ಪುಟ:Mrutyunjaya.pdf/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೦೩ ಅಮಾತ್ಯನದು. ಎಡಬದಿಯಲ್ಲಿ ಮಹಾರಾಣಿ ಮತ್ತಿತರರಿಗಾಗಿ ಪೀಠಗಳು.

ಆ ಎಲ್ಲ ಆಸನಗಳ ಮುಂದೆಯೂ ಪುಟ್ಟ ಮೇಜುಗಳು.
        ಪೆರೋಪೀಠದ ಬಲಬದಿಯಲ್ಲಿ ಎರಡು ಪೀಠಗಳ ಮೇಲೆ ಹೆಖ್ವೆಟ್

ಮತ್ತು ಮೆನೆಪ್ ಟಾ ಕುಳಿತರು.

     ಆತ 'ಬಾ ಮಗು'ಎಂದಿದ್ದ.   ವೃದಾಪ್ಯದ ತೊದಲು ಇರಬಹುದು-

ಎಂದುಕೊಂಡ ಮೆನೆಪ್ ಟಾ.

     ಕುಳಿತು ಮಗ್ಗುಲಿಗೆ ದೃಷ್ಟಿಬೀರಿ, ಹೆಖ್ವೆಟ್ ನುಡಿದ:
     “ಹೇಳು ಮಗು. ನಿಮ್ಮ ಬಂಡಾಯ ಇತ್ಯಾದಿ ಹೇಗೆ ಮಾಡಿದಿರಿ.

ಹೇಳು."

     ಅದಂತೂ ತೊದಲಾಗಿರಲಿಲ್ಲ. ಅಹಂಭಾವದ ಪರಾಕಾಷ್ಠೆ  ಎನಿಸಿತು

ನಾಯಕನಿಗೆ ವಯಸ್ಸಾದ ಆ ಕಣ್ಣುಗಳಲ್ಲಿ ಮಿಂಚಿದ ತುಂಟ ನಗೆ ಅವನಿಗೆ ಅಸಹನೀಯವಾಯಿತು..

     ಅವನೆಂದ :
    "ಆದು ದೊಡ್ಡ ಕಥೆ, ತಾತ.”
    ತಾತ ! ಹೆಖ್ವೆಟ್  ಬೆಚ್ಚಿಬಿದ್ದ. (ತುಳಿದದ್ದು ಸರ್ಪದ ಹೆಡೆ.)

ಉಗುಳು ನುಂಗಿದ. “ದೊಡ್ಡದಲ್ಲೆ ಸುಮ್ಮನೆ ಕ್ಂಪಿಸಿತೆ ರಾಜ ಧಾನಿ ? ಅದನ್ನು ಮರೆಮಾಚೋಕೆ ಯತ್ನಿಸಿ ಏನು ಫಲ ? ಬಿರುಕು ಬಿರುಕೇ, ಅದನ್ನು ಸಕಾಲದಲ್ಲಿ ಮುಚ್ಚೋದು ಜಾಣತನ. ಅನಗತ್ಯ ಆಟಾಟೋಪ ನನಗೆ ಹಿಡಿಸೋದಿಲ್ಲ. ಶಾಂತಿ ಮುಖ್ಯ ಶಾಂತಿ,"ಎಂದ. ಸುಗಂಧದ ಅಲೆ ಮೆನೆಪ್ ಟಾನ ಮೂಗಿಗೆ ಅಪ್ಪಳಿಸಿತು. ಆತ ತಿರುಗಿ ನೋಡಿದ. ಗೇಬು ತನ್ನ ಪತ್ನಿ ನೆಹನವೇಯ್ಟ್ ಳೊಡನೆ ಬರುತ್ತಿದ್ದ. ಹಿಡಿತ ದಿಂದ ನುಸುಳಿ ಹೋಗುತ್ತಿದ್ದ ಯೌವನವನ್ನು ಎತ್ತಿ ಬಿಗಿದಿದ್ದಳು, ವಿವಿಧ ಕಟ್ಟುಗಳಲ್ಲಿ. ಬಲಸ್ತನದ ಕೆಳಗಡೆ, ಭುಜವನ್ನು ಹಾದು ಬಂದಿದ್ದ ದುಕೂಲದ ಗಂಟು. ಪಾರದರ್ಶಕವೆನಿಸುವಷ್ಟು ತೆಳ್ಳಗಿನ ಮಡಿಕೆ ಮಡಿಕೆಯಾದ ಬಿಳಿಯ ವಸ್ತ್ರ ಪಾದಗಳ ತನಕ ಇಳಿದಿತ್ತು. ಕಣ್ಣುಗಳಿಗೆ ಕಾಡಿಗೆ. ಕೂದಲು ಕಿತ್ತು ತೆಳುಗೊಳಿಸಿದ ಹುಬ್ಬುಗಳು.. ಅಧರಗಳಿಗೆ ರುಧಿರ ವರ್ಣ, ಬಿಳಿಯ ಚೂರ್‍ಣ ಲೇಪನ, ಮುಖಕ್ಕೆ, ಕತ್ತು, ಕಿವಿ ಕಂಠಗಳಿಗೆ ಆಭರಣ, ತೋಳ ಬಂದಿ.