ಪುಟ:Mrutyunjaya.pdf/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೩೩೫ ಅಧಿಕಾರಿ ನಿಧಾನವಾಗಿ ಎದ್ದು, “ನೀವು ಹೊರಡ್ಬೌದು” ಎಂದು ನುಡಿದು ಬಟಾನತ್ತ ಕೈಬೀಸಿ.. ಕೈಯಲ್ಲಿ ಪದವಿ ದಂಡ ಹಿಡಿದು ಅರಮನೆಯ ಪಲ್ಲಕಿಯಿಂದ ಇಳಿಯುತ್ತಿದ್ದ ಹೆಖ್ವೆಟ್ನನ್ನು ಸ್ವಾಗತಿಸಲು ಹೊರಕ್ಕೆ ನಡೆದ. ಕೆಳಗೆ ಕಾವಲು ಭಟನೊಬ್ಬ ಕೂಗಿ ಹೇಳುತ್ತಿದ್ದ: “ ಏ ದೋಣಿ ! ಹೊರಡು ! ರಾಜನಾವೆಗೆ ಜಾಗ ಮಾಡು !” ಬಟಾನ ಉದ್ಯೋಗಿಗಳು ಮಿಸುಕಲಿಲ್ಲ ಆ ಕಾವಲುಭಟ ಕಿರಿಚಿದ: "ಏಯ್! ಯಾರಿಗೆ ಹೇಳಿದ್ದು ?" ಅಷ್ಟರಲ್ಲಿ ಬಟಾ ಅಲ್ಲಿಗೆ ಬಂದ. ಕ್ಷಣಮಾತ್ರ ಹೆಖ್ವೆಟ್ ನತ್ತ ದೃಷ್ಟಿ ಹಾಯಿಸಿ, ಕಟ್ಟೆಯನ್ನು ಸಮೀಪಿಸುತ್ತಿದ್ದ ರಾಜನಾವೆಯನ್ನೊಮ್ಮೆ ನೋಡಿ, ಥಳ ಥಳಿಸುತ್ತಿದ್ದ ಬೆಳಗಿನ :ಸೂರ್ಯನಿಗೆ ನಮಸ್ಕರಿಸಿ, ತನ್ನ ದೋಣಿಗಿಳಿದ. ಅಂಬಿ ಗರು ಹುಟ್ಟು ಹುಟ್ಟು ಹಾಕಿದರು.

ಹೆಖ್ವೆಟ್ ಬೋಯಿಗಳನ್ನು ಬೇಳ್ಕೊಟ್ಟು, ಕಟ್ಟೆಯ ಅಧಿಕಾರಿಯ ವಂದನೆ ಸ್ವೀಕರಿಸಿ. ನಾವೆಯನ್ನೇರಿದ. ಅವನ ಜತೆಯಲ್ಲಿ ಇಬ್ಬರಿದ್ದರು : ಎಳೆಯ ಲಿಪಿಕಾರನೊಬ್ಬ. ಹೇಳಿದುದನ್ನು ಬರೆದುಕೊಳ್ಳಳು ಮತ್ತು ಒಬ್ಬ ಆಪ್ತಸೇವಕ, ಆತನ ವೈಯಕ್ತಿಕ ಅನುಕೂಲಗಳನ್ನು ನೋಡಿಕೊಳ್ಳಲು. ನಾವೆಯ ಹಿಂಭಾಗದಲ್ಲಿ ಛಾವಣಿಯ ಕೆಳಗಿದ್ದ ಪೀಠದ ಮೇಲೆ ಕುಳಿತು, ತನ್ನ ಹೊಟ್ಟೆಯನ್ನು ಅಂಗೈಯಿಂದ ಹಲವು ಬಾರಿ ಹೆಖ್ವೆಟ್ ಸವರಿದ. ಜಠರ ದಲ್ಲಿದ್ದ ವಾಯು ತೆವಳುತ್ತ ತಪ್ಪಿಸಿಕೊಂಡು ಹೊರಹೋಯಿತು; ತುಸು ಹಾಯೆನಿಸಿತು. ಇನ್ನೂ ಸ್ವಲ್ಪ ತಡವಾಗಿ ಏಳಬಹುದಿತ್ತು. ಆದರೆ ಬೆಳಕು ಹರಿಯುವ ಹೊತ್ತಿಗೆ ಆಮಾತ್ಯ ಬಂದುಬಿಟ್ಟಿದ್ದ. ತನ್ನನ್ನು ಎಬ್ಬಿಸಿದ ದಾಸಿಯ ಮೇಲೆ ಹೆಖ್ವೆಟ್ ರೇಗಿದ. "ಅವನಿಗೆ ಬುದ್ಧಿ ಇಲ್ಲಾಂತ ನಿನಗೂ ಇಲ್ಲವಾ ?” ಎಂದು ಗುಡುಗಿದ. “ ಈ ಆಮೆರಬ್ ಸರಿಯಾಗಿ ನಿದ್ದೆ ಕೂಡಾ ಮಾಡೋದಿಲ್ಲಾನ್ತಾನೆ," ಎಂದು ಗೊಣಗಿದ.