ಪುಟ:Mrutyunjaya.pdf/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪೪ ಮೃತ್ಯುಂಜಯ

ಕಿರು ಯೌವನಕ್ಕೆ ಕಾಲಿರಿಸಿದ್ದ ದೇವಸೇವಕನೊಬ್ಬ ಕಟ್ಟೆಯ ಕಡೆಗೆ ಬರುತ್ತಿದ್ದುದನ್ನು ಕಂಡ. 'ಇವನು ಯಾವನೋ ಪರಿಚಿತ' ಎನಿಸಿತು. ಇನ್ನೂ ಹತ್ತಿರ ಬಂದಾಗ, ಗುರುತು ಹಿಡಿದ. ರಾಜಧಾನಿಯವನು. ದೇವಸೇವಕನಾಗುವುದಕ್ಕೆ ಮುಂಚೆ ಮಹಾಮಂದಿರದ ಶಾಲೆಯಲ್ಲಿ ಅವನ ಸಹಪಾಠಿಯಾಗಿದ್ದವನು.

"ಎಲ್ಲಾ,ಇಲ್ಲಿಗೆ ಯಾಕೆ ಬಂದೆ ?” -ಈತ ಕೇಳಿದ.

" ಅಸ್ವಸ್ಥ ಸಂಬಂಧಿಕನನ್ನು ಕಾಣೋದಕ್ಕೆ...” _ಎಂದ ಆತ.

“ ನಿನಗೆ ಯಾವ ಸಂಬಂಧಿಕ ಈ ಊರಲ್ಲಿ ?” “ ಅದನ್ನೆಲ್ಲ ಕೇಳಬಾರದು. ಹೇಳಿದ್ದನ್ನು ನಂಬಿ ಸುಮ್ಮನಿದ್ದರೆ ಯಾರಿಗೂ ತೊಂದರೆಯಾಗೋದಿಲ್ಲ."

ದೇವಸೇವಕ ಕುತೂಹಲದಿಂದ ಹೆಖ್ವೆಟ್ ನನ್ನು ನೋಡಿದ.

ಲಿಪಿಕಾರ, “ಅವರು ಹೆಖ್ವೆಟ್” ಎಂದ. " ಗೊತ್ತು.” "ಹ್ಯಾಗೆ?" “ ಮಹಾಮಂದಿರಕ್ಕೆ ಅವರು ಬಂದಾಗ ನೋಡಿದ್ದು.” ಹೆಖ್ವೆಟ್ ಥಟ್ಟನೆ ತಿರುಗಿ ಆ ದೇವಸೇಕನನ್ನು ನೋಡಿ, ಬಾ ಇಲ್ಲಿ," ಎಂದ. ಸ್ನೇಹಿತರಿಬ್ಬರಿಗೂ ಅಚ್ಚರಿ. ಮುದುಕನಿಗೆ ತಮ್ಮ ಸಂಭಾಷಣೆ ಕೇಳಿಸಲಾರದು ಎಂದು ಕೊಂಡಿದ್ದರು. ಈಗ....

ಎಳೆಯ ಲಿಪಿಕಾರ ಹೆಖ್ವೆಟ್ ನ ಬಳಿ ಸರಿದ. " ಅವನನ್ನು ಕರಿ,” ಎಂದ ಹೆಖ್ವೆಟ್. ಇನ್ನೊಬ್ಬ ಹತ್ತಿರ ಬಂದಾಗ ಆತ ಕೇಳಿದ: " ಮಹಾ ಅರ್ಚಕರನ್ನು ನೋಡೋಕೆ ಈ ಊರಿಗೆ ಬಂದಿದ್ದೆಯಾ? " ದೇವಸೇವಕನಿಗೆ ಗಾಬರಿ. ಹೆಖ್ವೆಟ್ ನಾವೆಯ ಒಡಲಿನಿಂದ ಎತ್ತಿ ಹಿಡಿದಿದ್ದ ತನ್ನ ಪದವಿ ದಂಡದ ಕಡೆಗೊಮ್ಮೆ ನೋಡಿ, ಗುಡುಗಿದ: “ ನಾನು ಯಾರು ಗೊತ್ತಲ್ಲ?” "ಗೊತ್ತು,ಸ್ವಾಮಿ.ಮಂದಿರದ ಕೆಲಸ.ಮೊನ್ನೆ ರಾತ್ರಿ