ಪುಟ:Mrutyunjaya.pdf/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೦೫ ಯಾರು ಈ ಪ್ರಾಣಿ ? ಎನ್ನುವ ಭಾವದಿಂದ ಆಕೆ ಗೇಬುವನ್ನು ನೋಡಿದಳು. "ಹೆಖ್ವೆಟ್, ಮರೆತ್ಬಿಟ್ಟಿಯಾ ?"ಎಂದ ಆತ. “ಓ! ತಾತಯ್ಯ! ಗುರುತೇ ಸಿಗಲಿಲ್ಲ. ಬಹಳ ಸೊರಗಿದ್ದಾರೆ.”ಒಂದು ಕಾಲದಲ್ಲಿ ನೀನು ಪೆರೋಗೆ ಗೋಪ್ಯದ ಪ್ರಿಯತಮೆಯಾಗಿದ್ದೆ; ಈಗ ನಿನಗೆ ವಯಸ್ಸಾಗಿದೆ. ಯಾರು ಹತ್ತಿರ ಸೇರಿಸೋದಿಲ್ಲ__ಎಂದು ಹೇಳಲು ಹೊರಟ ಅವಮಾನಿತ ಹೆಖ್ವೆಟ್, ಪದಗಳನ್ನು ಹಿಂದಕ್ಕೆ ತಳ್ಳಿ, ನರಳಿದ ಸದ್ದುಮಾಡಿ, ರಾಣೀವಾಸದ ಕಡೆಯಿಂದ ಬರತೊಡಗಿದ ಮಹಾರಾಣಿಯನ್ನು, ರಾಜಕುಮಾರಿಯರಿಬ್ಬರನ್ನು, ಕಿರಿಯವನಾದ ರಾಜಕುಮಾರನನ್ನು ದಿಟ್ಟಿಸಿದ. ಪೆರೋಪುತ್ರನನ್ನು ಹಿಂಬಾಲಿಸಿ, ವಯಸ್ಸಿನಲ್ಲಿ ಆತನಿಗಿಂತ ದೊಡ್ಡವರಾದ ಮೂವರು ಬೆಡಗಿನ ಹುಡುಗಿಯರು ಬಂದರು. ಮೆನೆಪ್ ಟಾನೂ ಅವರನ್ನು ನೋಡಿದ. "ಕೊನೆಯ ಮೂವರು ನನ್ನ ಮಕ್ಕಳು,"ಎಂದ ಗೇಬು. “ನಾನು ಮಗ್ಗುಲಲ್ಲಿ ಇಲ್ಲದಿದ್ದರೆ ಮಹಾರಾಣಿಯ ಮೂಗು ಕೆಂಪ ಗಾಗ್ತದೆ”__ಎಂದು ಗೊಣಗಿ, ಮೆನೆಪ್ ಟಾನಡೆಗೆ ಕುಡಿಗಣ್ಣಿನ ನೋಟ ಹಾಯಿಸಿ ನೆಹನವೇಯ್ಟ್ ಹಂಸದಂತೆ ತೇಲುತ್ತ ಹೊರಟಳು. ಸರುಸದಸ್ಯರೆಲ್ಲ ಪೀಠಗಳ ಬಳಿಗೆ ಬಂದರು, ಮಹಾರಾಣಿಯೂ ಬಳಗದವರೂ ತಮ್ಮ ಪೀಠಗಳನ್ನು ಸಮೀಪಿಸಿದಾಗ ಹೆಖ್ವೆಟ್ ಎದ್ದ.ಅವರೆಲ್ಲ ಮಹಾರಾಣಿಗೆ ವಂದಿಸಿದರು. ಮಹಾರಾಣಿ ನೆಫರ್ ಟೀಮ್ ಸೌಂದರ್ಯ ದರ್ಪಗಳಾ ಸಮ್ಮಿಶ್ರಣ. (ಮಧ್ಯ ವಯಸ್ಸು ಕಾಡಿದರೆ ಏನಂತೆ ? ಮಹಾ ಪ್ರಭುವೇನೂ ಯೌವನಾವಸ್ಥೆಯಲ್ಲಿಯೇ ಇರುವುದಿಲ್ಲವಲ್ಲ ? ಅಲ್ಲದೆ ಅರಸನಿಗೆ ಸೆಡ್ ಉತ್ಸವದ ಸತ್ಫಲ ದೊರೆತಾಗ ಅದರಲ್ಲಿ ಅರಸಿಗೂ ಪಾಲಿಲ್ಲದೆ ಉಂಟೇ ?') ಹಿರಿಯ ಸಲಹೆಗಾರರಾದರೇನು ? ಸೇವಕರಾದರೇನು ? ಎಲ್ಲರೂ ಪ್ರಜೆಗಳೇ ಅವಳಿಗೆ, ಮಹಾರಾಣಿ ಆಸೀನಳಾಗಲಿಲ್ಲವೆಂದು ಎಲ್ಲರೂ ನಿಂತೇ ಇದ್ದರು. ಗೌರವ ಎಲ್ಲರಿಂದಲೂ ಸಂದಿತೆಂಬುದು ಖಚಿತವಾದ ಮೇಲೆ ನೆಫರ್ ಟೀಮ್ ಕುಳಿತಳು. ಅಲ್ಲಿದ್ದ ಅಪರಿಚಿತ ಮುಖ ಒಂದೇ. ಆತನೇ ಮೆನೆಪ್ ಟಾ

     ೨೦