಪ ಕಾಲ ನಾವು ಇಲ್ಲಿಯೇ ಇರಬೇಕಾಗಿದೆ. ಅದು ಮುಗಿದೊಡನೆಯೇ ಹೊರಟುಬರುತ್ತೇವೆ.” ರಾಜದೂತ ಆನ್ ನಗರ ತಲಪಿದ ಸುದ್ದಿ ಮಾರನೆಯ ಸಂಜೆಯೇ ಬೇರೆ ದೋಣಿಕಾರರ ಮೂಲಕ ಅಮತ್ಯನಿಗೆ ತಲಪಿತ್ತು. ದೂತ ಮರಳುವುದು ತಡವಾದಾಗ, ವಿಲಂಬಕ್ಕೆ ಮಹಾ ಆಚ೯ಕನೇ ಕಾರಣ ಎಂದು ಅಮಾತ್ಯ ತಕಿ೯ ಸಿದ್ದ ದೂತನ ಪಾಲಿಗೆ ಅಖಂಡ ಅರ್ಚನೆ ಅಸಾಧಾರಣ ಸಂಗತಿ. ಆದರೆ ಆಮೆರಬ್ ఆ ಬಳಿಗೆ ದೂತನ ವರದಿ ಕೇಳಿ,ತುಟಿಯ ಮೂಲೆಯನ್ನು ಮೆಲ್ಲನೆ ಕಚ್ಚಿದ. “ ಅಲ್ಲಿ ಇನ್ನು ಯಾರನ್ನಾದರೂ ಕಂಡೆಯಾ?” “ ಇಲ್ಲ, ಟೆಹುಟ ಅಲ್ಲಿದ್ದಾರಂತೆ. ನನ್ನ ಕಣ್ಣಿಗೆ ಬೀಳಲಿಲ್ಲ ." "ಬಕಿಲ?" " ಒಕ್ಕಣ್ಣನೂ ಇದ್ನಂತೆ. ಆದರೆ ಅವನೂ ನನಗೆ ಸಿಗಲಿಲ್ಲ.” “ ನಗರಾಧಿಕಾರಿ ಊರಲ್ಲಿದ್ನೊ?” " ಇದ್ರು." “ ನೀನೇನು ಮಾಡ್ಡೆ?” "ನಿದ್ದೆ ಮಾಡ್ತಾ ಕಾಲ ಕಳೆದೆ.”