ಪುಟ:Mrutyunjaya.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ದಂಪತೀನ ಔತಣಕ್ಕೆ ಅರಮನೆಗೆ ಕರೆಸಿ ಅಂದ್ರು, ನಾಳೆಯ ಔತಣದಲ್ಲಾ ದರೋ ಸರು ಸದಸ್ಯರಿರುತಾರೆ,ಗೇಬು ದಂಪತಿಯೂ ಇರ‍್ತಾರೆ, ಜತೆಗೆ ನೀವೂ ಇರ‍್ತೀರಿ—ಅಷ್ಟೆ.” ಮೆನೆಪ್ ಟಾ ಕೇಳಿದ: “ಮಹಾ ಅರ್ಚಕರ ಉತ್ತರ ಬಂದ ಮೇಲೆ ಈ ಸರು ಅಧಿವೇಶನ ಕರೆದಿರಬೇಕು." “ಹೌದು. ಆ ಉತ್ತರ ನಾನು ನೋಡಿದ್ದೇನೆ. ಬಹಳ ಸ್ಪಷ್ಟ. ಅನುಕೂಲವಾದಾಗ ಬರ‍್ತೇವೆ-అంದಿದ್ದಾರೆ." “ಮಹತ್ವದ ಸಮಸ್ಯೆ ಉದ್ಭವಿಸಿದಾಗ ಹಿరి ಸಲಹೆಗಾರರ ಮಹಾ ಮಂಡಲಿಯ ಅಧಿವೇಶನ ಸೇರ‍್ತದೆ, ಅಲ್ಲವಾ ?” “ಸರಿ. ಆದರೆ ನಿಮ್ಮ ಪ್ರಾಂತದಲ್ಲಿ ಬಂಡಾಯವಾದಾಗ ಅಧಿವೇಶನ ಕರೆದಿರ್ಲಿಲ್ಲ !" “ಬಹುಶಃ ಅದು ಮಹತ್ವದ ಪ್ರಶ್ನೆಯಲ್ಲ!” "ಹಾಗೆ ತಿಳ್ಕೊಬೇಡಿ. ಆ ವೇಳೆಗೆ ಪ್ರಭುತ್ವದ ಚೌಕಮಣೆ ಆಟ ಶುರುವಾಗ್ಬಿಟ್ಟಿತ್ತು ಇವತ್ತು ಐಗುಪ್ತದಲ್ಲಿ ಯಾವ ಸಮಸ್ಯೆ ಇದ್ದರೂ ಅದು ఆ ಚೌಕಮಣೆ ಅಟದ ಒಂದಂಗವಾಗಲೇಬೇಕು. ” “ಸ್ವಾರಸ್ಯವಾಗಿದೆ.” "ఇంಥ ಸ್ವಾರಸ್ಯ ఇರೋದ್ರಿಂದಲೇ ರಾಜಧಾನಿಯ ಜೀವನ ಸಹ್ಯ. ఇಲ್ದೇ ಹೋಗಿದ್ರೆ, ಬಂದದ್ದಿಷ್ಟು ಹೋದದ್ದಿಷ್ಟು ಉಳಿದದ್ದಿಷ್ಟು ಅಂತ ಬರೆ ದಿಡೋ ಲೆಕ್ಕಿಗರದೇ ಬಹುಸಂಖ್ಯೆಯಾಗಿ, ಬೇರೆಯವರಿಗೆ ಜಾಗವೇ ಇರುತ್ತಿರಲಿಲ್ಲ.” “ಸರು ಅಧಿವೇಶನ ಈ ಮೊದಲು ನೀವು ನೋಡಿದ್ದುಂಟೆ?” "ಓಹೋ ! ಎರಡು ಮೂರು ಸಲ ನೋಡಿದ್ದೇನೆ. ನಾಳೆಯದೇನೋ ಗೋಪ್ಯವಂತೆ. ನಾವು ಯಾರೂ ಬರಬಾರದಂತೆ." "ಹಾಗಾ?" “ಗೋಪ್ಯ ಅನ್ನೋದು ಒಂದು ತಮಾಷೆ. ಅರಮನೆಯಲ್ಲಿ ಕಿವಿಯಿಲ್ಲದ ಗೋಡೆ ಇಲ್ಲ.” ಸಂಭಾಷಣೆಯನ್ನು ಮಾನವಾಗಿ ಕೇಳುತ್ತ నింತಿದ್ದ ಬಟಾ ಅಂದ :