ಪುಟ:Mrutyunjaya.pdf/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೩೪ ಮೃತ್ಯುಂಜಯ ಬೇಡ ; ಆಡಂಬರದ ಸಾವೂ ಬೇಡ.” ಬಟಾ : “ನೀನು ಬೇಡ ಅಂದರೂ ಜನ ಕೇಳಬೇಕಲ್ಲ? ಕನಸಿನಲ್ಲಿ ಇನ್ನೂ ಎತ್ತರವಾಗಿ ಕಾಣಿಸಿದೆ ಅಂತ ಮೆನ್ನ ಹೇಳ್ಳಿಲ್ಲವಾ?” ಮೆನೆಪ್ ಟಾ: “ನನಗೆ ನಿದ್ದೆ ಬರ್ತಿದೆ.” (ಕಪಟದ ಗೊರಕೆ ಸದ್ದು.) ಬಟಾ “ಅದು ನನ್ನ ಗೊರಕೆ. ನಿನ್ನದು ಅಷ್ಟು ಜೋರಾಗಿರೋದಿಲ್ಲ. ಶಬ್ದ ಕಮ್ಮಿ ಮಾಡು.” ಮೆನೆಪ್ಟಾ : (ಸಣ್ಣನೆ ನಕ್ಕು) “ನಾನು ಕಣ್ಮುಚ್ಕೊಂಡಿದ್ದೇನೆ. ಇನ್ನು ನಿದ್ದೆ ಬಂದೇ ಬಿಡ್ತದೆ.” ಬಟಾ : ಹೊಂ. ನಾನು ಮುಚ್ಕೊಂಡೆ. ಮಾತಿಲ್ಲ ಇನ್ನು." x * * × ಆ ದಿನ ಬೆಳಿಗ್ಗೆ ದೊಣಿಕಟ್ಟೆಯಲ್ಲಿ ಹೆಚ್ಚು ಗದ್ದಲವಿರಲಿಲ್ಲ, ಬಟಾನ ಉದ್ಯೋಗಿಗಳು ದೋಣಿಯನ್ನು ಕಟ್ಟೆಗೆ ತಂದು ನಿಲ್ಲಿಸಿದರು. ಮೆಟ್ಟಲು ಗಳನ್ನಿಳಿದು ಬಟಾ ದೋಣಿಯತ್ತ ಸಾಗುತ್ತಿದ್ದಂತೆ ಒಬ್ಬ ಕಾವಲು ಭಟ ಗಟ್ಟಿಯಾಗಿ ಅಂದ :

  • ಗೂಡಾರಕ್ಕೆ ಬನ್ನಿ ಕಟ್ಟೆ ಅಧಿಕಾರಿ ಕರೀತಿದ್ದಾರೆ.”

ಎದ್ದು ಬರಲಿಲ್ಲ, ಕರೆಕಳಿಸಿದ್ದಾನೆ. ನನಗೆ ತಿಳೀದಾ ಇದರ ಮರ್ಮ' ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತ ಬಟಾ ಮತ್ತೆ ಮೆಟ್ಟಲುಗಳನ್ನೇರಿ, ಗೂಡಾರದೊಳಕ್ಕೆ ನಡೆದ. ಅಧಿಕಾರಿ ಕುಳಿತಲ್ಲಿಂದಲೆ ತುಸು ತಲೆ ಎತ್ತಿ ಬಟಾನನ್ನು ನೋಡಿದ. “ ನೀವಾ ? ಯಾವುದೋ ದೋಣಿ ಹೊರಡ್ತಿದೆ ಅಂದ್ರು. ಕಟ್ಟೆಯ ಅಧಿಕಾರಿಗೆ ತಿಳಿಸದೆ ರಾಜಧಾನಿಯಿಂದ ಹೊರಡೋ ದೋಣಿ ಯಾವುದಪ್ಪ ಅಂದ್ಕೊಂಡೆ." ಬಟಾನ ತುಟಿಗಳು ಬೀಗಿದವು : “ ನಾವು ಸೆಡ್ ಉತ್ಸವಕ್ಕೆ ಬಂದವರು."

  • ಪ್ರಾಂತಪಾಲರ ದೋಣಿಗಳೆಲ್ಲ ಇಲ್ಲೇ ಬಿದ್ದಿವೆ. ನನಗೆ ಗೊತ್ತಿಲ್ಲವಾ?”

ಅಷ್ಟರಲ್ಲಿ ಒಬ್ಬ ಕಾವಲುಭಟ ಓಡಿಬಂದ, "ಹೆಖ್ವೆಟ್ರ ಪಲ್ಲಕ್ಕಿ ಬಂತು," ಎಂದ.