ಪುಟ:Mrutyunjaya.pdf/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೧೫

      ಹಿಂದಕ್ಕೆ ಕಾಲು, ಮುಂದಕ್ಕೆ ಕಾಲು. ಮುಂದುಗಡೆಗೆ ಕಾಲನ್ನೆತ್ತಿದಾಗ ಮುಂಡ ಹಿಂದಕ್ಕೆ ಬಾಗುತ್ತಿತ್ತು. ತಲೆಗೂದಲ ತುದಿಯಲ್ಲಿ ಚಪ್ಪಟೆಯಾದ ದುಂಡಗಿನ ಭಾರದ ವಸ್ತು. ನರ್ತಿಸುವಾಗ ಕೇಶವನ್ನು ನೀಳವಾಗಿರಿಸಿ, ಲಯ ಬದ್ಧವಾಗಿ ಅದು ಓಲಾಡುತ್ತಿತ್ತು. ಅವಳಿ ಸೋದರಿಯರೇನೋ ಎನ್ನುವಂತೆ ಹೆಜ್ಜೆ ತಪ್ಪದೆ ಅವರು ಕುಣಿದರು.
      (ಈ ಧ್ವನಿ? ಆಲಾಪನೆ. ಬಂದನಲ್ಲ ಇವನೊಬ್ಬ ?)
      ಗತಿ ಬದಲಾವಣೆ. ಹೆಚ್ಚಿನ ವೇಗ.ಈಗ ಪಾರ್ಶ್ವ ಚಲನೆ.ತೋಳುಗಳಿಗೂ ಕೆಲಸ. ಕಣ್ಣು ಹುಬ್ಬುಗಳಿಗೂ. ಸ್ತನಗಳು, ಅಧರಗಳು, ಜಘನ...
     ಗೇಬು : “ರಕ್ತ ಬಿಸಿಯಾಗ್ತಿದೆಯಾ ತಾತ?”
     ಹೆಖ್ವೆಟ್ : ಇಷ್ಟರಿಂದಲೇ? ಇಲ್ಲ__ತಣ್ಣಗಿದ್ದೇನೆ!”
     ಪೆರೋ ಏನನ್ನೂ ಹೆಚ್ಚಾಗಿ ಮುಟ್ಟುತ್ತಿಲ್ಲ. (ಅಥವಾ ಮುಟ್ಟಿಯೇ ಇಲ್ಲವೋ ? ಕೆಲವರಿಗೆ ಹೊಟ್ಟೆ ಭಾರ. ಕುಡಿತ ಇನ್ನು ಸಾಕು ಎನ್ನುವ ಸ್ಥಿತಿಯಲ್ಲಿ ಬೇರೆ ಕೆಲವರು. ಇನ್ನೊಂದು ಗುಟುಕು ಇನ್ನೊಂದು ಗುಟುಕು ಎಂದು ಪರಸ್ಪರ ಒತ್ತಾಯ.
    ಉಣ್ಣುವವರಿಗೆ ಬೇಡವೆನಿಸಿದರೂ ಪರಿಚಾರಕ ಇರುವೆಗಳ ಪಂದ್ಯ ಮುಗಿದಿಲ್ಲ.
    ನರ್ತಕಿಯರು ಹಿಂದೆ ಹಿಂದಕ್ಕೆ ಸರಿದು ಮಾಯವಾದರು ; ಆಲಾಪನೆ ಗಂಟಲು ಮೌನ ತಳೆಯಿತು. ತಾಳ ತಟ್ಟುತ್ತಿದ್ದ ಕೈಗಳು ವಿಶ್ರಾಂತಿ ಪಡೆದುವು. ತಂತಿಗಳ ಹಿಮ್ಮೇಳನವಷ್ಟೇ ಉಳಿಯಿತು.
    ಅಮಾತ್ಯ ಹತ್ತಿರವಿದ್ದ ಸರುಸದಸ್ಯನೊಬ್ಬನನ್ನು ಉದ್ದೆಶಿಸಿ ಕೇಳಿದ:
   “ಚಳಿ ಅನಿಸ್ತಿದೆಯೆ ? ಅಗ್ಗಿಷ್ಟಿಕೆ ತರಿಸೋಣವಾ ?”
   "ಬೇಡಿ, ಬೇಡಿ.”
   ಆದರೂ ಅಮಾತ್ಯ ಎದ್ದ, ಕೆಲ ಕ್ಷಣಗಳಲ್ಲೇ ಮರಳಿದ. ಜತೆಯಲ್ಲೊಬ್ಬ ಸೇವಕ, ಆತ ಹೊತ್ತು ತಂದುದು ಅಗ್ಗಿಷ್ಟಿಕೆಯನ್ನಲ್ಲ__ಒಂದು ಪುಟ್ಟ ಶವಪೆಟ್ಟೆಗೆಯನ್ನು. ಅದರೊಳಗೆ ಮರದಿಂದ ಮಾಡಿದ ಸಣ್ಣ ಶವಲೇಪಿತ. ಅಮಾತ್ಯ ಅದನ್ನೆತ್ತಿ ಹಿಡಿದು,"ಎಲ್ಲರೂ ಇಲ್ಲಿ ನೋಡಿ,"ಎಂದ.