ಪುಟ:Mrutyunjaya.pdf/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೩೦೮ ಮೃತ್ಯುಂಜಯ " ಭೇಷ್, ಒಂದು ಪದವೂ ತಪ್ಪದಂತೆ ಹೇಳ್ವೆ....ನೆಹನ, ಆ ಮುದಿ ಗೂಬೆ ಹೆಖ್ವೆಟ್ ಪಕ್ಕದಲ್ಲಿ ಕೂತಿರೋ ಯುವಕ ಯಾರೆ?" “ನನ್ನ ಪತಿ, ಇನ್ಯಾರು?” “ಲೇವಡಿ ಮಾಡ್ತಿದೀಯಾ ?” “ ಯಾಕೆ ಗೇಬು ಯುವಕನಲ್ವೇನು?” “ಅವನಲ್ಲವೇ ! ಗೇಬುಗೂ ಗೂಬೆಗೂ ಮಧ್ಯೆ...." "ತನ್ನ ಪಕ್ಕದಲ್ಲಿ ನೀರಾನೆ ಇರ್ತದೆ ಅಂತ ಗೇಬು ಹೇಳಿದ್ದ.” "ಓ!ಆ ಕಳ್ಳ! ನಿನ್ನ ಗದ್ದುಗೆ ಕದ್ದೋನು. ಮೆನೆಪ್ ಟಾ......." “ ಮಹಾರಾಣಿಯವರ ಮಾನ್ಯ ಅತಿಥಿ." ನೆಫರ್ ಟೀಮ್ ಮೂಗು ಕುಣಿಸಿದಳು. “ ನಾನು ಕಣ್ಣೆವೆಗಳಿಗೆ ಹಚ್ಕೊಂಡಿದ್ದೇನೆ.” " ನಿಮಗದು ಶೋಭಿಸ್ತದೆ, ಮಹಾರಾಣಿ.” "ಭೇಷ್ ! ಆಗೋ, ನಿನ್ನ ಮಹಾಪ್ರಭು....” ಕರೆತರಲು ಒಳಹೋಗಿದ್ದ ಅಮಾತ್ಯ .ಆತನ ಹಿಂದೆ ಪೆರೋ. ಅರಸನ ಸುತ್ತ ಏಳು ಜನ ಅಂಗರಕ್ಷಕರು. ಮಹಾಪ್ರಭುವಿನ ತಲೆಕೂದಲನ್ನು ಆವರಿಸಿದ್ದ ದುಕೂಲವನ್ನು ಜೋಡಿ ಕಿರೀಟದಲ್ಲಿನ ಸರ್ಪಹೆಡೆ ಬಿಗಿಯಾಗಿ ಹಿಡಿದಿತ್ತು. ಎದೆಪಟ್ಟಿಕೆಯ ಚಿಕ್ಕ ದೊಡ್ಡ ಅಮೂಲ್ಯ ಹರಳುಗಳು ನೀಲಾಂಜನಗಳ ಬೆಳಕಿನಲ್ಲಿ ಝಗಝಗಿಸುತ್ತಿದ್ದುವು. ಕೊರಳಲ್ಲಿ ಬೇರೆಯೂ ಒಂದೆರಡು ಹಾರಗಳಿದ್ದುವು. ನಡುವಿನಿಂದ ಸ್ವರ್ಣವಾದುಕೆ ಗಳವರೆಗೂ ಇಳಿದಿತ್ತು, ಶ್ವೇತಾಂಬರ. ಅದನ್ನು ರತ್ನ ಖಚಿತ ಬಂಗಾರದ ಸೊಂಟಪಟ್ಟಿ ಭದ್ರಗೊಳಿಸಿತ್ತು. ರಾಜಲಾಂಛನ ಆಂಕ್ ಎಡಗೈಯಿಂದ ತೂಗಾಡುತ್ತಿತ್ತು. ಮಣಿಕಟ್ಟಿಗೆ ಅದನ್ನು ಏಳು ಗಂಟುಗಳಿಂದ ಬಿಗಿದಿದ್ದರು. ಇತರರ ಜತೆ ಮೆನೆಪ್ ಟಾನೂ ಎದ್ದು ನಿಂತ. ಈ ದಿನ ಆತನಿಗೆ ಕಂಡು ಬಂದುದು ಬರಿಯ ಕಿರೀಟವಲ್ಲ__ಇಡಿಯ ದೇಹ. ಒಮ್ಮೆಲೆ ಆತನಿಗೆ ಅನಿಸಿತು: ಇದು ಪೆರೋ ಪಾತ್ರ; ಅಮಾತ್ಯನದೂ ಒಂದು ಪಾತ್ರ ; ಗೇಬು ಕೂಡ ಪಾತ್ರಧಾರಿಯೇ ; ತಾನೂ ?

ಪೆರೋಗಿಂತ ತುಸು ಮುಂದಾಗಿಯೇ ಬಂದ ಆಮೆರಬ್ (ಈಗ ತ್ರಿಕೋನ