ಮೃತ್ಯುಂಜಯ ೩೪೩ ಹೂಜೆಯು ಕೈಯಿಂದ ಕೆಳಕ್ಕೆ...(ಸೇವಕ ಅದನ್ನುಹಿಡಿದುಕೊಂಡ.... ಕಣ್ಣೆವೆಗಳು ಮುಚ್ಚಿಕೊಳ್ಳುತ್ತಿವೆ.)
ಸಾವು ? 'ಥೂ ಮರುಳೆ ! ಇದು నిದ್ದೆ'....
ಎಷ್ಟೋ ಹೊತ್ತಿನ ಬಳಿಕ ಗಡಬಡಿಸಿ ಎದು ಹೆಖ್ವೆಟ್ ಕೂಗಾಡಿದ : “ಏನ್ರೋ ಅದು ? ಸಾಯಿಸ್ತೀರೇನ್ರೋ.” ಎಳೆಯ ಲಿಪಿಕಾರ ಅಂದ: " ಡಿಕ್ಕಿ ಹೊಡೆದದ್ದಲ್ಲ-ದಂಡೆ ಮುಟ್ಟಿದ್ದು. ಅರ್ಧದಾರಿ ಆಯ್ತು. ಮರಗಳಿವೆ,ನೆರಳೀದೆ.ಊಟ ಮುಗಿಸಿ ಮುಂದಕ್ಕೆ ಪ್ರಯಾಣ.”
ಹೆಖ್ವೆಟ್ ಕಣ್ಣು ಗಳನ್ನು ಮುಚ್ಚುತ್ತ ತೆರೆಯುತ್ತ, ಮುಚ್ಚುತ್ತ ತೆರೆಯುತ್ತ, ರಣರಣ ಬಿಸಿಲನ್ನು ನೋಡಿದ.ಪೀಠದಿಂದ ನಿಧಾನವಾಗಿ ಎದ್ದು, ಅಡಿ ತಪ್ಪದಂತೆ ಎಚ್ಚರ ವಹಿಸುತ್ತ, ದೋಣಿಕಾರ ನೀಡಿದ ಕೈಯನ್ನು ಆಧರಿಸಿ, ನದಿಯ ಅಂಚಿನ ಒದ್ದೆ ಮರಳಿನ ಮೇಲೆ ಪಾದರಕ್ಷೆಯನ್ನು ಊರಿದ.
* * * *
ಪಶ್ಚಿಮ ದಿಕ್ಕಿಗೆ ಧಾವಿಸುತ್ತಿದ್ದ ರಾ ನ ಕಿರಣಗಳು ತಣ್ಣಗಾಗುವುದಕ್ಕೆ ಮೊದಲೆ ರಾಜನಾವೆ ಆನ್ ನಗರಿಯ ದೋಣಿಕಟ್ಟೆಯನ್ನು ತಲಪಿತು.ಸಣ್ಣ ಕಟ್ಟೆ. ದೂರದಲ್ಲಿ ಮಹಾ ಅರ್ಚಕನ ನಾವೆಯನ್ನು ಕಟ್ಟಿತ್ತು.ಒಂದೆರಡು ಹೇರು ದೋಣಿಗಳೂ ಇದ್ದುವು. ಹೆಖ್ವೆಟ್ ದೋಣಿಯಿಂದ ಇಳಿಯಲಿಲ್ಲ. ಎಳೆಯ ಲಿಪಿಕಾರ ಕಾವಲು ಭಟರಿಗೆ ತಿಳಿಯ ಹೇಳಿದ:
“ ಇವರು ಪೆರೋನ ಹಿರಿಯ ಸಲಹೆಗಾರರು-ಹೆಖ್ವೆಟ್. ಓಡಿಹೋಗಿ ಆನ್ ನಗರಾಧಿಕಾರಿಗೆ ತಿಳಿಸಿ ಬಿಡಿ. ಆತ ಪಲ್ಲಕಿ ತಗೊಂಡು ಬರಲಿ."
ಎರಡು ಮೂರು ವರ್ಷ ಹಿಂದೆ ಹೆಖ್ವೆಟ್ ಅಲ್ಲಿಗೆ ಬಂದಿದ್ದ.ಸಕುಟುಂಬವಾಗಿ, ಯಾತ್ರಾರ್ಥಿಯಾಗಿ ಇಳಿದು ನಡೆದೇ ರಾಜಗೃಹಕ್ಕೆ ಹೊಗಬಹುದು. ಆದರೆ ರಾಜ ಪ್ರತಿನಿಧಿ ಹಾಗೆ ಮಾಡಿದರೆ ಆತನ ಬಗೆಗೆ ಏನು ಗೌರವ ಉಳಿದೀತು?
ಮೂಲೆಯಲ್ಲಿ ನಿಂತಿದ್ದ ಹೆಖ್ವೆಟ್ ನ ಜತೆ ಬಂದಿದ್ದ ಎಳೆಯ ಲಿಪಿಕಾರ