ಪುಟ:Mrutyunjaya.pdf/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೮ ಮೃತ್ಯುಂಜಯ " ನಮ್ಮ ನಾಯಕರಿಗೆ అలంಕಾರ ? ನಾನು ನೋಡ್ಕೋಳ್ತೇನಪ್ಪ--- ಸಾಕು." " ಔತಣದ ದಿವಸ ಮಧ್ಯಾಹ್ನ ಎಲ್ಲರಿಗೂ ಅಲ್ಪ ಉಪಾಹಾರ.” ... ಅಷ್ಟೇ ಸಾಕು. ಬರಲಿ...." .....ಅಪರಾಹ್ನದ ಬಿಸಿಲು ಕಡಿಮೆಯಾದ ಮೇಲೆ ಹಿರಿಯ ಸಲಹೆಗಾರರು ಅಮಾತ್ಯ ಭವನದಿಂದ ಹೊರಕ್ಕೆ ಬಂದರು, ಉದ್ಯಾನದಲ್ಲಿ ಅತ್ತಿತ್ತ ನಡೆದರು. ಕಣ್ಣುಮುಚ್ಚಾಲೆಯಾಡುತ್ತ ಆಗೊಮ್ಮೆ ಈಗೊಮ್ಮೆನುಸುಳುತ್ತಿದ್ದ ತಣ್ಣನೆಯ ಗಾಳಿಗೆ ಅವರು ಮೈಯೊಡ್ಡಿದರು. ಬಳಿಕ ಆ ಹತ್ತು ಜನರೂ ಪ್ರಾಕಾರದ ಹಿಂಬಾಗಿಲು ತೆರೆಯಿಸಿ ಅರಮನೆಯ ನದೀತಟಕ್ಕೆ ಹೋದರು, ವಿಹಾರಾರ್ಥ. ಇನೇನಿಯನೂ ಅವನ ಸಹಾಯಕರೂ ಹೊರಗೆ ಕಾಣಿಸಲಿಲ್ಲ. ದೇವಸೇವಕರು ಲಿಪಿಕಾರರು ಮತ್ತು ಬೇರೆ ಕೆಲವರ ಔತಣಕ್ಕೆಂದು ಮಂದಿರದ ಪ್ರಾಂಗಣವನ್ನು ಮೆನ್ನ ಸ್ವಚ್ಛಗೊಳಿಸಿದ. ಬಟಾ ಆಲೆಯುತ್ತ ಆ ಕಡೆಗೆ ಬಂದುದನ್ನು ಅರಿತರೂ ತಲೆಯೆತ್ತಿ ನೋಡಲಿಲ್ಲ. ಬಟಾ ಮೆನೆಪ್ಟಾಗೆ ಸುದ್ದಿ ತಿಳಿಸಿ ಟಿಪ್ಪಣಿ ನೀಡಿದ: " ಬಂದರಪ್ಪ ಗೇಬು. ಎರಡು ಪಲ್ಲಕೀಲಿ. ಒಂದರಲ್ಲಿ ಗಂಡ ಹೆಂಡತಿ. ಇನ್ನೊಂದರಲ್ಲಿ ಅವರ ಮೂವರು ಹುಡುಗೀರು. ದೊಡ್ಡವರಿಬ್ಬರೂ ಆಗಲೇ ಮದುವೆಗೆ ಸಿದ್ಧವಾಗಿದ್ದಾರೆ. ಈ ಗೇಬು ಲಿಷ್ಟ್ ನಲ್ಲಿ ಊಟ ಮುಗಿಸಿ,ಚುಟುಕು ನಿದ್ದೆ ಮಾಡಿ, ಅಲಂಕರಿಸಿಕೊಂಡು ದೋಣಿಹತ್ತಿ ಹೊರಟು ಬಂದಿದ್ದಾನೇಂತ ಕಾಣ್ತದೆ. ವಿಚಿತ್ರ ಪ್ರಾಣಿ, ಊರಿಗೆ ಕರಕೊಂಡು ಹೋಗ್ತೇನೆ ಹಾಗೆ ಹೀಗೆ ಅಂತ ಕೈಹಿಡಿದು ಕುಣಿದೋನು ಒಂದು ಸಲವಾದರೂ ಬಂದ್ನೆ? ಈಗಲೂ ನೇರವಾಗಿ ಮಹಾಮನೆಗೆ ನುಗ್ದ. ಇಲ್ಲಿಗೆ ಬರೋ ಲಕ್ಷಣ ಕಾಣಿಸ್ಲಿಲ್ಲ.” ನಾಯಕನೆಂದು: “ ಹೋಗಲಿ, ಬಿಡು.. ಅವತ್ತು ಏನೋ ಒಂದು ಪಾತ್ರ ಕೊಟ್ರು. ಅದನ್ನು ಅಭಿನಯಿಸಿದ. ಮುಖವಾಡ ತೆಗೆದಿಟ್ಮೇಲೆ, ಅಭಿನಯಿಸಿದ್ದನ್ನು ಮರೆತೇ ಬಿಟ್ಟ. ಇವತ್ತು ಇಂಥ ಪಾತ್ರ ಅಂತ ಮೇಲಿನವರು ಹೇಳಿದ್ರೆ, ಆ ಪಾತ್ರ ಧರಿಸ್ತಾನೆ.”