ಪುಟ:Mrutyunjaya.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ಮೃತ್ಯುಂಜಯ

ಕುಳಿತಿದ್ದ ನೆಫಿಸ್ ಸುರುಳಿ ಬಿಚ್ಚಿ ತೊಡೆಯಮೇಲೆ ಹರಡಿ, ತನಗೆ
ಅರ್ಥವಾಗದ ಚಿತ್ತಾರದ ಅಕ್ಷರಗಳನ್ನೊಮ್ಮೆ ನೋಡಿ ನುಡಿದಳು :
"ಒಂದು ಬಾತುಕೋಳಿ, ಕುಸುರಿ ಕೆಲಸದ ಒ೦ದು ಚೀಲ, ಒ೦ದು
ರೂಟ್ಟಿ__ಇಷ್ಟು ಕೊಟ್ವಿ."
"ಓ! ಭಾರೀ ಮೌಲ್ಯ !"
"ಊರಿನಲ್ಲಿ ಲಿಪಿಕಾರನಿಗೆ ತೋರಿಸಿ ಓದಿಸ್ಬೇಕು. ಆಮೇಲೆ
ರಾಮೆರಿಯೂ ಕಲಿತ್ಕೋತಾನೆ."
ಎರಡು ಕ್ಷಣ ಮೌನ. ಅದು ಅಸಾಧಾರಣ ಘಟನೆ. ಆ ದುಡಿಯುವ
ಕುಟು೦ಬಗಳು ಎಂದೂ ಯಾವ ತಲೆಮಾರಿನಲ್ಲೂ ಲಿಪಿಸುರುಳಿಯನ್ನು ಮುಟ್ಟಿ
ರಲಿಲ್ಲ.
ಆ ಜನರಲ್ಲಿ ಹೆಚ್ಚು ವಯಸ್ಸಾದವನೊಬ್ಬ ಅಂದ :
"ಇದರಿಂದ ನಮಗೆಲ್ಲ ಸಂತೋಷ, ಮೆನೆಪ್ಟಾ."
ನಿದ್ದೆ ಹೋಗಿದ್ದ ಎಳೇ ಮಗುವನ್ನು ಎದೆಗವಚಿಕೊಂಡಿದ್ದ ಅಹೂರಾ
ನುಡಿದಳು :
"ಮೆನೆಪ್ಟಾ ಅಣ್ಣ. ನನ್ನ ಭಾವ ಒಂದು ಚೀಲ ಖಿವವ ತ೦ದಿದ್ದಾನೆ.
ಒಂದು ಚೀಲ ನೀರೂ ಇದೆ. ಎಲ್ಲರೂ ಬುತ್ತಿ ಹ೦ಚ್ಕೊಳ್ಳೋಣ."
"ಹೌದು. ಹ೦ಚ್ಕೊಳ್ಳೋಣ," ಎಂದು ನಾ‌ಲ್ಕಾರು ಜನ ಧ್ವನಿಗೂಡಿ
ಸಿದರು.
ಮುಗುಳುನಗೆ ಬೀರಿ ಮೆನೆಪ್ಟಾ ಅಂದ :
"ಹಾಗೇ ಆಗಲಿ. ಎಲ್ಲರ ಬುತ್ತಿಗಳನ್ನೂ ಒಟ್ಟಿಗೆ ಸೇರಿಸೋಣ.
ರಾತ್ರೆಗೆ ಒಂದು ತುತ್ತು. ನಾಳೆ ಮಧ್ಯಾಹ್ನಕ್ಕಿಷ್ಟು ತೆಗೆದಿಟ್ಟು, ಈಗ ಊಟ
ಮಾಡೋಣ."

ಈ ಏರ್ಪಾಟು ಆಗುತ್ತಿದ್ದ೦ತೆ, ಕುರುಡ ಗಾಯಕನೊಬ್ಬನನ್ನು ಕೈ
ಹಿಡಿದು ನಡೆಸುತ್ತ ಒಬ್ಬ ಹುಡುಗ ಅಲ್ಲಿಗೆ ಬ೦ದ.
ಅವನೆಂದ :
"ಓ ಭಕ್ತರೇ ! ನಮ್ಮ ತಾತ ಸೃ‍‌‍‍‍‍‍‍‍ಷ್ಟಿಯ ಕಥೆ ಹಾಡ್ತಾನೆ. ಒಸೈರಿಸ್