ಪುಟ:Mrutyunjaya.pdf/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

ಪೆರೋ ಖೂಫು ಆಗಿನ ಮಹಾ ಅರ್ಚಕನಿಗೆ ಬುದ್ಧಿ ಕಲಿಸಿದ ಅಂತ

ನಾವೂ ಅದೇ ಮಾರ್ಗ ಅನುಸರಿಸಬೇಕಾಗಿಲ್ಲ. ಮಂದಿರಗಳು ಈಗ ಬಲಿಷ್ಠವಾಗಿವೆ. ಈ ಪರಿಸ್ಥಿತೀಲಿ ಆ ರೀತಿಯ ಘರ್ಷಣೆ ಸಾಧ್ಯವೂ ಇಲ್ಲ. ಪೆರೋರಾನ ಅವತಾರವಲ್ಲ ಅನ್ನೋ ಹಾಗೆ ಮಹಾ ಅರ್ಚಕ ವರ್ತಿಸಿದರೆ, ದೇವಮಂದಿರಗಳಲ್ಲಿ ಜನರ ನಿಷ್ಠೆ ಉಳಿದೀತಾ ? ಅದನ್ನು ಅವನಿಗೆ ಬಿಂಬಿಸಿ ಹೇಳು.” « ಹೇಪಾಟಗೆ ನಿನ್ನ ಮೇಲೆ ಸಿಟ್ಟಿದೆ.” “ ನಾನು ಅವನ ಆಟದ ಬುಗರಿಯಾಗಲಿಲ್ಲ ಅಂತಲೋ ?” "ಹ್ಞ. ಇವನ ಎಂಟೆದೆಗೆ ಏನು ಕಾರಣ ಆಮೆರಬ್ ?” "ಮಂದಿರದೊಳಗಿನ ದೇವರು ತನ್ನ ಅಧೀನ ಅನ್ನೋ ನಂಬುಗೆ ?” ಅಲ್ಲ. ಮಂದಿರದೊಳಗಿನ ಸಂಪತ್ತನ್ನು ಆಧರಿಸಿದ ಅಹಂಕಾರ.” ಅಮಾತ್ಯ ಎದ್ದ. "ನಾನು ಬರ್ತೇನೆ, ಹೆಖ್ವೆಟ್, ಸರು ಅಧಿವೇಶನದಲ್ಲಿ ಅವರೆಲ್ಲರ ಎದುರು ನಿನ್ನ ಜತೆ ಹೀಗೆ ಮಾತಾಡೋದಕ್ಕೆ ಆಗ್ಲಿಲ್ಲ. ಹೇಗಾದರೂ ಮಾಡಿ ಮಹಾ ಅರ್ಚಕನನ್ನು ಕರಕೊಂಡು ಬರೋ ಜವಾಬ್ದಾರಿ ನಿನ್ನದು. ಇದು ಐಗುಪ್ತಕ್ಕೆ ನೀನು ಸಲ್ಲಿಸಬಹುದಾದ ಬಹಳ ದೊಡ್ಡ ಸೇವೆ.” " ಇದಾದ ಮೇಲೆ ಹೆಖ್ಬೆಟ್ ಮರಣ ಬಂದರೂ ಸರಿ, ಅನ್ನು. ಶಿಲ್ಪಿ ಹೇಳ್ತಿದ್ದ-ಗೋರಿಯ ಒಳಗೋಡೆಗಳು ಬೋಳಾಗಿ ಕಾಣ್ತವೆ, ಚಿತ್ರಮಾಲಿಕೆಗಳು ಸಾಲದು ಅಂತ.” " ಸರು ಆಧಿವೇಶನದಲ್ಲಿ ನಿನ್ನ ಪಾತ್ರ. ಅರಮನೆ ಔತಣ, ಆನ್‌ಗೆ ನಿನ್ನ ಪ್ರಯಾಣ. ಮಹಾ ಅರ್ಚಕನ ಜತೆ ನೀನು ರಾಜಧಾನಿಗೆ ವಾಪಸಾ ಗೋದು ಇದನ್ನೆಲ್ಲ ಚಿತ್ರಿಸಬೇಕೂಂತ ಚಿತ್ರಕಾರನಿಗೆ ಆದೇಶ ಕಳಿಸ್ತೇನೆ.” « ಸಾಟಿ ಇಲ್ಲದ ಔದಾರ್ಯ, ಪೆರೋನ ಗೋರಿಯಲ್ಲಿ ಬಿಡಿಸಬೇಕಾದ ಚಿತ್ರಗಳು ಯಾವುವು ಅನ್ನೋದು ನಿಷ್ಕರ್ಷೆ ಆಗಿದೆಯಂತಲ್ಲ ? ಕೆಲಸವೂ ಶುರುವಾಗಿದೆ. ಅಂತ ಕೇಳ್ದೆ, ಪೆರೋನ ಪರಿವಾರದ ಚಿತ್ರಮಾಲಿಕೆಯಲ್ಲಿ ಮಹಾ ಪ್ರಭುವಿನ ದಾಸ ಈ ಸಣಕಲ ಹೆಖ್ವೆಟ್‍ನನ್ನೂ ಸೇರಿಸು ನೋಡೋಣ.” ಆಗಲಿ,ಹೆಖ್ವೆಟ್‍. ಪೆರೋನ ಜತೆ ನೀನೂ ಚಿರಾಯುವಾಗ್ತೀಯ.... ಮಹಾಪ್ರಭು ಖಂಡಿತ ಬೇಡ ಅನ್ನಲಾರರು. ಬರ್ತೇನೆ. ನೀನು ಸಿದ್ಧವಾಗೋದ