ಪುಟ:Mrutyunjaya.pdf/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೮ ಮೃತ್ಯುಂಜಯ ಶರಣಾಗುವುದೇ ಶ್ರೇಷ್ಠ ಮಾರ್ಗವೆಂದು, ಬಟಾ ಹೇಳಿದ. “ತಗೊಳ್ಳಿ ಅಯ್ಯ.” “ನೀನಾಗಿ ಕೊಟ್ಟೆ ! ಹೇಗೆ ಬೇಡಾ ಅನ್ಲಿ ?” “ಸೆಡ್ ಉತ್ಸವ....” “ಅದು ವಿಜೃಂಭಣೆಯ ಸಮಾರಂಭ. ಅಷ್ಟರೊಳಗೆ ನೀನು ಬರಲೇ ಬೇಕು. ಉತ್ಸವ ಯಾವತ್ತು ಅಂತ ನಿನಗೆ ತಿಳಿಸಬೇಕಾದ್ದೇ ಇಲ್ಲ, ನಮ್ಮ ಐಗುಪ್ತದಲ್ಲಿ ಏನೇ ಸುದ್ದಿ ಮೊದಲು ಗೊತ್ತಾಗೋದು ದೋಣಿಕಾರರಿಗೆ.” “ಎಷ್ಟು ಸುದ್ದಿ ಇದ್ದರೂ ದೋಣೀಲಿ ಜಾಗ ಇರ್ತದೆ.” ಎಂದು ಹೇಳಿ ನಸುನಗುತ್ತ ಬಟಾ ಎದ್ದು ನಿಂತು ಅರ್ಚಕನಿಗೆ ನಮಿಸಿದ. "ಹೋಗಿ ಬಾ. ಅಮನ್ ನಿನ್ನನ್ನು ರಕ್ಷಿಸಲಿ. ಸುದ್ದಿಗೂ ಅಷ್ಟೆ. ಮೂತ್ರಿಗಳಿಗೂ ಅಷ್ಟೆ. ದೋಣೀಲಿ ಯಾವಾಗಲೂ ಜಾಗ ಇರ್ತದೆ--ಮರೆತೀಯೆ ! " ಎಂದು ಪರಿಹಾಸ್ಯ ಗಾಂಭೀರ್ಯ ಎರಡೂ ಬೆರೆತ ಸ್ವರದಲ್ಲಿ ಇನೇನಿ ನುಡಿದ.

         *      *       *      * 

ಥೊಎರಿಸ್ ದೇವತಾ ಮೂರ್ತಿಯನ್ನು ನೋಡಿ, ಪತ್ನಿ ನೆಫಿಸಳ ನೆನ ಪಾಗಿ ಮೆನೆಪ್ ಟಾನಕಂಠ ಉಮ್ಮಳಿಸಿತು. ಅವನೆಂದ : "ಇಂಥ ಮೂತ್ರಿಯ ಅಗತ್ಯ ನೆಫಿಸ್ ಗೆ ಇದೆ ಅನ್ನೋ ಯೋಚನೆ ಕೂಡಾ ನನಗೆ ಆಗ್ಲಿಲ್ಲ.” “ಸ್ವಂತದ ಯೋಚನೆ, ಹೆಂಡತಿ---ಮಗನ ಯೋಚನೆ ನೀನು ಯಾಕೆ ಮಾಡ್ತಿ ಹೇಳು ?” ಮಾರನೆಯ ಬೆಳಿಗ್ಗೆ ಅವರ ದೋಣಿಯ ಪಯಣ ದಕ್ಷಿಣಾಭಿಮುಖವಾಗಿ, ನೀರಾನೆ ಪ್ರಾಂತಕ್ಕೆ. ಬಟಾನ ಪ್ರಶ್ನೆ ಕೇಳಿಸದವನಂತೆ ಮೆನೆಪ್ ಟಾ ಅಂದ : “ನಾನೂ ಒಬ್ಬ ದೋಣಿಕಾರನಾಗಬೇಕಾಗಿತ್ತು. ಬಟಾ.”