ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೩೧೩
ಗೇಬು : “ನಾನು ತಿಂದಿಲ್ಲಪ್ಪ. ಮೀನಿನ ವಾಸನೆ ಮಾತ್ರ ನನಗೆ ಆಗೋದಿಲ್ಲ, ನೆಹನಗಂತೂ ವಾಕರಿಕೆ ಬರ್ತದೆ...ನೋಡು. ಆ ದಾಸಿಯ ಮುಖ ಮೀನಿನ ಮೂತಿಯ ಹಾಗಿಲ್ಲ?" ಹೆಖ್ವೆಟ್ :"ಮೂಗು ಮುಚ್ಕೊಂಡಿಯಾ ಮಗು?" ಗೇಬು : ಇಲ್ಲ, ತಾತ. ಈ ಮೀನು ಮುಟ್ಟಿನೋಡೋ ಹಾಗಿದೆ!” ಹೆಖ್ವೆಟ್ : “ಲಫಂಗ ! ವಯಸ್ಸಾದೋರ ಮುಂದೆ ಹೀಗಾ ಮಾತಾಡೋದು ?” ಗೇಬು : “ವಯಸ್ಸಾದೋರು ಮನಸ್ಸಿನಲ್ಲೇ ಮುಟ್ಟಿನೋಡ್ತಾರೆ; ನನ್ನಂಥೋರು ಮುಟ್ಟಿ ನೋಡೋ ಮಾತನ್ನಾದ್ತಾರೆ;ನನಗಿಂತಲೂ ಚಿಕ್ಕೋರು ಮುಟ್ಟಿಯೇ ಬಿಡ್ತಾರೆ.” ಮೆನೆಪ್ ಟಾ : “ತತ್ತ್ವಜ್ಞಾನ! ಜ್ಞಾನ ದಿಗಂತ ವಿಸ್ತಾರವದ ಹಾಗೆ ಆ ದಿಗಂತದಲ್ಲಿ ತತ್ತ್ವಜ್ಞಾನದ ಚಂದ್ರ ಉದಿಸ್ತಾನೆ." ಹೆಖ್ವೆಟ್ : “ಮಗು ! ನೀನು !...” ಕುಳ್ಳನಿಂದ ಅಂತರ್ಲಾಗ, ಚಕ್ರಲಾಗ.... ಮೆನೆಪ್ ಟಾ : “ಇನ್ನು ನರ್ತಕಿ ಬರ್ತಾಳಾ ?” ಗೇಬು : “ಕುಸ್ತಿಯವರು,ಕುಸ್ತಿಯವರು." ಡೊಳ್ಳು ಎಲ್ಲಿಂದ ಬಂತು ? ಯಾರೋ ಸಣ್ಣಗೆ ಬಾರಿಸುತ್ತಿದ್ದಾರೆ.ಧಿಗ್ ಧಿಗ್ ಧಿಗಧಿಗ....ಜೊಂಡುವಾದ್ಯವೂ ರಾಗವೆಳೆಯುತ್ತಿದೆ. ಜೋಡಿ ಚಪ್ಪಾಳೆ ಇಲ್ಲ. ಕೊಬ್ಬಿದ ಕುಸ್ತಿಪಟುಗಳು ಇಬ್ಬರು. ಅರಸನಿಗೂ ಅರಸಿಗೂ ವಂದನೆ. ಪರಸ್ಪರ ಹತ್ತಿರ ಬಂದರು; ಒಬ್ಬರಿಂದೊಬ್ಬರು ದೂರ ಸರಿದರು. ಮುಷ್ಟಿಗಳಿಂದ ಒಬ್ಬರನ್ನೊಬ್ಬರು ಗುದ್ದಿದರು. ಅವರದೇ ಕೂಗು: “ಹಾಳಾಗು ಸೆತ್!" ಸೆತ್, ಹೆಳಾಗು !" ಇಗೋ ಸಾಯಿ! " ಸಾಯಿ! ಸಾಯಿ !” ಹೆಖ್ವೆಟ್ : “ಕೊಬ್ಬಿದ ಗೂಳಿಗಳು ! ಒಂದನ್ನೋಂದು ತಿವಿದರೇನು? ಬಿಟ್ಟರೇನು ?" ಗೇಬು: "ಬಕಿಲ. ಬಕಿಲ ನಿಮಗೆ ಗೊತ್ತಲ್ಲ ಮೆನೆಪ್ ಟಾ ?”