ಪುಟ:Mrutyunjaya.pdf/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೨೯ “ಅಮನ್ ದೋಣಿಕಾರರ ದೇವರು, ಸೈನ್ಯದ ದೇವರು, ಪ್ರವಾಸಿಗಳ ದೇವರು. ಇಗೋ; ಗೋಡೆಯ ಗೂಡಿನಲ್ಲಿಡ್ತೇನೆ. ಪ್ರತಿರಾತ್ರೆ ಮಲಗೋ ದಕ್ಕೆ ಮುನ್ನ..." ಗೂಡು ಸೇರಿದ ಮೂರ್ತಿಯನ್ನು ನೋಡುತ್ತಾ ಮೆನೆಪಟಾ ಉದ್ಗರಿಸಿದ : "ಓ! ನಮ್ಮ ಅಮನ್ ಥೊಎರಿಸಿ-ಎರಡೂ ಸ್ನೋಫ್ರು ಸೃಷ್ಟಿ !" “ವರ್ತಕ ಅಪೋಫಿಸ್, ಅರ್ಚಕ ಇನೇನಿ ಇಬ್ಬರಿಗೂ ಸ್ನೋಫ್ರು ಸೃಷ್ಟಿ ಸಿದ ಮೂರ್ತಿಗಳನ್ನು ನಾನು ತಂದ್ಕೊಡ್ಬೇಕಂತೆ-ಭಕ್ತಾದಿಗಳಿಗೆ ಮಾರೋ ದಕ್ಕೆ ! ಈ ಮೂರ್ತಿಗಳನ್ನು ನಾನು ಕೊಂಡದು ಅಪೋಫಿಸ ನಿಂದ: ಇವಕ್ಕೆ ಪವಿತ್ರ ಜಲಸೇಚನ ಮಾಡಿದ್ದು ಇನೇನಿ. ಈ ಅಪೋಫಿಸ್ ಗೆ ಕೆಫ್ಟು ಗುರ್‍ತಂತೆ.” “ಕುಯಿಲಿನ ದಿನ ಹತ್ತಿರ ಬಲ್ತಿದೆ. ಕೆಫ್ಟು ಬರುವ ಹೊತ್ತು.” “ಖೈಮ್ ಹೊಟೆಪ್ ಅವನ ದಾರಿ ಕಾಯ್ತಿರ್‍ಬೇಕು.” “ನಾವು ಇಲ್ಲಿಗೆ ಬರದೇ ಇದ್ದಿದ್ದರೆ ಏನಾಗ್ತಿತ್ತು ಬಟಾ ?” “ಈ ಪ್ರಶ್ನೆ ನಾನು ಕೇಳಬೇಕು, ನೀನಲ್ಲ.” "ನೀನು ವಾಪಾಸು ಹೋಗ್ತಿದಿಯಾ ,ನಾನು ಇಲ್ಲಿ ನೇನಿಲ್ಲದೆಯೇ ದಿನ ಕಳೀಬೆಕು." ಬಟಾ ಸುಮ್ಮನಿದ್ದ ತಲೆ ತಗ್ಗಿಸಿದ. ನೆಲ ನೋಡುತ್ತ ದುಗುಡದ ಸ್ವರದಲ್ಲಿ ಅಂದ : “ನನ್ನ ಸಂಕಟ ಹೇಳಲಾ ಅಣ್ಣ?ಎಷ್ಟು ದಿವಸ ಅಂತ ನನ್ನಲ್ಲೆ ಮುಚ್ಚಿಟ್ಕೋಳ್ಲಿ? ನಾನು ಹೋಗ್ತಿರೋದು ನಮ್ಮವರನ್ನ ಕರಕೊಂಡು ಬರೋದಕ್ಕೆ,ನಾವಿಷ್ಟೇ ಜನ ನಿನ್ನ ಜತೆ ಇದ್ದು ಏನಾದರೂ ಅಚಾತುರ್ಯಾ ಆದರೆ ನಾಳೆ ನಮ್ಮ ಜನರಿಗೆ ಹ್ಯಾಗೆ ಮುಖ ತೋರಿಸಲಿ?" ಮೆನೆಪ ಟಾನೂ ಕೆಲವು ಕ್ಷಣ ಮೌನವಾಗಿದ್ದು, ಬಟಾನನ್ನೇ ನೋಡುತ್ತ ಅಂದ : “ ಉತ್ಸವ ಆಗೋವರೆಗೂ ಏನೂ ಅಪಾಯವಿಲ್ಲ, ವೈಯಕ್ತಿಕವಾಗಿ ನನಗೇನಾಗ್ತಾದೆ ಅನ್ನೋದು ಮಹತ್ವದಲ್ಲ. ನೀರಾನೆ ಪ್ರಾಂತದ ಜನ