ಪುಟ:Mrutyunjaya.pdf/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೩೩೧ ಅಗತ್ಯವೆಂದು ಅರಮನೆಯ ಸೇವಕರಿಗೆ ಅನಿಸಲಿಲ್ಲ ....ಇರುಳಿನ ಮೌನ ಅರಮನೆಯ ಆವರಣದ ಮೇಲೆ ದಟ್ಟೆಸುತ್ತಿದ್ದಂತೆ ನಾಯಕನ ಕೊಠಡಿಯ ಕಿಟಕಿಯನ್ನು ಯಾರೋ ಮೆಲ್ಲನೆ ತಟ್ಟಿದ ಸದಾ ಯಿತು. ಬಟಾ ಚಂಗನೆದ್ದು ಕಿಟಕಿ ತೆರೆದು ಹೊರಗೆ ನೋಡಿದ. ಬೆಕ್ ಔಟರೂ ಅತ್ತ ಧಾವಿಸಿದರು. ಅಲ್ಲಿದ್ದವನು ಮೆನ್ನ. ಅವನನ್ನು ಬಟಾ ಕಿಟಕಿಯ ಮೂಲಕ ಒಳಕ್ಕೆ ಎಳೆದುಕೊಂಡ. ಬಟಾನ ಕೈಯನ್ನು ಭದ್ರವಾಗಿ ಹಿಡಿದು ಆತ ಕೇಳಿದ: “ನಾಳೆ ಬೆಳಿಗ್ಗೆ ಹೊರಡ್ತೀರಾ ?” ಹೌದು, ಮೆನ್ನ.” ನಾಯಕನತ್ತ ನೋಡಿ ಪಿಸುದನಿಯಲ್ಲಿ ಅವನೆಂದ: “ಮಹಾ ಅರ್ಚಕ, ಪೆರೋ-ಇಬ್ಬರೂ ಪರಸ್ಪರ ಮೇಲೆ ಬಲೆ ಬೀಸಿ ದ್ದಾರೆ. ಯಾವ ಬಲೆಗೆ ಯಾರು ಬೀಳ್ತಾರೋ ? ಬಲೆಗಳು ಒಂದಕ್ಕೊಂದು ತಗಲಿ ಸಿಕ್ಕುಗಂಟಾದಾಗ, ವಿಾನುಗಳು ಮಾತ್ರವಲ್ಲ ನೀರಾನೆಯೂ ತಪ್ಪಿಸಿ ಕೊಂಡೀತು ! ಆದರೆ ಎಡವಬಾರದು, ಎಡವಬಾರದು .. ನಿದ್ದೆಯಲ್ಲೂ ಜಾಗೃತಾವಸ್ಥೆಯಲ್ಲೂ ಎಚ್ಚರವಿರಬೇಕು ! ಯೋಚಿಸ್ಬೇಡಿ ಬಟಾ.. ನಾನು ಪಕ್ಕದಲ್ಲಿ ಇರದಿದ್ದರೂ ನನ್ನ ಅಗೋಚರ ಕಾ ನಾಯಕರನ್ನು ಕಾಯ್ತುದೆ.” ಮೆನೆಪ್ ಟಾ ಧ್ವನಿ ತಗ್ಗಿಸಿ ಅಂದ: “ವಿದೇಶೀ ವರ್ತಕ ಕೆಫ್ಟು ಮಹಾ ಹಸುರು ಸಮುದ್ರದಿಂದ ರಾಜಾಧಾನಿ ಕಡೆಗೆ ಬೇಗನೆ ಬರಬಹುದು. ಅವನನ್ನು ನಾನು ಕಾಣ್ಬೇಕು. “ಆತ ಬಂದ ದಿನವೇ ಕಂಡು, ಹಾಗೇಂತ ಹೇಳ್ತೀನೆ.” ಮೃದು ಧ್ವನಿಯಲ್ಲಿ ಬಟಾ ಹೇಳಿದ : “ಆ ಇನೇನಿ ಕೈಗೆ ಸಿಕ್ಕಿ ಹಾಕ್ಕೊಳ್ಬೇಡಿ...ಹೊಡೆಯೋದು ಬಡಿಯೋದು ಮಾಡಿಯಾನು.” “ಹುಚ್ಚರಿಗೆ ಹೊಡೆದೋರು ಉದಾರವಾಗ್ವಾರಾ ? ನೀರಲ್ಲಿರೋ ಮೀನಿನ ಹಾಗೆ ನನ್ನ ಚಲನೆ.ನುಂಗೋಕೆ ಬರೋ ದೊಡ್ಡವಿಾನುಗಳ ವಿಷಯ ದಲ್ಲಿ ನನಗೆ ಮೈಯೆಲ್ಲ ಕಣ್ಣು !”