ಪುಟ:Mrutyunjaya.pdf/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೦೧ ಆಯ್ತು. ಎಲ್ಲ ಕುಶಲ, ಅಲ್ಲವೆ?"ಎಂದ.

     ಹ್ಞ. ನೀವು?"
    "ಕುಶಲವೇ, ಲಿಷ್ಟನ ಜೀವನ ಅಂದರೆ,ರಣಬಿಸಿಲಿನಲ್ಲಿ ಅಂಜೂರಮರದ

ನೆರಳಿನಲ್ಲಿ ಮಲಗಿದ ಹಾಗೆ. ನಿಮ್ಮನ್ನೊಮ್ಮೆ ನಮ್ಮೂರಿಗೆ ಕರಕೊಂಡು ಹೋಗ್ಬೇಕು. ಹಿಂದೆಯೂ ಈ ಮಾತು ಹೇಳಿದ್ದೆ. ಅಲ್ಲವಾ? ನಾನೊಬ್ಬ! ಬನ್ನಿ." ಹೊಸ್ತಿಲ ಬಳಿ ನಿಂತು ಮೆನೆಪ್ ತಿರುಗಿ ನೋಡಿ, ಬಟಾ ಔಟ ಬೆಕ್ರೆಡೆಗೆ ಮುಗುಳುನಗೆ ಬೀರಿದ. ಆ ಮಂದಹಾಸಕ್ಕೆ ಸ್ಥಿರಸ್ಥಾನ ನೀಡಿ, ಆತ ಒಳಕ್ಕೆ ಕಾಲಿರಿಸಿದ. ಆತ್ಮವಿಶ್ವಾಸದ ನಡಿಗೆ. ಅವನೀಗ ಈ ಬದುಕಿಗೆ ಅಪರಿಚಿತನಲ್ಲ.

         ಔತಣ ಸಮಾರಂಭಕ್ಕೆ  ಪೂರ್ವಭಾವಿಯಾದ ಕಲರವ. ದಾಸದಾಸೀ

ಜನರದೇ ಇಲ್ಲಿ ಮೇಲುಗೈ. ಅಮಾತ್ಯನಿದ್ದೆಡೆಗೆ ನಾಯಕ ಸಾಗತೊಡಗಿದ ರೀತಿ ಕಂಡು ಗೇಬುಗೆ ತುಸು ಆಶ್ಚರ್ಯ. ಆತ ಬೇಗನೆ ಹೆಜ್ಜೆ ಇರಿಸಿ ತಾನೇ ಮುಂದಾದ.

       ವಯಸ್ಸಾದ ಒಬ್ಬ ವ್ಯಕ್ತಿಯೊಡನೆ ಮಾತನಾಡುತ್ತ ಅಮಾತ್ಯ ನಿಂತಿದ್ದ.

ಎದೆ ಪಟ್ಟಗೆ ಎಂದಿನದಲ್ಲ, ಬೇರೆ. ಹೆಚ್ಚು ಬೆಲೆಯದು. ಅಧಿವೇಶನಕ್ಕೆಂದು, ಔತಣಕ್ಕೆಂದು ಧರಿಸಿದ್ದು, ಬಳಲಿದ ಮುಖ, ದಿನವಿಡೀ ಜರಗಿದ ಸಭೆಯ ಪರಿಣಾಮ.

       ಗೇಬು ಮತ್ತು ಮೆನೆಪ್ಟಾ ತನ್ನೆಡೆಗೆ ಬರುತ್ತಿದ್ದುದನ್ನು,  ಆಗಲೇ ಆ

ಅಮಾತ್ಯ ಗಮನಿಸಿದ್ದ. ಅವರು ತೀರಾ ಹತ್ತಿರ ಬಂದಾಗಲಷ್ಟೇ ಆತ ಅವರೆಡೆಗೆ ಹೊರಳಿದ.

     "ಬನ್ನಿ ಮೆನೆಪ್ ಟಾ,"  ಎಂದು  ನುಡಿದ,ತನ್ನ   ಜತೆ  ಇದ್ದವನಿಗೆ.

“ಹೆಖ್ವೆಟ್, ನೀರಾನೆ ಪ್ರಾಂತದ ನಾಯಕರನ್ನು ನಿಮ್ಮ ಹತ್ತಿರ ಕೂಡಿಸಿಕೊಳ್ಳಿ, ಒಂದು ಪಕ್ಕದಲ್ಲಿ ಹೆಖ್ವೆಟ್, ಇನ್ನೊಂದು ಪಕ್ಕದఎంಲ್ಲಿ ಗೇಬು, ಗೇಬು,ಇವರಿಗೆ ಹೆಖ್ವೆಟ್ ರ ಪರಿಚಯ ಮಾಡ್ಕೊಡಿ"ಎಂದ, ಅಷ್ಟು ಹೇಳಿ, ಔತಣದ ಪೀಠ ವ್ಯವಸ್ಥೆಯತ್ತ ಕಣ್ಣು ಹಾಯಿಸಲು ನಡೆದ.

      ಹಿಂದೆ  ಕಂಡು  ಬಂದಿದ್ದ   ಆತ್ಮೀಯತೆ   ಈಗ ಇಲ್ಲ-ಎಂಬ  ಭಾವನೆ