ಪುಟ:Mrutyunjaya.pdf/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೩೬ ಮೃತ್ಯುಂಜಯ ಅಮಾತ್ಯ ನೇರವಾಗಿ, ಶಯಾಗಾರಕ್ಕೇ ಬಂದ. ಮಂಚದ ಮಗ್ಗುಲದಲ್ಲಿದ್ದ ಪೀಠದ ಮೇಲೆ ಕುಳಿತು, “ ನಿನ್ನನ್ನು ಕಂಡರೆ ನನಗೆ ಅಸೂಯೆ ಹೆಖ್ವೆಟ್: ಯಾವ ಚಿಂತೆಯನೂ ಇಲ್ಲದ ಪರಮ ಸುಖಿ ನೀನು.” ಎಂದ. ಹೆಖ್ವೆಟ್ ಮಾತನಾಡಲಿಲ್ಲ. ಮುಖಮಾಜನಕ್ಕೆಂದು ಪ್ರಾತರ್ವಿಧಿ ಗಳಿಗೆಂದು, ಬಚ್ಚಲು ಕೊಠಡಿಗೆ ನಡೆದ. ಆಮೆರಬ್ಗೆ ಶೌಚಗೃಹದಿಂದ ಸದ್ದುಗಳು ಕೇಳಿಸಿದುವು. ಮುದುಕ ಬೇಕೆಂದೇ ತಡಮಾಡುತ್ತಿದ್ದಾನೆ ಎನಿಸಿತು. ಅನ್ಯ ಗತಿ ಇಲ್ಲದೆ ಕಿತಕಿಯಿಂದ ಹೊರನೋಡುತ್ತ ಆಮೆರಬ್ ಕುಳಿತ. ಮನೆಯ ಕಿರಿಯರು ದೊಡ್ಡವರು ದೂರದಿಂದ ಇಣಕಿ ನೋಡಿ ಹೋಗುತ್ತಿದ್ದರು. ಎಂದಾದರೊಮ್ಮೆ ಬರುವ ಅಮಾತ್ಯನನ್ನು ಹತ್ತಿರದಿಂದ ಮಾತನಾಡಿಸುವ ಧೈರ್ಯ ಅವರಿಗಿರಲಿಲ್ಲ. ಶಯ್ಯಾಗೃಹಕ್ಕೆ ಮರಳಿದ ಹೆಖ್ವೆಟ್ ಅಮಾತ್ಯನನ್ನು ಕೇಳಿದ: “ ಏನು ತಗೊಳ್ತೀಯಾ?” “ ಏನೂ ಬೇಡ. ನಾನು ಮಹಾಮನೆಗೆ ಹೋಗ್ಬೇಕು. ನೀನು ಆದಷ್ಟು ಬೇಗ ಹೊರಡು. ಮುಚ್ಚಂಜೆಯ ಹೊತ್ತಿಗಾದರೂ ಆನ್ ತಲಪಿದರೆ ಚೆನ್ನಾಗಿರ್ತದೆ. ನನ್ನ ಪರವಾಗಿ ಆನ್ನ ನಗರಾಹಧಿಕಾರಿಗೆ ಎಚ್ಚರಿಕೆ ಕೊಡು.. ವುಹಾ ಅರ್ಚಕನ ಚಟುವಟಿಕೆಯ ವಿಷಯ ಆತನಿಂದ ವಿವರವಾದ ವರದಿ ಬಂದಿಲ್ಲ. ಅಮಾತ್ಯರಿಗೆ ಇದರಿಂದ ಆಶ್ಚರ್ಯವಾಗಿದೇಂತ ಹೇಳು." ... ಎಚ್ಚರಿಕೆ ಅವನೊಬ್ಬನಿಗೆ ಮಾತ್ರ ಸಾಕೊ ?...ಮಹಾ ಅರ್ಚಕನ ಹತ್ತಿರ ಯಾವ ಧ್ವನಿಯಲ್ಲಿ ಮಾತನಾದಬೇಕೂಂತ ನೀನು ಹೇಳಿಯೇ ಇಲ್ಲ." “ ಅದು ನಿನಗೆ ತಿಳೀದೆ ಹೆಖ್ವೆಟ್ ? ನನಗಿಂತ ಎಷ್ಟೋ ವರ್ಷ ಮೊದಲು ನೀನೇ ಅಮಾತ್ಯನಾಗಬೇಕಿತ್ತು. ಎಲ್ಲಿಯೋ ಎಳೆ ತಪ್ತು. ನನ್ನ ದುರದೃಷ್ಟ." "ಮಹಾ ಅರ್ಚಕನ ಪೀಕಲಾಟ ಇಲ್ಲದೇ ಇರ್ತಿದ್ರೆ, ದುರದೃಷ್ಟ ಅನ್ನೋ ಪದ ನಿನ್ನ ಬಾಯಿಯಿಂದ ಬರ್ತಿತ್ತೆ? ಸೋಗಲಾಡಿತನ ನನಗೆ ಹಿಡಿಸೋದಿಲ್ಲ." ಅಮಾತ್ಯ ನೋಡಿದ: ಹೆಖ್ವೆಟ್ನ ತಲೆ ಹಿಂದಕ್ಕೂ ಮುಂದಕ್ಕೂ ಆಡುತಿತ್ತು. ತುಟಿ ತೆರೆದಾಗ ಗಟ್ಟಿ ಹಲ್ಲುಗಳು ಕಾಣಿಸಿದುವು. ಬಿದ್ದು ಹೋಗಿದ್ದುದು ಕೆಲವೇ ಕೆಲವು.........