ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೧೦ ಮೃತ್ಯುಂಜಯ ಔತಣಕ್ಕೆ ಕುಳಿತವರಿಗೆಲ್ಲ ಬೆಳ್ಳಿಯ ಪಾನಪಾತ್ರೆಗಳಲ್ಲಿ ದ್ರಾಕ್ಷಾ ಸುರೆ ನೀಡಿದರು. ಪೆರೋಗೋಸ್ಕರ ಬಂಗಾರದ ಪುಟ್ಟ ಬಟ್ಟಲಲ್ಲಿ ವಿಶೇಷ ಪಾನೀಯ ಒಳಗೆ ನಿಂದ ಬಂತು. ಧ್ವನಿ ತಗಿಸ್ಸಿ ಗೇಬು ನುಡಿದ: "ಪೆರೋಗೆ ಅತ್ಯಂತ ಹಳೆಯ ಸುರೆಯೇ ಬೇಕು. ಪೂರ್ವಜರ ಕಾಲದ್ದು. ರಾ ಐಗುಪ್ತರನ್ನು ಆಳುತ್ತಿದ್ದಾಗಲೇ ಮಾಡಿದ ಸುರೆ! ಯಾವುದಕ್ಕೂ ಒಂದೊ ಮಿತಿ ಬೇಡವೆ?" ಪಾನಪಾತ್ರೆಗಳನ್ನು ಕೊಡಲು ಬಂದವನನ್ನು ಗೇಬು ಕೇಳಿದ: "ಖಿವವ ಇದೆಯೇನಪ್ಪ?" "ಇದೆ ಒಳಗಡೆ, ಮಹಾಸ್ವಮಿ. ಕೆಲಸಗಾರರಿಗೇಂತ ತರಿಸಿದು. ಈಗಲೇ ಬೇಕಾ?" "ಆಮೇಲೆ, ಭಕ್ಶ್ಯ ಭೋಜ್ಯ ಬಡಿಸಿದಾಗ ತಂದ್ಕೊಡು, ಇವರಿಗೆ." ನಾಯಕನತ್ತ ತಿರುಗಿ ಅವನೆಂದ: "ನೀವು ಚಿಂತಿಸ್ಬೇಕಾದ್ದಿಲ್ಲ ಮೆನೆಪ್ಟಾ. ಖಿನನ ಇದೆ." "ಕೆಲಸಗಾರರಿಗೇಂತ ತರಿಸಿದ್ದು?" "ಬೇಸರವಾಯ್ತೆ?" "ಇಲ್ಲ, ಇಲ್ಲ." ಉಗುಳುನುಂಗಲೆತ್ನಿಸುತ್ತ ಮೆನೆಪ್ಟಾ ಅಂದ: "ಆದರೆ ಔತಣವಿದ್ದ ದಿನ ನಾನು ಸುರೆ ಮುತಟ್ಟೋదిల్ల." "ವಿಚಿತ್ರ!" "ನೀರಾನೆ ಪ್ರಾಂತದ ಎಲ್ಲ ಸಂಗತಿಗಳೂ ಸ್ವಲ್ಪ ಹಾಗೆಯೇ ಅಲ್ಲವೆ?" ಪೆರೋ ಮಧು ಬಟ್ಟಲನ್ನು ತುಟಗಳಿಗೆ ಮುಟ್ಟಿಸಿದೊಡನೆಯೇ, ಮೆನೆಪ್ ಟಾನ ಹೊರತಾಗಿ ಉಳಿದವರೆಲ್ಲ ಬಟ್ಟಲುಗಳನೆತ್ತಿಕೊಂಡರು. ಹೆಖ್ವೆಟ್ ತನ್ನ ಬಟ್ಟಿಲನೆತ್ತಿ ಅಂದ: "ಮಗು, ಹುಚಾಟ ಬೇಡ. ಸುರೆ ಕುಡೀದೇ ಇದ್ದರೆ ಪೆರೋಗೆ ಅವ ಮಾನ. ವಿಚಾರಣೆ ನಡೆಸ್ಬೇಕಾದೀತು! ಎತ್ತಿಕೊ." "ಆಗಲಿ ತಾತ, ನಿಮ್ಮ ಮಾತಿಗೆ ಬೆಲೆ ಕೊಡದಿದ್ದರೆ ಹ್ಯಾಗೆ?