ಪುಟ:Mrutyunjaya.pdf/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೩೪೭ ಯಾರು ಮಲಗಿದ್ದರಪ್ಪ ಇಲ್ಲಿ ?” "ಹೇಳಬಾರದು ಅಂದಿದ್ರು. ಆದರೆ ನಾನು ಸ್ವಾಮಿನಿಷ. ಹೇಳ್ತೇನೆ. ಟೆಹುಟಿ ಮತ್ತು ಬಕಿಲ.” “ ಈಗೆಲ್ಲಿದ್ದಾರೆ ಅವರು ?” " ಭೂಮಾಲಿಕರ ವಸತಿ ಗೃಹದಲ್ಲಿ.” "ನಾನು ಕೇಳೋ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡು. ಅದರಿಂದ ನಿನಗೆ ಒಳ್ಳೇದಾಗ್ತದೆ. ದೇವರೂ ಮೆಚ್ತಾನೆ. ಇಲ್ಲಿ ಮಹಾ ಅರ್ಚಕರ ಭೇಟಿಗೆ ಯಾರು ಯಾರು ಬರ್‍ತಾರೆ ?” “ ಬೇರೆ ಬೇರೆ ಪ್ರಾಂತಗಳ ಭೂಮಾಲಿಕರು. ಬೇರೆ ಬೇರೆ ಮಂದಿರಗಳ ಅರ್ಚಕರು. ಒಬ್ಬಿಬ್ಬರು ಪ್ರಾಂತಪಾಲರೂ ಬಂದದ್ದುಂಟು. ಹೊರಗಿನಿಂದ ಬಂದವರು ಮಹಾ ಅರ್ಚಕರ ಜತೆ ಇದ್ದಾಗ ಒಮ್ಮೆ ನಾನು ಅಲ್ಲಿಗೆ ಹೋದೆ. 'ಸೆರ್ಕೆಟ್, ನೀನು ರಾಜಗೃಹದಲ್ಲಿರು' -ಅಂದ್ರು ಹೇಪಾಟ್. ಬಂದ್ಬಿಟ್ಟೆ. ಅಲ್ಲಿದ್ದು ನನಗೆ ಆಗಬೇಕಾದ್ದೇನು? ಅಲ್ದೆ, ಅವರ ಧರ್ಮಜಿಜ್ಞಾಸೆ ನನಗೆ ಅರ್ಥವಾಗೋದೂ ಇಲ್ಲ.” " ಟೆಹುಟಿ ಜತೆ ಬೇರೆ ಯಾರಿದ್ದಾರೆ ?" " ನಾಲ್ಕೈದು ದಿವಸದ ಹಿಂದೆಯಷ್ಟೇ ನುಟ್ ಮೋಸ್, ಸೆತೆಕ್ ನಖ್ತ್ ಸೆನ್ ಉಸರ್‍ಟ್ ಅಂತ ಮೂವರು ನೀರಾನೆ ಪ್ರಾಂತದ ಭೂಮಾಲಿಕರು ಬಂದ್ರು...ರಾಜಧಾನಿಯಿಂದ. ಇನ್ನೂ ಇಲ್ಲಿಯೇ ಇದ್ದಾರೆ.” "ಹೇಪಾಟ್ ಆಗಾಗ್ಗೆ ಮೂರು ದಿನಗಳದ್ದೋ ಆರು ದಿನಗಳದ್ದೋ ಅಖಂಡ ಪೂಜೆ ಮಾಡ್ತಾರಂತಲ್ಲ?” “ಅವರ ಹೆಸರಿನಲ್ಲಿ ಬೇರೆ ದೇವಸೇವಕರು ಮಾಡ್ತಾರೆ. ಆ ಸಮಯದಲ್ಲಿ ಮಹಾ ಅರ್ಚಕರು ಗೋಪ್ಯವಾಗಿ ಅನ್ ನಗರಿಯಿಂದ ಹೊರಗೆ ಪ್ರವಾಸ ಹೋಗಿ ಬರ್‍ತಾರೆ.” " ಪ್ರವಾಸ ? ಯಾವ ಕಡೆಗೋ ?" " ಒಂದು ಸಲ ಅವರು ಹೋದದ್ದು ಈಶಾನ್ಯ ಗಡಿಗೆ. ನಮ್ಮ ದಂಡು ಇದೆಯಲ್ಲ ಅಲ್ಲಿಗೆ." " ಅಮೆನೆಮೊಪೆಟ್ ಸೇನಾಪತಿ-ಅಲ್ಲವಾ ?”