ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೩೧೬
ಮೃತ್ಯುಂಜಯ ಉಣ್ಣುತ್ತಿದ್ದವರು, ಕುಡಿಯುತ್ತಿದ್ದವರು, ಸುಮ್ಮನೆ ಕುಳಿತಿದ್ದವರು ನೋಡಿದರು. ನಕ್ಕರು. ಗಟ್ಟಿಯಾಗಿ ಅವನೆಂದ:"ಔತಣದಲ್ಲಿ ಮೈಮರೆತಾಗಲೂ ಇದನ್ನು ಮರೀಬಾರದು! " ಸೇವಕ ಅಮಾತ್ಯನಿಂದ ಶವಪೆಟ್ಟಿಗೆಯನ್ನು ಪಡೆದು, ದೂರ ಒಯ್ದ. ಮೆನೆಪ್ ಟಾ ಗೇಬುವನ್ನು ಕೇಳಿದ: “ಔತಣ ಮುಗಿದಂತಾಯ್ತು ಅಲ್ಲವಾ ?” ಗೇಬು ತಲೆಯಲ್ಲಾಡಿಸಿದ : “ಇನ್ನು ಮಹತ್ವದ ಕಾರ್ಯಕ್ರಮ. ಶವಪೆಟ್ಟಿಗೆ ನೋಡಿ ಮನುಷ್ಯ ಹೆದರಿದರೆ ಹೇಗೆ? ಬಂದ್ಲು! ಪೆರೋನ ಅಚ್ಚುಮೆಚ್ಚಿನ ನರ್ತಕಿ!" ಎಣ್ಣೆಗಪ್ಪು ಮೈಯ ಹೆಣ್ಣು, ಬೆಡಗಿ, ಬಳಕುವ ಮೈ.ನೀಳ ದೋಳುಗಳು. ಮೋಪಾದ ತೊಡೆಗಳು. ಶಿರಸ್ಸನ್ನು ಸುತ್ತುವರಿದಿರುವ ಹೂಮಾಲೆ. ವಕ್ಷಸ್ಥಲದಲ್ಲಿ ಪುಷ್ಪಹಾರ. ನಡು ಮುಚ್ಚಲು ಗೇಣು ಬಟ್ಟೆ.ಕೆನ್ನೆ ತುಟಿಗಳಿಗೆ ಕೆಂಪು. ಕೈ-ಪಾದಗಳಿಗೆ ಮದರಂಗಿ, ಎತ್ತಿಹಿಡಿದ ಎರಡು ಕೈಗಳಲ್ಲಿ ಚಿಟಿಕೆಗಳು. ಚಿಟಿಕೆ ಸದ್ದನ್ನು ಆಧರಿಸಿ ಚಲನೆ.ಚಲಿಸುತ್ತ ಪೆರೋಗೆ_ರಾಣಿಗೆ ನಮನ. (ಮಹಾರಾಣಿ ಮೂತಿ ತಿರುವಿದಳು. ನೆಹನವೇಯ್ಟ್ ಗೂ ಕುರುಬು. ಸೇವಕರು ಮತ್ತೆ ಪಾನಪಾತ್ರೆಗಳೊಡನೆ ಬಂದರು. ಬೇಡವೆಂದವರೇ ಹೆಚ್ಚು ಜನ.ಮೆನೆಪ್ ಟಾನ ಮೇಜಿನ ಮೇಲಿತ್ತು ಖಿಮಮ ತುಂಬಿದ ಒಂದು ಬಟ್ಟಲು, ('ಎಲ್ಲಾ ! ಇದು ಯಾವಾಗ ಬಂತು ?') ಮೆನೆಪ್ ಟಾ ಅದನ್ನೆತ್ತಿಕೊಂಡು ರುಚಿ ನೋಡಿ, ಗೇಬುವಿನತ್ತ ಹೊರಳಿ, “ಕೆಫ್ಟು ನೀರಾನೆ ಪ್ರಾಂತದಿಂದ ಖಿಮಮ ಕೊಳ್ತಾನೆ,” ಎಂದ. ಬೆಚ್ಚಿ ಬಿದ್ದು ಗೇಬು ಉದ್ಗರಿಸಿದ: ಕೆಫ್ಟು!ನಿಮ್ಮೊಡನೆ ವಾಣಿಜ್ಯ ಸಂಬಂಧ?” “ಹ್ಞ. ಹ್ಞ....") ಸಂಗೀತಗಾರ್ತಿಯೊಬ್ಬಳು ಆಲಾಪನೆ ಆರಂಭಿಸಿದ್ದಳು. ತಂತೀವಾದ್ಯ ಗುಂಯ್ ಗುಟ್ಟಿತು. ಆಲಾಪನೆಗೆ ನರ್ತಕಿಯ ಚಿಟಿಕೆ ಧ್ವನಿ ಹಿಮ್ಮೇಳ ವಾಯಿತು. ಕುಣಿಯುವವಳು ಹಿಮಬಾಲಿಕೆಯಾದಳು. ಕಡ್ಡಿಯಾಗಿ ಮೆಲ್ಲನೆ ನೆಲಕ್ಕಿಳಿದಳು____ಥರಥರನೆ ಕಂಪಿಸುತ್ತ. ಸುತ್ತಲೂ ಮೌನಸ್ಥಾಪನೆ. ಆಲಾಪನೆ