ಪುಟ:Mrutyunjaya.pdf/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೪ ಮೃತುಂಜಯ ಭುಜಮಟ್ಟದಲ್ಲಿ ಕತ್ತರಿಸಿ ಗುಂಗುರುಗೊಳಿಸಿದ್ದ ಕೇಶರಾಶಿ, ಅದರ ಮೇಲೆ ಶಿರೋಪಟ್ಟಿ .

      ಗೇಬು ಹತ್ತಿರ ಬಂದು ನುಡಿದ.
      'ಮೆನೆಪ್ ಟಾ. ನನ್ನ ಹೆಂಡತಿ ನಿನಗೆ ಕೃತಜ್ಞತೆ ಸಲ್ಲಿಸೋದಕ್ಕೆ

ಬಂದಿದ್ದಾಳೆ.

     ನಾಯಕ ಎದ್ದು ಮುಗುಳುನಗೆಯನ್ನು ಹಿರಿದುಗೊಳಿಸಿ,ಲಲನಗೆ ನಮಿ

ಸಿದ. ನೀರಾನೆ ಪ್ರಾಂತದಲ್ಲಿ ಆಕೆಯನ್ನು ಆತ ಕಂಡೇ ಇರಲಿಲ್ಲ, ನೆಹನ ವೇಯ್ಟಳ ಕೆಂಪು ತುಟಿ ಕುಣಿಯಿತು.

       ಜೀವಂತ ಕಬಳಿಸುವವಳಂತೆ ಅವನ ಮೈಮೇಲೆ ಕಣ್ಣಾಡಿಸುತ್ತ ಆಕೆ 

ಅಂದಳು :

     “ನಮ್ಮ ವಸ್ತು ಒಡವೆಗಳ ಆಸೆ ಬಿಟ್ಟಿದ್ದೆ, ಎಲ್ಲ ಜೋಡಿಸಿ ಎರಡು 

ದೊಡ್ಡ ಪೆಟಾರಿಗಳಲ್ಲಿ ಭದ್ರವಾಗಿ ಇಟ್ಟಿದೀರಂತೆ. ನಿಮ್ಮನ್ನು ಲಿಷ್ಟ್ ಗೆ ಕರ ಕೊಂಡ್ಬನ್ನಿ ಆಂತ ಗೇಬುಗೆ ಆವತ್ನಿಂದ ಹೇಳ್ತಾನೆ ಇದೇನೆ. ಇವನನ್ನು

ನಂಬ್ಕೊಂಡು ಏನು ತಾನೇ ಸಾಧ್ಯ? ನೀವೇ ಬನ್ನಿ. ನಿಮ್ಮ ಪ್ರಾಂತಕ್ಕೆ 

ವಾಪಸಾಗುವಾಗ ನಮ್ಮಲ್ಲಿ ಇಳಿದು, ಎರಡು ದಿನ ಇದು ಹೋಗಿ.”

    “ಆಮಂತ್ರಣಕ್ಕಾಗಿ  ಕೃತಜ್ಞ. ಆದರೆ ಊರು ಬಿಟ್ಟು ಬಹಳ ದಿನ

ಆಯ್ತು."

    “ಏನೇ ಇದ್ದರೂ ನಮ್ಮಲ್ಲಿಗೆ ನೀವು ಬರಲೇ ಬೇಕು.”
    ಗೇಬು ಆತನಿಗೆಂದ :
    “ನೆಹನ ಕುಣಿಕೆ ಬೀಸಿದ್ಮೇಲೆ ತಪ್ಪಿಸ್ಕೊಳ್ಳೋದು ಕಷ್ಟ.  ಒಪ್ಕೊಂಡ್ಬಿಡಿ

ಮೆನೆಪ್ ಟಾ."

    ನಾಯಕ ನಗೆಯ ಉತ್ತರವನ್ನಷ್ಟೇ ನೀಡಿದ. ಆಕೆಯ ದುಕೂಲದ 

ಹೊರಗಿದ್ದ ಬಲ ಮೊಲೆಯ ತೊಟ್ಟಿನತ್ತ ಆತನ ದೃಷ್ಟಿ ಹರಿಯಿತು.ಅವಳ ತುಟಿ ಮತ್ತೊಮ್ಮೆ ಕಂಪಿಸಿತು.

   ಹೆಖ್ವೆಟ್'ಗೆ ದಾಹದ ಅನುಭವ, ಕುಳಿತಲ್ಲಿಂದ ನೆಹನವೇಯ್ಟಳ ನಡು 

ವನ್ನು ಎವೆ ಇಕ್ಕದೆ ದಿಟ್ಟಿಸುತ್ತಿದ್ದ ಆತ, ಕಂಪಿಸಿದ ಅವಳ ಆಧರವನ್ನು ಕಂಡು, “ನನ್ನನ್ನು ಕರೆಯೋದಿಲ್ವ ಮಗು?" ಎಂದ.