ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೧೨ ಮೃತುಂಜಯ
ಚಪ್ಪಾಳೆ ಬಡಿತ. ತಂತಿಮಿಟುವವರಿಗೆ ವಿರಾಮ. ಒಬ್ಬ ಜೋಂಡು ವಾದ್ಯ ಬಾರಿಸುತ್ತಿದ್ದ. ಇಬ್ಬರು ಸಂಗೀತಗಾರ್ತಿಯರು ಒಟ್ಟಿಗೆ ಚಪ್ಪಾಳೆ ತಟ್ಟುತ್ತಿದ್ದರು. ಸೇವಕ ಗಣ ಉಗಿಯೇಳುತ್ತಿದ್ದ ಕೆಂಡರೊಟ್ಟಿಗಳನ್ನು ಒಂದೊಂದು ತಟ್ಟೆಯಲ್ಲಿ ಒಂದೊಂದಾಗಿ ತರತೊಡಗಿತು. (ಚಪ್ಪಾಳೆಯನ್ನು ಅನುಸರಿಸಿ ನಡಿಗೆ. ಇವರದೇ ನರ್ತನ ?) ಬೇರೆ ಕೆಲವರು ಖಾದ್ಯ ಪದಾರ್ಥಗಳನ್ನೂ ಸಿಹಿ ಭಕ್ಷ್ಯಗಳನ್ನೂ ತಂದರು. ಮದಿರೆಯವರು ಕುಣಿಯುವವರೇ. ("ನಿಮಗೆ ಯಾವ ಮದ್ಯ ತರಲಿ ?" "ನಿಮಗೆ ಯಾವುದು ?" ಸೇವಕರ ಮುಖ್ಯಸ್ಥ ఒಬ್ಬ ಕೆಲಸಗಾರನಿಗೆ "ಜೋಕೆ! ಮೈಮೇಲೆ ಚೆಲ್ಲೀಯೆ ! ನೀನೇ ಕುಡಿದೋನ ಹಾಗೆ ಮಾಡ್ತೀಯಲ್ಲ !") ಚಪಾಳೆ ತಾಳದ ಜೋರು. (ಇವನೆಲ್ಲಿಂದ ಬಂದ ? ಎರಡು ಮೊಳ ಎತ್ತರದ ಕುಳ್ಳ ! ತೀವ್ರಗತಿಯಲ್ಲಿ ವೃತ್ತಾಕಾರವಾಗಿ ಸುತ್ತುತ್ತ ಸುತ್ತುತ್ತ ಪೆರೋನ ಮೇಜನ್ನು ತಲಪಿ, ತಲೆಯನ್ನು ನೆಲಕ್ಕೆ ಮುಟ್ಟಿಸಿ, ಸಿಂಬಳ ಹುಳುವ ನಂತೆ ಮುರುಟ, ಮಹರಾಣಿಯ ಎದುರು ಉರುಳಿ, ರಾಜಕುವರ ರಾಜಕುವರಿ ಯರೆದುರು ತಲೆಯ ಮೇಲೆ ನಿಂತು ಕಾಲುಗಳನ್ನು ಝಾಡಿಸಿ ಮತ್ತೆ ಉಣುತ್ತಿ ದ್ದವರೆದುರು ತಿರುಗುತ್ತ ತಿರುಗುತ್ತ, ಸಂಗೀತಗಾರ್ತಿಯರನ್ನು ತಲಪಿ, ಬೇರೆ ತಾಳಕ್ಕೆಅವನು ಸುಚನೆ ನೀಡಿದ. ಮೊಣಕಾಲುಗಳನ್ನು ನೆಲದ ಮೇಲೂರಿ ವೇಗದ ಸುತ್ತಾಟ, ಉರುಳಾಟ, ನೆಗೆದಾಟ. ಹುಚ್ಚೆದ್ದ ಬುಗುರಿಯ ನೃತ್ಯ. ಜೊಂಡುವಾದ್ಯದವನು ಆವೆಶದಿಂದ ಬಾರಿಸಿ. (ಕುಳ್ಳುನಿಂದ ಇವನು ಉತ್ತೇಜಿ ತನೋ? ಇವನಿಂದ ಕುಳ್ಳ ಉತ್ತೇಜಿತನೊ?) (ಬಗೆಬಗೆಯ ರೊಟ್ಟಿ. ಆ ನಮೂನೆ. ಒಂದು ತಾಟು ಆದ ಮೇಲೆ ಬೇರೋಂದು ತಾಟು......) ಹೆಖ್ವೆಟ್ : "ಪಾರಿವಾಳದ ಸಾರು ನನಗೆ ಅಚ್ಚುಮೆಚ್ಚು." ಗೇಬು : "ಎಳೇ ಬಾತು ನನಗಿಷ್ಟ. ನಿನಗೆ (ನಿಮಗೆ, ಕುಡಿತದ ತೊದಲು) ಮೆನೆಪ್ಟಾ?" ಮೆನೆಪ್ಟಾ : " ನೆಫೆಸ್_ಅಂದರೆ ನನ್ನ ಹೆಂದತಿ_ಬೇಯಿಸಿ ಮಾಡಿದ ವಿಮಾನಿನ ಉಪ್ಪೇರಿ ಬಹಳ ಇಷ್ಟ." ಹೆಖ್ವೆಟ್ : "ವಿಮಾನಿನ ಉಪ್ಪೇರಿ......ಬಾಲ್ಯದಲ್ಲಿ ಸಿರಿವಂತಿಕೆಯ ಮಹಾ ಪೂರ ಬರೋದಕ್ಕೆ ಮುಂಚೆ ತಿಂದದ್ದುಂಟು."