ಪುಟ:Mrutyunjaya.pdf/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೬ ಮೃತ್ಯುಂಜಯ ಬಟಾ ಒಪ್ಪಿದರೆ ಈ ಎರಡನ್ನು ಉಚಿತವಾಗಿ ಕೊಡಬಹುದಿತ್ತು. ಸದ್ಯಃ ಒಳ್ಳೆಯ ಒಂದು ಸೊಂಟಪಟ್ಟಿಯಾದರೂ ದೊರೆಯಿತಲ್ಲ---ಎಂದು ಆತ ತಕ್ಕ ಮಟ್ಟಿಗೆ ಸಮಾಧಾನಪಟ್ಟುಕೊಂಡ. అವನೆಂದ : “ಪಕ್ಕದಲ್ಲಿ ದೇವಸೇವಕ ಇದ್ದಾರೆ. ಮೂರ್ತಿಗಳಿಗೆ ಪವಿತ್ರ ಜಲ ಪ್ರೋಕ್ಷಾಳನ ಮಾಡಿಕೊಡ್ತಾರೆ ಬೇಕಾದರೆ. ಕಾಣಿಕೆ ಏನೂ ಇಲ್ಲ. ಉಚಿತ." "ಬೇಡ.ನಾನು ಅರಮನೆಯ ದೇವಮಂದಿರದ ಅಚ್ರಕರ ಭೇಟಿಗೆ ಹೊರಟಿದ್ದೇನೆ...." "ಹಾಗಾದರೆ ಸರಿ. ನಿಮ್ಮ ಹೆಸರು ಹೇಳಲಿಲ್ಲ...." "ಬಟಾ.... " "ನಾನು ಅಪೋಫಿಸ್. ನನ್ನ ತಮ್ಮ ಹರ್ಮಾಚಿಸ್. ಮೂತ್ರಿಗಳನ್ನ ಲ್ಲದೆ ಪೂಜಾಸಾಮಗ್ರಿ ಶವಲೇಪದ ಸಾಮಗ್ರಿಗಳನ್ನೂ ಮಾರ್ತೇನೆ. ನಾನು ಹೇಳಿದ್ದನ್ನು ಮನಸ್ನಲ್ಲಿ ಇಟ್ಕೊಂಡಿರಿ. ಮರೀಬೇಡಿ." "ಆಗಲಿ. ಬರಲಾ?" "ಹೂಂ. ಅಮನ್ ನಿಮ್ಮನ್ನು ರಕ್ಷಿಸಲಿ."

          *      *      *      *

ಇನೇನಿ ತನ್ನ ವಸತಿಯಲ್ಲಿ ಒಬ್ಬನೇ ಇದ್ದ. ಬಟಾನಿಗೆ ಅವನು ನೀಡಿದ ಸ್ವಾಗತ ಕಪಟ ಆತ್ಮೀಯತೆಯಿಂದ ತುಂಬಿತ್ತು. ಪಯಣದ ವಿಷಯ ತಿಳಿದು ಆತನೆಂದ : "ಹೌದಪ್ಪ. ಎಷ್ಟು ಸಮಯ ಅಂತ ಇಲ್ಲಿ ಇರೋಕಾಗ್ತದೆ?ಹೋಗಿ ಬಾ. ಹೋಗಿ ಬಾ. ಅಲ್ಲಿ ಏನಾಗಿದೇಂತ ತಿಳಕೊಂಡಾದರೂ ಬರ ಬಹುದಲ್ಲ." "ಇಲ್ಲಿ ನಾಯಕರು ಏಕಾಕಿಯಾಗಿರ್ತಾರೆ." "ನನ್ನಿಂದೇನಾದರೂ ಬೇಕಾದಾಗ ನಿಮ್ಮ ನಾಯಕ ಸಂಕೋಚವಿಲ್ಲದೆ ಇಲ್ಲಿಗೆ ಬರಲಿ. ನಾನು ಅತಿಥಿಗೃಹಕ್ಕೆ ಹೋಗಿ ಅವರನ್ನು ಕಾಣೋದು ಇನ್ನು ----ಇನ್ನು ಮುಂದೆ--ಸೂಕ್ತ ಅನಿಸೋದಿಲ್ಲ. ಏನಿವು ಚೀಲದಲ್ಲಿ?"