ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯು೦ಜಯ
ಯರನ್ನೂ ನೆಹನವೇಯ್ಟ್ ಮತ್ತು ಬಾಲಿಕೆಯರನ್ನೂ ಕರೆದುಕೊ೦ಡು ಒಳಗೆ
ಹೊರಟ.
ಸರುಸದಸ್ಯರಿಗೆ ರಾಜಕುಮಾರ ಉಡುಗೊರೆಗಳನ್ನು ನೀಡುತ್ತಿದ್ದಂತೆ,
(ಒಂದೇ ತೆರೆ ಸೆಣಬಿನ ಅತಿ ನುಣುಪಾದ ಬಟ್ಟೆ. ಎರಡೆಳೆಯ ಬ೦ಗಾರದ ಸರ.) ಅಮಾತ್ಯ ಹೆಖ್ವೆಟ್ ನನ್ನು ಬದಿಗೆ ಕರೆದ.
“ ಹಾಗಾದರೆ ನಾಳೆ....”
ಹೆಖ್ವೆಟ್ ಪ್ರತಿಭಟಿಸಿದ:
"ನಾಳೆ! ಔತಣ ಆದ್ಮೇಲೆ ಒ೦ದು ದಿವಸದ ವಿಶ್ರಾ೦ತಿಯಾದರೂ ಬೇಡವೆ?"
" ಸರಿ, ಸರಿ ! ನಾಡದು. ನಾವೆ ಸಜ್ಜುಗೊಳಿಸೋದಕ್ಕೆ ಆದೇಶ ನೀಡ್ತೇನೆ....ఆ ಮೆನೆಪ್ ಟಾನನ್ನು ಈ ಕಡೆ ಕಳಿಸಿ."
" ಅಮಾತ್ಯರು ಕರೀತಿದ್ದಾರೆ,” ಎಂದು ಹೆಖ್ವೆಟ್ ತಿಳಿಸಿದಾಗ ಮೆನೆಪ್ ಟ್, ಹೆಖ್ವೆಟ್ ನ೦ತೆ ತಾನೂ ಉಡುಗೊರೆ ತಟ್ಟೆಯನ್ನು ಮೇಜಿನ ಮೇಲಿಯೇ ಬಿಟ್ಟು, ಆಮೆರಬ್ ನನ್ನು ಸವಿಪಿಸಿದ . ಸ೦ಜೆ ಅಮಾತ್ಯನ ಮುಖದ ಮೇಲೆ ಕಾಣಿಸುತ್ತಿದ್ದ ದಣಿವಿನ ಛಾಯೆ ಈಗ ಇರಲಿಲ್ಲ. ಅಲ್ಲಿ ಸಂತೃ ಪ್ತಿಯ ಭಾವವಿತ್ತು.ಅತ್ಮೀಯ ಧ್ವನಿಯಲ್ಲಿ ಆತನೆ೦ದ: " ಮೆನೆಪ್ ಟ್ ಇವತ್ತು ಸರು ಅಧಿವೇಶನ ನಡೀತು. ಮಹಾ ಅರ್ಚಕರ ಜತೆ ಮಾತನಾಡಿ ಅವರನ್ನು ಕರೆಕೊ೦ಡು ಬರೋದಕ್ಕೆ ನಾಡದು ಹೆಖ್ವೆಟ್ ಹೋಗ್ತಾರೆ. ಇನ್ನು ಎರಡು ಮೂರು ವಾರಗಳಲ್ಲೇ ಸೆಡ್ ಉತ್ಸವ. ಅದರಲ್ಲಿ ಪಾಲ್ಗೊಳ್ಳುವ ಭಾಗ್ಯ ಎಲ್ಲರೆಗೂ ಲಭ್ಯವಿಲ್ಲ.ನೀವು ರಾಜಧಾನಿಗೆ ಅತಿಥಿ ಯಾಗಿ ಬ೦ದ ಮೇಲೆ ಶುಭವನ್ನೇ ಕಾಣ್ತಿದ್ದೇವೆ.” " ಅಮಾತ್ಯವರ್ಯ; ನಾನು ಯಾವಾಗಲೂ ಶುಭವನ್ನೇ ఇదిರು ನೋಡ್ತೇನೆ; ಅದನ್ನೇ ಹಾರೈಸ್ತೇನೆ.” " ಸರಿ, ಮೆನೆಪ್ ಟಾ. ದೇವರ ರಕ್ಷೆ ನಿಮಗಿರಲಿ.” ನಾಯಕ ತುಸು ತಲೆಬಾಗಿಸಿ ಅಲ್ಲಿಂದ ಹೊರಟ. ಗೇಬು ಕರೆದು ನುಡಿದ: "ಮೆನೆಪ್ ಟಾ,ನಿಮ್ಮ ಉಡುಗೊರೆ."
ನಾಯಕ ಮುಗುಳುನಕ್ಕು ತಟ್ಟೆಯತ್ತ ನೋಡಿದ. ಎಲ್ಲರೂ ಹೊರಡು