ಪುಟ:Mrutyunjaya.pdf/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೩೦೬ ಮೃತ್ಯುಂಜಯ ಎಂಬುದು ಸ್ಪಷ್ಟ. ಊರ ರಾಣಿಯ ಗೋಣು ತುಸು ಮಿಸುಕಿತು. ಅದನ್ನೇ ಅನುಮತಿಯ ಸಂಜ್ಞೆ ಎಂದು ಬಗೆದು,ಎಲ್ಲರೂ ಕುಳಿತರು. ನೆಫರ್ ಟೀಮ್ ತನ್ನ ಎಡಕ್ಕೆ ಹೊರಳಿ, ರಾಜಕುಮಾರಿಯರ ಜತೆಗಿದ್ದ ನೆಹನವೇಯ್ಟ್ ಳನ್ನು ಕರೆದಳು: “ಬಾ ನೆಹನ, ಇಲ್ಲಿ ಕೂತ್ಕೊ. (ಆಕೆಯ ವಕ್ಷಸ್ಥಲದ ಮೇಲಿನ ಆಭರಣಗಳತ್ತ ದೃಷ್ಟಿ ಹಾಯಿಸಿ) ಅಲಂಕಾರ ಮುಗಿಸ್ಕೊಂಡು ನೇರವಾಗಿ ನನ್ನ ಸನ್ನಿಧಿಗೆ ಬಾ ಅಂತ ಹೇಳಿರ್ಲಿಲ್ವೆ? ಎಲ್ಲಿಗೆ ಹೋದೆ?" “ಗೇಬು ಕರೆದ.” ಎಂದಳು ನೆಹನವೇಯ್ಟ್, ರಾಣಿಯ ಮಗುಲಲ್ಲಿ ಕುಳಿತು. ಈ ಔತಣಕ್ಕೆ ಮಹಾರಾಣಿಯನ್ನು ಒಪ್ಪಿಸಲು ಅಮಾತ್ಯ ಬಹಳ ಕಷ್ಟ ಪಟ್ಟಿದ್ದ. ಗೇಬು ದಂಪತಿಗೆ ಔತಣ ? ತನ್ನ ಹಳೆಯ ಪ್ರತಿಸ್ಪರ್ಧಿಯ ಗೌರವಾರ್ಥ ತಾನು ಔತಣ ನೀಡುವುದು ? ಮಹಾರಾಣಿಗೆ ಸಿಟ್ಟು...ಗೇಬು ದಂಪತಿಯ ಹೆಸರು ನೆಪಕ್ಕೆ. ವಾಸ್ತವವಾಗಿ ಮೆನೆಪ್ ಟಾಗೆ ಔತಣ; ನೀರಾನೆ ಪ್ರಾಂತ, ತಂಡವನ್ನು ಬಿಟ್ಟು ಹೋಗಿರುವ ಹೋರಿ; ಅದಕ್ಕೆ ಮತ್ತೆ ಕುಣಿಕೆ ಹಾಕಿ ತಂಡದೊಳಕ್ಕೆ ಎಳೆದು ತರಬೇಕು__ಎಂದು ಅಮಾತ್ಯ ಬಿಡಿಸಿ ಹೇಳಿದ. ಆದರೂ ಮಹಾರಾಣಿಗೆ ಆತಂಕ. " ಆ ನೆಹನವೇಯ್ಟ್ ಬರಬೇಕಾದ ಅಗತ್ಯವೇನು?” ಎಷ್ಟು ವಾದಿಸಿದರೂ ಮತ್ತೆ ಮತ್ತೆ ಅದೇ ಪ್ರಶ್ನೆ, ಕಡೆಗೂ ಮಹಾರಾಣಿ ಒಪ್ಪಿದ್ದು, ಮನಸ್ಸಿಲ್ಲದ ಮನಸ್ಸಿನಿಂದ. ತ್ರಿಕೋನ ತಂತೀವಾದ್ಯಗಳನ್ನು ಹಿಡಿದುಕೊಂದಡು ಇಬ್ಬರು ವಾದಕರು ಬಂದರು. ಮಹಾರಾಣಿಗೆ ನಮಿಸಿ, ಅಂಡಾಕಾರ ಸ್ಥಳದ ಒಂದು ಮೂಲೆಯಲ್ಲಿ ಕುಳಿತರು. ಔತಣ ಸಮಾರಂಭಕ್ಕೆ ಹಿನ್ನೆಲೆಯ ಸಂಗೀತ ಒದಗಿಸುವುದು ಅವರ ಹೊಣೆ. ಕರಿಯ ಮೈ ಬಣ್ಣದ ದಾಸಿಯೊಬ್ಬಳು (ರೂಪವತಿ; ಕವಡೆಗಳ ಸೊಂಟ ಪಟ್ಟ; ತೀರಾ ಕಿರಿದಾದ ನಾಲ್ಕು ಬೆರಳಗಲದ__ನಡು ವಸ್ತ್ರ) ಮಹಾರಾಣಿಯ ಬಳಿ ಸುಳಿದಳು. “ಯಾರಿಗಾಗಿ ಕಾಯ್ತಾ ಕೂತಿದ್ದಾರೆ? ಶುರು ಮಾಡಲಿ !” ಎಂದು