ಪುಟ:Mrutyunjaya.pdf/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ರಾಜಧಾನಿಯ ಸುದ್ದಿ ಮಹಾ ಅರ್ಚಕನಿಗೆ ತಿಳಿಯಬಾರದೆಂದು ಸ್ವಲ್ಪ ಮಂದ ಬುದ್ದಿ ದೂತನನ್ನೇ ಅಮಾತ್ಯ ಕಳುಹಿಸಿದ್ದ.

  'ಮುಂదిನ ಸల ಸಮರ್ಥ ಬೇಹುಗಾರನನ್ನು ಕಳಿಸ್ಬೇಕು—ಎಂದು ಕೊಂಡ.

(ಆದರೆ ಆನ್ ನಗರದಲ್ಲಿ ನಡೆಯುತ್ತಿದ್ಧುದು రాಜధానిಯಿಂದ బంದ ಸಮರ್ಥ ಬೇಹುಗಾರನಿಗೂ ತಿಳಿಯುತ್ತಿತ್ತೊ ಇಲ್ಲವೋ. ಅಷ್ಟು ರಹಸ್ಯ ವಾಗಿತ್ತು ಮಹಾ ಅರ್ಚಕನ ಕಾರ್ಯಾಚರಣೆ. ಆರು ದಿನಗಳ ಅಖಂಡ ಅರ್ಚನೆಯಯೊಂದನ್ನು ಆ ಮೊದಲೇ ಅವನು ನೆರವೇರಿಸಿದ್ದ. ಅಂಥ ಪೂಜೆಯ ಸುದ್ದಿಯನ್ನು ಹೊರಗೆ ಹಬ್ಬಿಸಿ, ಗುಟ್ಟಿನಲ್ಲಿ ಆತ ಐಗುಪ್ತದ ಈಶಾನ್ಯ ಗಡಿಗೆ ಹೋಗಿ ಬಂದಿದ್ದ. ಕೇವಲ ಐದು ನೂರು ಜನ ಇದ್ದ ಕಾವಲು ಪಡೆ. ಐಗುಪ್ತದ ಸೇನಾಬಲವೇ ಅಷ್ಟು. ಆ ದಂಡಿನ ಅಧಿಪತಿಗೆ ಧಾರ್ಮಿಕ ಮಹಾ ಗುರು బంದರೆಂದು ಸಂಭ್ರಮ....) ಮಹಾ ಅರ್ಚಕ ನೀಡಿದ್ದ ಉತ್ತರ ಓದಿ ಅಮಾತ್ಯನಿಗೆ ಸಂತೋಷವಾಗ ಲಿಲ್ಲವೆಂದು ದೂತನಿಗೆ ಬೇಸರ. ಪಾಯಶಃ ಬಹುಮಾನ ಸಿಗಲಾರದು ಎಂದು ಮೂಡಿದ್ದ ಶಂಕೆ ಆ ಕ್ಷಣದಲ್ಲೇ ಸತ್ಯ ಸಂಗತಿಯಾಯಿತು. “ ಹೋಗು, ” ಎಂದುಬಿಟ್ಟ ಅಮಾತ್ಯ. ಬೇಡವಾದುದನ್ನು ದೂರ ಸರಿಸುವವನಂತೆ ಕೈ ಆಡಿಸಿ.

ಸರು ಅಧಿವೇಶನ ಮತ್ತು ಪೆರೋನ ಔತಣ-ಒಂದೇ ದಿನ. ಅಮಾತ್ಯ ಭವನದ ಹಿರಿಯ ಲಿಪಿಕಾರ ಸೆನೆಬ್ ಅತಿಥಿಗೃಹಕ್ಕೆ బంದು ಕುಳಿತು,ಗೊಂದಲಕ್ಕೀಡಾದವನಂತೆ ಮೆನೆಪ್ ಟಾನೆಡೆಗೆ ನೆಟ್ಟನೋಟ ಬೀರುತ್ತ, ಸಿಕ್ಕುಗಂಟು ಬಿಡಿಸುವವನ ತಲ್ಲೀನತೆಯಿಂದ ಒಂದೊಂದೇ ಎಳೆಯನ್ನು ಜಗ್ಗಿದ: “ ಒಂದು ತಿಂಗಳ ಹಿಂದೆ ಈ ಔತಣ ಏರ್ಪಡಿಸಿದ್ದರೆ ಅದು ನೀರಾನೆ ಪ್ರಾಂತದ ನಾಯಕನ ಗೌರವಾರ್ಥ ಆಂತ ಧೈರ್ಯವಾಗಿ ಹೇಳಬಹುದಿತ್ತು. ಅವತ್ತು ಔತಣದ ಪ್ರಸ್ತಾಪ ಪೆರೋ ಮಾಡಿದ್ದೇ ಆ ದೃಷ್ಟಿಯಿಂದ. ಆದರೆ, ದಂಗೆ ಎದ್ದವರಿಗೆ ಔತಣ అంದರೆ ಲೋಕ ಏನೆಂದೀತು? ಅದಕ್ಕೇ ಗೇಬು