ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯು೦ಜಯ ಅಮಾತ್ಯನ ಸೂಚನೆಯಂತೆ ಹಾಡುಗಾತಿ, ಹಾಡುಗಾರ, ವಾದಕರು, ಕುಳ್ಳ, ಕುಸ್ತಿಯವರು, ಜೋಡಿನರ್ತಕಿಯರು-ಇವರೆಲ್ಲ ಪೆರೋನೆದುರು ಕಾಣಿಸಿಕೊ೦ಡರು. ತ೦ದೆಯ ಮಗ್ಗುಲಿಗೆ ಬ೦ದು ನಿ೦ತ ಹಿರಿಯ ರಾಜಕುವರಿ ಸೇವಕರು ತಂದ ತಟ್ಟೆಗಳಿಂದ ಪುರಸ್ಕಾರಗಳನ್ನು ಅವರಿಗಿತ್ತಳು. (ಸ್ತ್ರೀಯರಿಗೆ ಕರ್ಣಕು೦ಡಲ. ಗ೦ಡಸರಿಗೆ ಬ೦ಗಾರದ ಉ೦ಗುರ.)
ಗೇಬುವೆ೦ದ:
" ಇನ್ನು ನಮಗೆ.”
ವಾದಕರು ತಂತೀವಾದ್ಯಗಳನ್ನು ನುಡಿಸತೊಡಗಿದರು. ಸ್ವರದ అಲೆ ಗಳೆದ್ದುವು. ದಾಸದಾಸಿಯರು ಬೆಳ್ಳಿಯ ತಟ್ಟೆಗಳಲ್ಲಿ ಉಡುಗೊರೆಗಳನ್ನು ತಂದರು. ದಾಸಿಯರು ತಂದುದು ನೆಹನವೇಯ್ಟ್ ಮತ್ತು ಅವಳ ಪುತ್ರಿಯರಿಗೆ-ದುಕೂಲ ಹಾಗೂ ಶಿರೋಪಟ್ಟ, ಮಹಾರಾಣಿಯಿಂದ ವಿತರಣೆ.
ಎಳೆಯ ರಾಜಕುಮಾರ ಅಮಾತ್ಯರದನ್ನು ಒಪ್ಪಿಸಿದ-ಬೆಲೆಬಾಳುವ ಎದೆ ಪಟ್ಟಕೆ. (ಹೆಖ್ವೆಟ್ ನ ಅಸೂಯೆಯ ಕಣ್ಣು ಅದರ ಮೇಲೆ.)
ಹಿ೦ಬಾಲಿಸಿ ಬ೦ದ ಅಮಾತ್ಯನೊಂದಿಗೆ ರಾಜಕುಮಾರ ಹೆಖ್ವೆಟ್ ನ ಬಳಿಗೆ ನಡೆದ. (ಇಂಥದು ಇಂಥವರಿಗೆ ಎಂದು ಮೊದಲೇ ಗೊತ್ತು ಮಾಡಿದ್ದ ತಟ್ಟೆ.) ఐದೆಳೆಗಳ ಒ೦ದು ಸರ, ಎದ್ದು ನಿ೦ತ ವೃದ್ಧನಿಗೆ. ಗೇಬು ತಗ್ಗಿದ ಧ್ವನಿಯಲ್ಲಿ ಕುಟುಕಿದ:
" ಇವನ ಎದೆಗೂಡು ಮುಚ್ಚೋದಕ್ಕೆ ಎಷ್ಟು ಹಾರಗಳಿದ್ದರೂ ಸಾಲದು.” ಮೆನೆಪ್ ಟಾ ಎದ್ದು, ಮಣಿಗಂಟುಗಳಿಗೆ ಬಿಗಿಯುವ ರತ್ನಖಚಿತ ಪಟ್ಟಕೆಗಳನ್ನು ಸ್ವೀಕರಿಸಿದ.
ಏಳುತ್ತ ಗೇಬು ಆ೦ದ :
“ ನಾಯಕ, ನಿಮಗೆ ಪ್ರೇಮ ಬಂಧನ.” ಗೇಬುಗೆ ರತ್ನಖಚಿತ ಸೊಂಟಪಟ್ಟ.
“ ఇನ್ನು ನೀನು ಹೊಟ್ಟೆ ಬೆಳೆಸೋ ಹಾಗಿಲ್ಲ ಮಗು,"ಎ೦ದು ಹೆಖ್ವೆಟ್ ನಗೆಯಾಡಿದ. ಸರು ಸದಸ್ಯರೆಲ್ಲ ಉಡುಗೊರೆಗಳನ್ನು ಸ್ವೀಕರಿಸಲು ರಾಜ ಕುಮಾರನಲ್ಲಿಗೆ ಬರತೊಡಗಿದಂತೆ ಪೆರೋ ಎದ್ದು ಮಹಾರಾಣಿ ಮತ್ತು ಪುತ್ರಿ