ಪುಟ:Mrutyunjaya.pdf/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೨೯೯

" ನಿನಗೆ ಕೋಪ ಬರೋದು ಯಾವತ್ತು ಮೆನೆಪ್ಟಾ ಅಣ್ಣ ?"
ನಸುನಕ್ಕು ಮೆನೆಪ್ಟಾ ಆಂದ : “ ನಮಗೆ ಇಲ್ಲೇನು ಕೆಲಸ-ಇಲ್ಲಿಂದ ಹೊರಡ್ಬೇಕು ಅಂತ ಅನಿಸ್ತದೆ. ಒಮ್ಮೊಮ್ಮೆ. ಪರಿಚಯ ಇಲ್ಲದ ನದಿಯ ಪ್ರವಾಸದ ಹಾಗಿದೆ ಇದು." "ಅದೂ ಯಾರದೋ ದೋಣಿ!" " ಹೆಚ್ಚೆಂದರೆ ಒಂದು ತಿಂಗಳೊಳಗೆ ವಾಪಸಾಗ್ತೇವೇಂತ ಹೇಳಿದ್ವಿ. ಆ ಅವಧಿ ಆಗಲೇ ಕಳೆದುಹೋಯ್ತು, ಇನ್ನು ಕುಯಿಲಿನ ವೇಳೆ ಹತ್ತಿರವಾಗ್ತದೆ,
ನಾವಿನ್ನು ಬೇಗ್ನೆ ಇಲ್ಲಿಂದ ಹೊರಡ್ಬೇಕು. ಇವತ್ತೇ ಅಮಾತ್ಯರ ಹತ್ತಿರ ಈ
ವಿಷಯ ಮಾತಾಡ್ತೇನೆ." ಔತಣಕೂಟದಲ್ಲಿ?" "ಹೊರಟು ಬರುವಾಗ." ಮೂಗಿನ ಹೊಳ್ಳೆಗಳನ್ನು ಅಗಲಿಸಿ ದೀರ್ಘ ಉಸಿರೆಳೆಯುತ್ತ ಬಟಾನೆಂದ : “ ಹೋಯ್ತು ಒಳಗೆ ! ಒಂದು ಹೊಳ್ಳೆಯಿಂದ ಸುಗಂಧ ದ್ರವ್ಯ.ಇನ್ನೊಂದರಿಂದ ಭಕ್ಷ್ಯ ಭೋಜ್ಯ ಪಾನೀಯ! ಎಂಥ ಸುವಾಸನೆ! ನಡಿಯಣ್ಣ. ಒಂದಿಷ್ಟು ಮೈ ತೊಳಕೋ-ತಪ್ಪು-ಮೈ ತೊಳೀತೇನೆ. ನಿನ್ನ ಪಾದರಕ್ಷೇನ ಇವತ್ತು ನಾನು ಚೊಕ್ಕಟ ಮಾಡ್ಬೇಕು.” “ ಆ ಕೆಲಸ ಮಾತ್ರ ಆಗ್ಲೇ ಆಯ್ತು ಬಟಾ.” " ಸರಿ, ಸರಿ. ಒಂದು ಮಾತು ಹೇಳ್ತೀನೆ. ಅವತ್ತು ಪೆರೋ ಎದುರಲ್ಲಿ ಮಾಡಿದ ಹಾಗೆ ತಟಕ್ಕನೆ ತಿರುಗಿ 'ಬಟಾ!' ಅಂತ ಕೂಗ್ಬೇಡ. ನಾನು ಅಲ್ಲಿರೋದಿಲ್. ಬೆಕ್ ಔಟ ಯಾರೂ ಇರೋದಿಲ್ಲ." " ಬಾಲ್ಯದಲ್ಲಿ ಪೆಪೈರಸ್ ದೋಣಿಯಲ್ಲಿ ಕೂತು ಒಬ್ಬನೇ ಭಾರೀ ಮಡು ಗಳನ್ನು ದಾಟಿ ಹೋಗಿದ್ದೇನೆ, ಬಟಾ.” " ಸಂತೋಷ, ಅಣ್ಣ, ಅದೀಗ ಮೊಸಳೆಗೆ ಹೆದರದ ಗಂಡೆದೆ.” ಮೆನೆಪ್ಟಾ ಸಿದ್ಧನಾದ. ಕೌಪೀನ. ಅದರ ಮೇಲೆ ನೆರಿಗೆ ಹಿಡಿದು ನಡು ವಸ್ತ್ರ ನಡುಪಟ್ಟಿ. ಮೈಗೆ ತುಸುಮಾತ್ರ ಸುಗಂಧದ್ರವ್ಯ ಲೇಪನ. ಸುವಾಸನೆಯ ಎಣ್ಣೆ ಇಟ್ಟು ಬಾಚಿದ-ತಲೆಗೂದಲು. ಕೊರಳಲ್ಲಿ ನೀಲ ಕವಡೆಸರ, ಬೆರಳಲ್ಲಿ ಬೆಳ್ಳಿಯುಂಗುರ.