ಪುಟ:Mrutyunjaya.pdf/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೩೪೧

ನೂರು బుಟ್ಟಿ ಹಣ್ಣುಗಳು. ಅದು ಹೆಖ್ವೆಟ್ ನ ಬಯಕೆ. అಷ್ಟು ಬುಟ್ಟಿಗಳನ್ನು ಗೋರಿಯೊಳಗಿಡಬೇಕು-ಆಗರ್ಭ ಶ್ರೀಮಂತರು ಮಾಡುವ ಹಾಗೆ. ಇಷ್ಟನ್ನು ಕೊಳ್ಳಲು ಅಪಾರ ಸಂಪತ್ತೇನೂ ಬೇಡ. ಆದರೆ ಮಂಚಕ್ಕೂ ಪೀಠ ಪಲ್ಲಕಿಗೂ ಒಂದಿಷ್ಟು ಬಂಗಾರದ ತಗಡು ? ಬದುಕಿದಾಗ, ಆ ಸುಖ ಇರಲಿಲ್ಲ. ಸತ್ತಮೇಲೆ ಯಾಕಿರಬಾರದು ?

'ಬೆಳಕಿಗೆ ಆಗಮನ' ಪುಸ್ತಕ ಬೇಕು. ಲಿಪಿಗಳ ಮೇಲೆ ಬಂಗಾರದ ಪುಡಿ ಉದುರಿಸಿ ಮಾಡಿದ ಕೆಲವು ಪುಸ್ತಕಗಳು ಮಹಾ ಮಂದಿರದಲ್ಲಿ ಇವೆಯಂತೆ. ಆ ಅಮೂಲ್ಯ ದಾಸ್ತಾನಿನಿಂದ ಒಂದನ್ನು ತಾನು ಪಡೆಯಬೇಕು. ಇಷ್ಟಾದರೆ ಆಯಿತೆ? (ದೋಣಿ ಎದ್ದಕ್ಕಿದ್ದಂತೆ ಜೋರಾಗಿ ಅಲು ಗಾಡಿತು.ಹೆಖ್ವೆಟ್ ಎಡ ಅಂಗೈಯಿಂದ ಪೀಠದ ಕೈಯನ್ನು ಭದ್ರವಾಗಿ ಹಿಡಿದುಕೊಂಡ. ಬಲಗೈಯಲ್ಲಿದ್ದ ಮದಿರೆಯ ಹೂಜೆಯನ್ನು ಎದೆಗೆ ಆತು ಹಿಡಿದ. ಗಟ್ಟಿಯಾಗಿ ಕೂಗಿ ಕೇಳಿದ : “ಏನು ಮಾಡ್ತಿದೀರೋ ? ಏನ್ರೊ ಅದು ?” ಆಸ್ಪಷ್ಟ ಪದಗಳು. “ಏನಿಲ್ಲ ಸಾಮಿ, ನೀರ ಕೆಳಗಿನ ಮರಳ ದಿಬ್ಬ" ಎಂದು ನುಡಿದು ದೋಣಿಕಾರ ತನ್ನ ಅಂಬಿಗರಿಗೆ ಛೀಮಾರಿ ಹಾಕಿದ:"ಕುಡಿದಿ ದೀರೇನ್ರೋ? ಕತ್ತೆಗಳ್ರಾ! ನೋಡ್ಕೋಂಡು ಹುಟ್ಟ ಹಾಕ್ರೋ....”) ನದೀ ಪ್ರವಾಸದಲ್ಲಿ ಸಾವು ಒಳ್ಳೆಯದಲ.ಒಂದು ರೀತಿಯ ಅಪಮೃತ್ಯು. ನೀರು ತುಂಬಿ ಮೈ ಊದಿಕೊಳ್ತದೆ. ('ಸ್ವಲ್ಪ ಮಾತ್ರ ಊದಿಕೊಂಡರೆ ನೋಡೋದಕ್ಕೆ ಚೆನಾಗಿದ್ದೀತು.') ಶವರಕ್ಷಣೆಯ ವಿಷಯದಲ್ಲಿ ಮಾತ್ರ ಲೆಕ್ಕಾಚಾರ ಮಾಡಬೇಡ ಅಂತ ಮಗನಿಗೆ ಹೇಳಬೇಕು. ಪೆರೋ ಸತ್ತಾಗ ಯಾವ ಲೇಪನ ಸಾಮಗ್ರಿ ಬಳಸುತ್ತಾರೋ ಅದೇ ತನಗೂ. ಮೂಗಿನ ಹೊಳ್ಳೆಗಳ ಒಳಕ್ಕೆ ತಾಮ್ರದ ಕೊಕ್ಕೆ ಹಾಕಿ, ಮೆದುಳನ್ನು ಹೊರಗೆ ತೆಗೀತಾರೆ (ಹೇಗಿತ್ತದೋ ತನ್ನ ತೀಕ್ಷ್ಣ ಬದ್ಧಿಯ ಮೆದುಳು ?) ಪಾರ್ಶ್ವದಲ್ಲಿ ಚೂಪು ಗಲ್ಲಿನಿಂದ ಗೀರು ಹಾಕಿ ಕುಯ್ದು ಕರುಳುಗಳನ್ನು ಹೊರಕ್ಕೆ ಎಳೀತಾರೆ. ಒಳ ಭಾಗವನ್ನು ತಾಳೆ ಸುರೆಯಿಂದ ತೊಳೆದು,ಸುಗಂಧ ದ್ರವ್ಯ ತುಂಬಿ ಹೊಲೀತಾರೆ.ಹೊರತೆಗೆದ ಮೆದುಳಿಗೊಂದು ಜಾಡಿ,ಕರುಳಿಗೊಂದು ಜಾಡಿ.ಆ ಮೇಲೆ ಇಡೀ ಶರೀರವನ್ನು ಲೇಪನ ರಸಾಯನದಲ್ಲಿ ಎಪ್ಪತ್ತು ದಿನ ಅದುತ್ತಾರೆ. ಆ ಅವಧಿ ಮುಗಿದೆಲೆ ಶರೀರವನ್ನು ತೆಗೆದು, ಸೆಣಬಿನ ಪಟ್ಟಿಯಿಂದ ಗೋಂದು