ಪುಟ:Mrutyunjaya.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೨೧

"ಓ ಅಲ್ಲಿದ್ದಾರೆ !"

****

ಹೆಚ್ಚಿನವರು ಬಂದಿದ್ದರು. ಮೆನೆಪ್‌ಟಾ ತಲುಪಿದ ಬಳಿಕ ಮತ್ತೆ
ಕೆಲವರು ಬಂದರು. ಒಸೈರಿಸ್ ಯಾತ್ರೆಗೆ ಇನ್ನೂ ಹೊತ್ತಿದೆ ಎಂದು ಎಲ್ಲರಿಗೂ
ಸಮಾಧಾನ. ಆ ವೇಳೆ ಊಟಕ್ಕೆ ವಿಶ್ರಾಂತಿಗೆ ಮೀಸಲು.
ಎಷ್ಟೋ ಕಾಲದ ಬಳಿಕ ಸಂಧಿಸಿದವರಂತೆ ಒಂದೇ ಸಮನೆ ಮಾತು.
"ನೀವೇನು ಕೊಂಡಿರಿ ?" ಎಂದು ಪರಸ್ಪರರನ್ನು ಎಲ್ಲರೂ ಕೇಳು
ವವರೇ.
___"ಅಂಗಡಿಕಾರ ನನಗೆ ಮೋಸ ಮಾಡ್ಡ. ಅವನಿಗೆ ಪಿಶಾಚಿ
ಬಡಿಯ !"
___"ಹಾರ ಚೆನ್ನಾಗಿದೆ, ಅಲ್ವ ?"
___"ಭರ್ಚಿ ತಗೊಂಡ್ರಾ? ಏನು ಕೊಟ್ರಿ ?"
___"ಹೊಟ್ಟೆ ಗಡ್ಡೇಗೆ ಔಷಧಿ ಕೊಡಿಸ್ತೇನೆ ಅಂದ ಗಂಡ. ಭಯ
ವಾಯ್ತು. ಬೇಡ, ಅಂದ್ಬಿಟ್ಟೆ."
___"ಈ ಸುವಾಸನೆ ಎಣ್ಣೆ ನೋಡಿ. ಹ್ಯಾಗಿದೆ ?"
___"ನೆಫಿಸ್, ನೀನೇನು ತಗೊಂಡೆ ?"
___"ಮೆನೆಪ್‌ಟಾಣ್ಣ ವ್ಯಾಪಾರ ಮಾಡ್ಲಿಲ್ವೋಂತೇನೆ...."
ಇವನ ಸರದಿ. ಒಂದನ್ನು ಬಿಟ್ಟು ಉಳಿದಿದೆಲ್ಲದರ ಬಗೆಗೂ ಹೇಳಿದ್ದಾ
ಯಿತು; ಗಂಟು ಬಿಚ್ಚಿ ತೋರಿಸಿದ್ದಾಯಿತು.
ಅವರ ಹಾಗೆಯೇ ಇವರು. ಆದರೂ ಅದು___ ಆ ಸುರುಳಿ ?
"ಅದೇನು ?"
ನೆಫಿಸ್ ಉತ್ತರವಿತ್ತಳು :
"ಲಿಪಿ ಸುರುಳಿ. ಮಗ ಹೆತ್ತ ತಾಯೀನ ಮರೀಬಾರ್ದು ಅಂತ ಅದರಲ್ಲಿ
ಬರೆದಿದೆ."
"ಓ! ಎಲ್ಲಿ___ ಸುರುಳಿ ಬಿಚ್ಚು ನೋಡೋಣ."
ಅವರೆಲ್ಲರ ಆಸಕ್ತಿ ಕಂಡು ರಾಮೆರಿಪ್‌ಟಾಗೆ ಅಚ್ಚರಿ. ತಾಯಿಗೆ ಹೆಮ್ಮೆ.
ತಂದೆ ಮುಗುಳ್ನಗುತ್ತ ನಿಂತ.