ಪುಟ:Mrutyunjaya.pdf/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ ವವರೇ, ರಾಜಕುಮಾರ ನಿರ್ಗಮಿಸಿದ್ದ ಪಾಕಶಾಲೆಯ ಆಚೆಗೆ ಪ್ರತಿಷ್ಠಿತರ ಬೋಯಿಗಳೂ ನೂರಾರು ಕೆಲಸಗಾರರೂ ಆಗಲೇ ತಿಂದು, ಕುಡಿದು ತಮ್ಮ ದುಡಿಮೆಗೆ ಸಿದ್ಧವಾಗಿದ್ದರು. ದೇವ ಮಂದಿರದ ಪ್ರಾಂಗಣದಲ್ಲೂ ಔತಣ ಮುಗಿದಿತ್ತು. ಸತ್ಕಾರ ಭವನದಲ್ಲಿದ್ದ ಪರಿಚಾರಕರಷ್ಟೇ ಈಗ ಬರಿಹೊಟ್ಟೆಯವರು. అವರಿಗೆ ಅವಸರ.

    ಬಟಾ, ಔಟ, ಬೆಕ್ ಪ್ರವೇಶದ್ವಾರದಲ್ಲಿ ಮುಖ ತೋರಿಸಿದರು. ನಾಯಕ ಕೈಸನ್ನೆ ಮಾಡಿದೊಡನೆ ಒಳಗೆ ಬಂದರು : ಉಡುಗೊರೆಯ ತಟ್ಟೆಯನ್ನು ಎತ್ತಿ ಕೊ೦ಡರು.
    ಗೇಬು ವತ್ತು ಹೆಖ್ವೆಟ್ ಭವನದ ಒಂದು ಮೂಲೆಯಲ್ಲಿ ಪಿಸುದನಿಯ ಸ೦ಭಾಷಣೆ ನಡೆಸಿದ್ದರು.
    ಮೆನೆಪ್ ಟಾ ಪರಿವಾರದೊಡನೆ ಹೊರಕ್ಕಿಳಿದು ಅತಿ ಥಿಗೃಹದೆಡೆಗೆ ನಡೆದ ಅಲ್ಲಿ ಅರಮನೆಯ ಔತಣದ ಸವಿನೋಡಿದ್ದ ಅಂಬಿಗರೂ ಇದ್ದರು.

బಟಾನಿಗೆ ನಾಯಕ ಅ೦ದ:

 “ ನಾಡದು, ಹೆಖ್ವೆಟ್ ಅಂತ ಅತ್ಯಂತ ಹಿರಿಯ ಸಲಹೆಗಾರ ಮಹಾ ಅರ್ಚಕನ ಭೇಟಿಗೆ ಹೋಗ್ತಾರೆ.....ಅಮಾತ್ಯ ಅ೦ದರು:  ఇನ್ನು ಎರಡು ಮೂರು ವಾರಗಳಲ್ಲೇ ಸೆಡ್ ಉತ್ಸವ ಅಂತ...”
  ಬಟಾ ಕೇಳಿದ :
 "ಎರಡು ಮೂರು ವಾರ! ಊರಿಗೊಮ್ಮೆ ಹೋಗಿ ಬರೋಣವಾ?”
  " ಔಟ, ಬೆಕ್, ನಾನು ಇಲ್ಲಿರೇವೆ, బಟಾ. ನೀನು ಊರಿಗೆ ಹೋಗಿ, ನಾಲ್ಕು ದಿನ ಇದ್ದು ವಾಪಸು ಬಂದ್ಬಿಡು. ಸೆಡ್ ಉತ್ಸವ ಮುಗಿದ ತಕ್ಷಣ ಇಲ್ಲಿಂದ ಹೊರಟುಬಿಡೋಣ.”

“ಆಗಲಿ ಅಣ್ಣ. ನಾಳೆಯೇ ಹೊರಡಲಾ?" " ನಾಡದು. ಹೆಖ್ವೆಟ್ ಈ ಕಡೆಗೆ ಹೊರಟಾಗ ನೀನು ಆ ಕಡೆಗೆ...." "ಹೊ೦ ಅಣ್ಣ . ನಾಡದು ಬೆಳಿಗ್ಗೆ."