ಪುಟ:Mrutyunjaya.pdf/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ಕಡೆಗೆ ನೀನು ಬಿರುನೋಟ ಬೀರಬಾರದು. ಆತನನ್ನು ಪದೇ ಪದೇ ದಿಟ್ಟಿಸ್ಬಾರದು. ಅದರಿಂದ ಅವನು ಅಸಹ್ಯಪಟ್ಕೋತಾನೆ. ಆತನಾಗಿಯೇ ನಿನ್ನನ್ನು ಮಾತನಾಡಿಸುವವರೆಗೆ ತಲೆ ತಗ್ಗಿಸಿ ಕುಳಿತುಕೊ. ಅವನು ನಿನ್ನನ್ನು ಮಾತ ನಾಡಿಸಿದಾಗ ಮಾತ್ರ ನೀನು ಉತ್ತರವೀಯಬೇಕು...ಅವನು ನಕ್ಕಮೇಲೆ ನೀನು ನಗಬೇಕು. ಆದುದರಿಂದ ಅವನ ಹೃದಯಕ್ಕೆ ಆನಂದವಾಗ್ತದೆ.... ಏನೋ... ನೆನಪಾಯ್ತೂಂತ ಇಷ್ಟು ಹೇಳ್ಬಿಟ್ಟೆ. ನಿಜ అంದರೆ, ನಾಯಕರಾದ ನಿಮಗೆ ఇంಥ ಹಿತನುಡಿಯ ಅಗತ್ಯವೇ ఇల్ల....భాರೀ ಔತಣ್ ನಲ್ವತ್ತೆಂಟು ಬಗೆಯ ಬೇಯಿಸಿದ ಮಾಂಸ, ನಲ್ವತ್ತು ವಿಧದ ರೊಟ್ಟಿ; ಇಪ್ಪತ್ತನಾಲ್ಕು ರೀತಿಯ ಪಾನೀಯಗಳು (ಬಾಯಿ ಚಪ್ಪರಿಸಿದ ಬಟಾನನ್ನು ನೋಡಿ ನಕ್ಕು) ಹನ್ನೊಂದು ವಿಧದ ಹಣ್ಣು ಗಳು..ಇವತ್ತು ಹೊಟ್ಟೆ ಬಿರಿಯೋ ಹಾಗೆ ತಿಂದ್ಬಿಡಿ. ನಾಳೇದು ನಾಳೆ ನೋಡ್ಕೋಳ್ಳೋಣ ........ ಆದರೆ ಪೆರೋ ಮಾತ್ರ–” ಬಟಾ ಕೇಳಿದ: “ಏನು?" “ನೀವು ಉಣೋದನ್ನು ನೋಡ್ತಾ ಕೂತಿರುತ್ತಾರೆ. ಅವರದು ಯಾವಾಗಲೂ ಮಿತ ಆಹಾರ. ಪ್ರತಿಯೊಂದೂ ಕ್ರಮಬದ್ಧ. ಪೆರೋ ಆರೋಗ್ಯ ಕೆಟ್ಟು ಪ್ರಜೆಗಳು ಗೋಳಾಡೋ ಹಾಗೆ ಆಗಬಾರದಲ್ಲ ?” “ಲಿಪಿಕಾರಯ್ಯ ನಾನು ತಮಾಷೆ ಮನುಷ್ಯ. ಹೇಳ್ಬಿಡ್ತೇನೆ. ನನಗೆ ಯಾರಾದರೂ ಪೆರೋ ಪದವಿ ಕೊಡ್ತೇವೆ ಅಂದರೆ, ದಮ್ಮಯ್ಯ ಬೇಡ ಅನ್ತೇನೆ !” ಸೆನೆಬ್ ಎದ್ದು ಮೆನೆಪ್ ಟಾಗೆ ನಮಿಸಿ, “ನಾಳೆ ನೆಮ್ಮನ್ನು ಕರಕೊಂಡು ಬರೋದಕ್ಕೆ ಯಾರನ್ನು ಕಳಿಸ್ತಾರೋ ತಿಳೀದು. ಅಂತೂ ಮುಚ್ಚಂಜೆ ಹೊತ್ತಿಗೆ ಸಿದ್ದವಾಗಿರಿ," ಎಂದು ಹೇಳಿ, ಹೊರಬಿದ್ದ.

                                *                *               *              *

ಅಂದು ಬೆಳಗಿನಿಂದಲೇ ಅರಮನೆಯಲ್ಲಿ ನಿತ್ಯಕ್ಕಿಂತ ಹೆಚ್ಚು ಗದ್ದಲ. ಒಂದೊಂದಾಗಿ ಹಲವಾರು ಪಲ್ಲಕಿಗಳು ಬಂದುವು. ಅವುಗಳಲ್ಲಿ ಕುಳಿತಿದ್ದವರು