ಪುಟ:Mrutyunjaya.pdf/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ

ಯೊ೦ದರದೇ ರಾಜ್ಯ. ಶಾಖ ಸ್ಪರ್ಶಕ್ಕೆ ಹಿಮ ಕರುಗಿತು. ತಂತಿಗಳು ಕೂಗಾಡಿದುವು. ಚಿಟಕೆಗಳು ಗಡಚಿಕ್ಕಿದುವು. ಮೇಲೆದ್ದ ನರ್ತಕಿ ಕಾಲುಗಳನ್ನು ಝಾಡಿಸಿದಳು. ಅಂಗಾಂಗಗಳೆಲ್ಲ, ಸ್ಪಂದಿಸಿದುವು. ಗತಿಯನ್ನು ತೀವ್ರಗೊಳಿಸಿ, ನೆಲದಗಲಕ್ಕೂ అంಡಾಕಾರವಾಗಿ ಅವಳು ನರ್ತಿಸಿದಳು. ನರ್ತನದೊಂದಿಗೆ ಸಂಗೀತಗಾರ್ತಿಯ ಹಾಡು ಭವನವನ್ನೆಲ್ಲ ಆವರಿಸಿತು:

 "ಪ್ರೇಮದ ಮಧು ಅರಸನ ಮಗಳು.

ಕೆನ್ನೆಯ ಗುಲಾಬಿ ಬೆಣಚುಕಲ್ಲಿನ ಬಣ್ಣದ ಹಾಗೆ ಬಳುಕುವ ತೋಳ್ಗಳು. ಮದರ೦ಗಿಯ ಹಾಗೆ ಒಲವು ಮರಳಿದೆ ದೊರೆಯ ಹೃದಯಕೆ..... ಪೀಠದ ಎದುರಲಿ ರೂಪಸಿ ನಿಲ್ಲೆ...” ಸಾಲುಗಳ ಪುನರುಚ್ಚಾರ. ಕುಣಿತದ ಪುನರಾವರ್ತನೆ. ಕೊನೆಗೊಮ್ಮೆ ಪೀಠದ ಎದುರಲ್ಲಿ ರೂಪಸಿ ನಿಂತಳು.

    ಎಡಗೈಯಲ್ಲಿ ಆಂಕ್ಅನ್ನು ಪೆರೋ ಆಡಿಸಿದ. ಬಯಕೆ ತುಂಬಿದ ಕಣ್ಣು ಗಳಿಂದ ನರ್ತಕಿಯನ್ನು ನೋಡಿದ. (ಮಗ್ಗುಲಲ್ಲಿ     ನಡೆಯುತ್ತಿರುವುದರ ಬಗ್ಗೆ ತನಗೆ ನಿರ್ಲಕ್ಶ್ಯ ಎನ್ನುವ೦ತೆ ಮಹಾರಾಣೆ ತನ್ನ ಬಳಿಗೆ ಸೇವಕರ ಮುಖ್ಯಸ್ಥ ನೊಬ್ಬನನ್ನು ಕರೆದು, “ಉಡುಗೊರೆಗಳು ಸಿದ್ಧವಾಗಿವೆಯೆ ?”.... “ ಅಮಾತ್ಯರನ್ನೂ ಸೇರಿಸಿ ಒಟ್ಟು ಹದಿನೇಳು ಬೇಕು.”...“ಹದಿನಾಲ್ಕೇ ಇದೆಯಾ ? ಮೂರ್ಖ! ಗೇಬುವಿನ ಮೂವರು ಹುಡುಗೀರಿಗೆ? ಅವೇನು ತಪ್ಪು ಮಾಡಿವೆ?” -ಎಂದೆಲ್ಲ ನುಡಿದಳು. ಕೊನೆಯ ಮಾತನ್ನಾಡಿ ನೆಹನವೇಯ್ಟ್ ಳ ಕಡೆಗೆ ಕಡೆನೋಟ ಬೀರಿದಳು.) ಪೆರೋ ಕೈಗಳನ್ನು ತನ್ನ ಕೊರಳಿನ ಹಿಂದಕ್ಕೆ ಒಯ್ದು ಕೊ೦ಡಿಬಿಚ್ಚಿ , ಒ೦ದು ಹಾರವನ್ನು ತೆಗೆದು,ಕೊ೦ಡಿ  ಬಿಗಿಗೊಳಿಸಿ, ತನ್ನೆಡೆಗೆ ಸರಿದ ನರ್ತಕಿಯ ಕೈಗಿತ್ತ.

ಆಕೆ ಕೃತಜ್ಞ ತಾಪೂರ್ವಕವಾಗಿ ಪೆರೋಗೆ ಬಾಗಿ ವ೦ದಿಸಿದಳು.ಬಳಿಕ ಸೆಟೆದು ನಿಂತಳು. ಬಿರಿದ ತುಟಿಗಳು ಮುಟ್ಟಿದೆಯೇ ಮಹಾಪ್ರಭುವನ್ನು ಮುದ್ದಿಸಿದುವು. ಆಕೆ ಅಲ್ಲಿಂದ ಹೊರಳಿ (ಅರಸ-ಅರಸಿಗೆ ಬೆನ್ನು), ಮಹಾ ರಾಣಿಗೊಪ್ಪುವ ಗಾ೦ಭೀರ್ಯದಿ೦ದ ಮ೦ದಗಮನೆಯಾಗಿ ನಡೆದಳು.