ಪುಟ:Mrutyunjaya.pdf/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪೮ ಮೃತ್ಯುಂಜಯ

ವಿಜಯಿಯ ಮಂದಹಾಸವನ್ನು ಸೂಸುತ್ತ ಹೆಖ್ವೆಟ್ ಎದ್ದು, ದೋಣಿ ಕಾರನ ನೆರವು ಸ್ವೀಕರಿಸಿ, ಪದವಿ ದಂಡದೊಡನೆ ನಾವೆಯಿಂದ ಇಳಿದು ಪಲ್ಲಕಿ ಯತ್ತ ಸಾಗಿದ.

ರಾಜಗೃಹ ತಲಪಿದೊಡನೆ ಹೆಖ್ವೆಟ್ ಮಹಾ ಅರ್ಚಕನ ಭೇಟಿಗೆ ಹೋಗಬಹುದು ಎಂದು ನಗರಾಧಿಕಾರಿ ಸೆರ್ಕೆಟ್ ಭಾವಿಸಿದ್ದ. ಆದರೆ ಮುದುಕ ಅಂಥ ಆತುರ ತೋರಲಿಲ್ಲ. ಬದಲು, ಶೌಚಗೃಹವನ್ನು ಸಂದರ್ಶಿಸಿ ಬಂದು,ರಾಜಗೃಹದ ಪಡಸಾಲೆಯಲ್ಲಿ ಸುಖಾಸೀನನಾಗಿ, ಸೆರ್ಕೆಟ್ ನನ್ನು ಹತ್ತಿರಕ್ಕೆ ಕರೆದ.

"ರಾ ಮಂದಿರದಲ್ಲಿ ಭಾರೀ ಧಾರ್ಮಿಕ ಜಿಜ್ಞಾಸೆ ನಡಿತೀದೆ-ಅಲ್ಲವಾ?"

"ಹ್ಞ. ಮಹಾ ಅರ್ಚಕರು ಬಂದಾಗಿನಿಂದ-ಸುಮಾರು ನಾಲ್ಕು ತಿಂಗಳಿಂದ-ಈ ನಗರಿಗೆ ಬರಹೋಗುವವರ ಸಂಖ್ಯೆ ಹೆಚ್ಚಿದೆ.”

"ಧಾರ್ಮಿಕ ಜಿಜ್ಞಾಸೆಗೆ ಬರೇ ದೇವಸೇವಕರೇ ಬರಬೇಕೆಂಬನಿಯಮ, ಇಲ್ಲ.”

“ ಹಾಗೇನೂ ఇల్ల..."

" ಬಂದವರಿಗೆಲ್ಲ ರಾಜಗೃಹದಲ್ಲಿ ವಸತಿ ಏರ್ಪಾಟು ಮಾಡಿ ಮಾಡಿ ದಣಿದಿದ್ದೀಯೇನೊ ?”

" ಸ್ವಾಮಿ, ಮಹಾ ಅರ್ಚಕರು ಒಮ್ಮೆ ರಾಜಧಾನಿಗೆ ವಾಪಸಾದರೆ ಸಾಕು అనిಸಿ ಬಿಟ್ಟಿದೆ.”

" ಮುಖ್ಯ ಪಟ್ಟಣದಿಂದ ಮಹಾ ಅರ್ಚಕನ ಭೇಟಿಗೇಂತ ಪ್ರಾಂತಪಾಲ ಇಲ್ಲಿಗೆ ಬರಲಿಲ್ಲವಾ? "

“ ಇಲ್ಲ.”

“ ಇಲ್ಲಿ ನಡೆಯೋದನ್ನೆಲ್ಲ ರಾಜಧಾನಿಗೆ ನೀನು ವರದಿ ಮಾಡಿಲ್ಲವಂತೆ.”

"ನನ್ನ ಲಿಪಿಕಾರ ಏನು ಬರೆದುಕೊಟ್ಟರೂ ಮಂದಿರದಲ್ಲಿ ಇರುವವರಿಗೆಲ್ಲ ಗೊತ್ತಾಗ್ತದೆ.ಅಲ್ದೆ, ಏನು ಬರೀಬೇಕು ಏನು ಬರೀಬಾರ್‍ದು ಅನ್ನೋದೂ ನನಗೆ ತಿಳೀದು....ಮೇಲಿನವರಿಗೆ ಸಂಬಂಧಪಟ್ಟದ್ದು. ನಾನು ಕೈಹಾಕೋದು ಸರೀಯಾ?" ರಾಜಗೃಹದ ಪಡಸಾಲೆಯನ್ನೂ ಜಗಲಿಯನ್ನೂ ನೋಡಿ ಹೆಖ್ವೆಟ್ ಅಂದ:

" ಇವತ್ತಷ್ಟೇ ತೊಳೆಯೋದು ಬಳೆಯೋದು ಮಾಡಿದ್ದೀರಿ. ನಿನ್ನೆ ರಾತ್ರೆ